Delhi Election 2025: ಕಾಂಗ್ರೆಸ್ 2.0 ಪ್ರಣಾಳಿಕೆ: ದೆಹಲಿಯಲ್ಲಿ ಕರ್ನಾಟಕ ಮಾದರಿ ಭರವಸೆ!
Delhi Election 2025: ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನೊಂದು ವಾರವೂ ಬಾಕಿ ಉಳಿದಿಲ್ಲ. ದೆಹಲಿ ವಿಧಾನಸಭೆ ಚುನಾವಣೆಗೆ ಕೊನೆಯ ಹಂತದ ಹಣಾಹಣಿ ಶುರುವಾಗಿದ್ದು. ದೆಹಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೇ ಹಂತದ ಭರ್ಜರಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 5ಕ್ಕೆ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಫೆಬ್ರವರಿ 8ಕ್ಕೆ ಪ್ರಕಟವಾಗಲಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಮೊದಲ ಹಂತದ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದು ಎರಡನೇ ಹಂತದ ಚುನಾವಣೆ ಪ್ರಣಾಳಿಕೆಯಾಗಿದೆ. ಕಾಂಗ್ರೆಸ್ ಪಕ್ಷ ನಾಯಕ ಜೈರಾಮ್ ರಮೇಶ್ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ದೆಹಲಿ ಚುನಾವಣೆಗೆ ಭರ್ಜರಿ ಭರವಸೆಯೊಂದನ್ನು ಕೊಟ್ಟಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ನಾವು ದೆಹಲಿ ಜನರಿಗೆ ಕೇವಲ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸುತ್ತಿಲ್ಲ. ಗ್ಯಾರಂಟಿ ಎಂದರೆ ಕೇವಲ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲ. ದೆಹಲಿಯಲ್ಲಿ ಜನ ವ್ಯಾಪಾರ ಹಾಗೂ ಒಳ್ಳೆಯ ಜೀವನ ನಡೆಸುವುದು ಸಹ ಗ್ಯಾರಂಟಿಯೇ ಆಗಿದೆ. ನಾವು ದೆಹಲಿ ವಾಯುಮಾಲಿನ್ಯ ತಗ್ಗಿಸುವ ಬಗ್ಗೆಯೂ ನಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
ದೆಹಲಿಯಲ್ಲಿ ನಾವು ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದ್ದೇವೆ. ಇದೀಗ ದೆಹಲಿಯಲ್ಲಿ ವ್ಯಾಪಾರ ಹಾಗೂ ವ್ಯವಹಾರ ಮಾಡುವುದು ಸುಲಭದ ವಿಷಯವಲ್ಲ. ಇಲ್ಲಿ ಉಸಿರಾಡುವುದೇ ಸವಾಲು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದೆ. ಆದರೆ, ದೆಹಲಿಯ ವಾಯುಮಾಲಿನ್ಯ ವಿಷಯವನ್ನು ಬಿಜೆಪಿ ಹಾಗೂ ಎಎಪಿ ಪಕ್ಷಗಳು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಎರಡನೇ ಹಂತದ ಚುನಾವಣೆ ಪ್ರಣಾಳಿಕೆ
* ದೆಹಲಿಯಲ್ಲಿ ಎಲ್ಲಾ ಮಾದರಿ ಗುತ್ತಿಗೆ ಕೆಲಸಗಳನ್ನು ಕೊನೆಗೊಳಿಸಲಾಗುತ್ತದೆ. ಎಲ್ಲರನ್ನೂ ಕಾಯಂ ಮಾಡಲಾಗುತ್ತದೆ.
* ದೆಹಲಿಯ ಪೂರ್ವಾಂಚಲ್‌ಗೆ ಹೊಸ ಸಚಿವಾಲಯವನ್ನು ಸ್ಥಾಪನೆ ಮಾಡಲಾಗುತ್ತದೆ.
* ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ.
* ದೆಹಲಿಯಲ್ಲಿ ಕರ್ನಾಟಕ ಮಾದರಿ 100 ಇಂದಿರಾ ಕ್ಯಾಂಟೀನ್ ಸ್ಥಾಪನೆ
* ಪಿಂಚಣಿ ಮೊತ್ತ ಹೆಚ್ಚಳ ಈಗ ಇರುವ 2500ರಿಂದ 5000 ಸಾವಿರ ರೂ.ಗೆ ಹೆಚ್ಚಳ
* ವಿಧವೆಯರ ಹೆಣ್ಣುಮಕ್ಕಳ ಮದುವೆಗೆ 1.1 ಲಕ್ಷ ರೂ.
* ದೆಹಲಿಯಲ್ಲಿ ಜಾತಿ ಗಣತಿ ನಡೆಸಲಾಗುವುದು.
* ದೆಹಲಿಯ ಎಲ್ಲಡೆ 24*7 ಔಷಧಾಲಯ ಸ್ಥಾಪನೆ
* ದೆಹಲಿಯಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿ.
* ದೆಹಲಿಯಲ್ಲಿ 700 ಸಾರ್ವಜನಿಕ ಲೈಬ್ರರಿಗಳ ಸ್ಥಾಪನೆ.
* ದೆಹಲಿಯಲ್ಲಿ ಸ್ಲಂಗಳ ಅಭಿವೃದ್ಧಿ ಅಥವಾ ಅನಧಿಕೃತ ಬಡಾವಣೆಗಳಲ್ಲಿ ಹಕ್ಕುಪತ್ರ ವಿತರಣೆ.
* ಯಮುನಾ ನದಿಗೆ ಶುದ್ಧೀಕರಿಸಿದ ನೀರು ಮಾತ್ರ ಸೇರುವಂತೆ ಯೋಜನೆ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ 2.0 ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟಿದೆ.












Click it and Unblock the Notifications