Delhi BJP Manifesto 2025: ಬಿಜೆಪಿ ಪ್ರಣಾಳಿಕೆ ಪ್ರಕಟ: ₹500 ಸಬ್ಸಿಡಿ, ಮಾಸಿಕ ₹2,500 ನೆರವು, ಪ್ರಮುಖ ಅಂಶಗಳು
ನವದೆಹಲಿ, ಜನವರಿ 17: ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಿಜೆಪಿಯು ಇಂದು ಶುಕ್ರವಾರ ವಿವಿಧ ಭರವಸೆಗಳು ಇರುವ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಜೆ.ಪಿ ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಮಾಸಿಕ ₹2,500 ನೆರವು ನೀಡುವು ಜೊತೆಗೆ ಮಹತ್ವದ ಭರವಸೆಗಳನ್ನು ನೀಡಲಾಗಿದೆ. ಮಹಿಳೆ ಮತ್ತು ಯುವಕರನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಲಾಗಿದೆ.
ದೆಹಲಿ ವಿಧಾನಸಭಾ ಚುನಾವಣೆಗೆ ಪ್ರಯುಕ್ತ ಇಂದು ದೆಹಲಿಯಲ್ಲಿ ಜನವರಿ 17ರಂದು ಸುದ್ದಿಗೋಷ್ಠಿ ನಡೆಸಿದರು. "ನಮ್ಮ 'ಸಂಕಲ್ಪ ಪತ್ರ'' ಹೆಸರಿನಲ್ಲಿ ದೆಹಲಿ ಜನರಿಗಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಳಿಕ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಕುರಿತು ವಿವರಿಸಿದರು.

"ನಮ್ಮ 'ಸಂಕಲ್ಪ ಪತ್ರ'ವು ದೆಹಲಿಯ ಅಭಿವೃದ್ಧಿಗೆ ಅಡಿಪಾಯವಾಗಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಕಲ್ಯಾಣ ಯೋಜನೆಗಳು ಮುಂದುವರಿಸುತ್ತೇವೆ. ಬಿಜೆಪಿ ದೆಹಲಿಯಲ್ಲಿ ಅಧಿಕಾರ ಹಿಡಿದರೆ 'ಮಹಿಳಾ ಸಮೃದ್ಧಿ ಯೋಜನೆ' ಅಡಿಯಲ್ಲಿ ದೆಹಲಿಯ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಆರ್ಥಿಕ ನೆರವು ಕೊಡುತ್ತೇವೆ ಎಂದು ಘೋಷಿಸಿದರು.
ಇನ್ನೂ ದೆಹಲಿಯಲ್ಲಿ ಗೃಹ ಬಳಕೆಯ LPG ಸಿಲಿಂಡರ್ ಉಯೋಗಿಸುವ ಎಲ್ಲರಿಗೂ 500 ರೂಪಾಯಿ ಸಬ್ಸಿಡಿ ನೀಡಲಾಗುವುದು.
ದೆಹಲಿ ಬಿಜೆಪಿಯು ಸದ್ಯ ಘೋಷಿಸಿರುವ ಯೋಜನೆಗಳು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿರುವ ಹಾಲಿ ಯೋಜನೆಗಳ ಮಾದರಿಯಲ್ಲಿವೆ. ಮಧ್ಯಪ್ರದೇಶದ 'ಲಾಡ್ಲಿ ಬೆಹ್ನಾ ಯೋಜನೆ' ಮತ್ತು ಮಹಾರಾಷ್ಟ್ರದ 'ಲಡ್ಕಿ ಬೆಹೆನ್ ಯೋಜನೆ' ಗಳಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಂತಿವೆ ಎಂದು ವಿಶ್ಲೇಷಿಸಲಾಗಿದೆ.
ಬಿಜೆಪಿ ಪ್ರಣಾಳಿಕೆ ಇತರ ಅಂಶಗಳು, ಪಟ್ಟಿ
* ಗರ್ಭಿಣಿ ಮಹಿಳೆಯರಿಗೆ ರೂ.21,000 ನೀಡುವ ಭರವಸೆ
* ದೆಹಲಿಯಲ್ಲಿ ಕೇವಲ 5 ರೂಪಾಯಿಗೆ ಪೌಷ್ಟಿಕ ಊಟ ಒದಗಿಸಲು ಜೆಜೆ ಕ್ಲಸ್ಟರ್‌ಗಳಲ್ಲಿ 'ಅಟಲ್ ಕ್ಯಾಂಟೀನ್'ಗಳ ಸ್ಥಾಪನೆ
* 60 ರಿಂದ 70 ವರ್ಷದೊಳಗಿನ ಹಿರಿಯ ನಾಗರಿಕರಿಗೆ ₹2,500 ಹಾಗೂ 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ₹3,000 ಪಿಂಚಣಿ ನೀಡುವ ಭರವಸೆ ಸಹ ಜೆಪಿ ನಡ್ಡಾ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ 2020ರಲ್ಲಿ ನೀಡಿದ್ದ 500 ಶೇಕಡಾ 99ರಷ್ಟು ಭರವಸೆಗಳನ್ನು ಸಾಕಾರ ಮಾಡಿದ್ದೇವೆ. 2019 ರಲ್ಲಿ, ನಾವು 235 ಭರವಸೆಗಳನ್ನು ನೀಡಿದ್ದೇವೆ ಮತ್ತು 225 ಭರವಸೆಗ ಈಡೇರಿಸಿದ್ದೇವೆ. ಉಳಿದವು ಅನುಷ್ಠಾನ ಹಂತದಲ್ಲಿವೆ ಎಂದು ಹಳೆಯ ಭರವಸೆಗಳ ಅನುಷ್ಠಾನ ಕುರಿತು ಮಾಹಿತಿ ನೀಡಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications