Arvind Kejriwal: ನಾಳೆ ಸಂಜೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜೀನಾಮೆ: ನಾಳೆಯೇ ಹೊಸ ಮುಖ್ಯಮಂತ್ರಿ...
ಬೆಂಗಳೂರು, ಸೆಪ್ಟಂಬರ್ 16: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಗಳಿಂದ ಜಾಮೀನು ಪಡೆದು ಆರು ತಿಂಗಳು ಸೆರೆವಾಸ ಅನುಭವಿಸಿ ಹೊರ ಬಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡಲು ದಿನಾಂಕ, ಸಮಯ ಫಿಕ್ಸ ಆಗಿದೆ. ಹಾಗಾದರೆ ಯಾರು ದೆಹಲಿಯ ಮುಂದಿನ ಮುಖ್ಯಮಂತ್ರಿ, ಈ ರೇಸಿನಲ್ಲಿ ಯಾರಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಜಾಮೀನು ಸಿಕ್ಕು ಹೊರ ಬರುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾಳೆ ಮಂಗಳವಾರ (ಸೆಪ್ಟಂಬರ್ 17) ಸಂಜೆ 4.30ಕ್ಕೆ ರಾಜೀನಾಮೆ ನೀಡಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.

ಜೈಲಿನಿಂದ ಹೊರ ಬರುತ್ತಿದ್ದಂತೆ ಅಚ್ಚರಿ ನಿರ್ಧಾರ ಘೋಷಿಸಿದ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸ್ಥಾನ ತೆರವಾದ ಬಳಿಕ ಮುಂದಿನ ಸಿಎಂ ಯಾರು?. ಆ ಸ್ಥಾನಕ್ಕೆ ನಾಳೆಯೇ ಆಯ್ಕೆ ನಡೆಯಲಿದೆಯೇ ಎಂಬ ವಿಷಯಗಳ ಮೇಲೆ ಕುತೂಹಲ ಹೆಚ್ಚಾಗಿದೆ. ಹಾಗಾದರೆ ಸಿಎಂ ರೇಸಿನಲ್ಲಿ ಯಾರಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಮುಂದಿನ ಐದು ತಿಂಗಳಲ್ಲಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೂರದೃಷ್ಟಿಯ ಭಾಗವಾಗಿ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ. ಇಲ್ಲವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಬಹುದು. ಇದು ಚುನಾವಣೆ ವೇಳೆ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇದೆಲ್ಲ ಯೋಚಿಸಿದ ರಾಜೀನಾಮೆ ನೀಡುವುದಾಗಿ ಅವರು ಘೋಷಿಸಿದ್ದಾರೆ. ಅವರ ಈ ನಿರ್ಧಾರದಿಂದ ಹಲವುರಿಗೆ ಅಚ್ಚರಿ ಉಂಟಾಗಿದ್ದಂತು ಸುಳ್ಳಲ್ಲ.
ದೆಹಲಿ ಸಿಎಂ ರೇಸಿನಲ್ಲಿ ಯಾರಿದ್ದಾರೆ?
ದೆಹಲಿ ಸಿಎಂ ಅರವಿಂದ್ ಕೇಜ್ರವಾಲ್ ಅವರು ರಾಜೀನಾಮೆ ನೀಡಿದ ದಿನವೇ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ ಅಂತಲೂ ಹೇಳಲಾಗುತ್ತದೆ. ಇಲ್ಲವೇ ಇನ್ನೊಂದು ವಾರದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಹಾಗಿದ್ದರೆ ಸಿಎಂ ರೇಸಿನಲ್ಲಿ ಯಾರಿದ್ದಾರೆ?
* ಸಚಿವೆ ಅತಿಶಿ
ದೆಹಲಿಯ ಹಣಕಾಸುಮತ್ತು ಶಿಕ್ಷಣ ಸಚಿವಾಲಯ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿರುವ ಸಚಿವೆ ಅತಿಶಿ ಅವರು ಮುಖ್ಯಮಂತ್ರಿ ಸ್ಥಾನಕ್ಕೇರುವ ರೇಸಿನಲ್ಲಿ ಮೊದಲಿದ್ದಾರೆ. ಅಲ್ಲದೇ ದೆಹಲಿ ಸಿಎಂ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಅನುಪಸ್ಥಿತಿಯಲ್ಲಿ ಅತಿಶಿ ಅವರು ಸರ್ಕಾರಿ ಕೆಲಸಗಳನ್ನು ಮುಂದುವರೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಅವರು ಟ್ರಬಲ್‌ಶೂಟರ್ ಆಗಿ ಹೊರಹೊಮ್ಮಿದ್ದರು.
* ಸೌರಭ್ ಭಾರದ್ವಾಜ್
ಸಿಎಂ ಕೇಜ್ರಿವಾಲ್ ಅವರ ಆಪ್ತ ಸಹಾಯಕರಾದ ಸೌರಭ್ ಭಾರದ್ವಾಜ್ ಅವರು ಸಹ ಸಿಎಂ ರೇಸಿನಲ್ಲಿದ್ದಾರೆ ಎನ್ನಲಾಗಿದೆ. ಇವರು ಆರೋಗ್ಯ ಮತ್ತು ಕೈಗಾರಿಕೆಗಳು ಮತ್ತು ನಗರಾಭಿವೃದ್ಧಿ ಇಲಾಖೆ ನಿರ್ವಹಿಸಿದ ಅನುಭವ ಇದೆ.
* ಗೋಪಾಲ್ ರೈ
ಅರವಿಂದ್ ಕೇಜ್ರಿವಾಲ್ ಅವರ ಸಂಪುಟದ ಮತ್ತೊಬ್ಬ ಸದಸ್ಯರಾದ 2015 ರಿಂದ ಸಚಿವರಾಗಿರುವ ಗೋಪಾಲ್ ರೈ ಅವರ ಹೆಸರು ಈ ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿ ಒಬ್ಬರು. ಇವರು ಹೆಸರು ಸಹ ಕೇಳಿ ಬರುತ್ತಿದೆ.
* ಕೈಲಾಶ್ ಗಹ್ಲೋಟ್
ಕಂದಾಯ, ಕಾನೂನು, ಆಡಳಿತ ಸುಧಾರಣೆ, ಸಾರಿಗೆ, ನ್ಯಾಯ ಮತ್ತು ಶಾಸಕಾಂಗ ವ್ಯವಹಾರ ಸೇರಿದಂತೆ ಹಲವು ಸ್ಥಾನ ನಿಭಾಯಿಸಿರುವ ಕೈಲಾಶ್ ಗೆಹ್ಲೋಟ್ ಅವರು ಸಹ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬಂದ ಪ್ರಬಲ ಹೆಸರು ಇದಾಗಿದೆ.












Click it and Unblock the Notifications