Delhi Election 2025: ಚುನಾವಣೆ ಪ್ರಚಾರ ತೀವ್ರಗೊಳಿಸಿದ ಪಕ್ಷಗಳು: ಎಎಪಿ-ಬಿಜೆಪಿ ಪ್ಲಾನ್ ಏನು?
ದೆಹಲಿ, ಜನವರಿ 10: ರಾಷ್ಟ್ರ ರಾಜಧಾನಿ ನವದೆಹಲಿಯ ವಿಧಾನಸಭಾ ಚುಣಾವಣೆ ಕಣ ರಂಗೇರುತ್ತಿದೆ. ಹಿಡಿತ ಸಾಧಿಸಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ಪ್ರಬಲ ರಾಜಕೀಯ ಪಕ್ಷಗಳು ಪೈಪೋಟಿಗೆ ಪ್ಲಾನ್ ರೂಪಿಸುತ್ತಿವೆ. ಹೊಸ ವರ್ಷದಲ್ಲಿ ದೇಶದಲ್ಲಿ ಮೊದಲ ಚುನಾವಣೆ ನಡೆಯುತ್ತಿದೆ. ಚುನಾವಣೆ ದಿನಾಂಕ ಅಧಿಕೃತ ಘೋಷಣೆ ಆಗುತ್ತಿದ್ದಂತೆ ಪ್ರಚಾರ ಭರಾಟೆ ಜೋರಾಗಿದ್ದು, ಮುಂದಿನ ಮೂರು ವಾರಗಳಲ್ಲಿ(ಫೆಬ್ರವರಿ 5 ) ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಅಲರ್ಟ್ ಆಗಿವೆ.
ದೆಹಲಿಯಲ್ಲಿ ಕಳೆದ ಚುನಾವಣೆಯಲ್ಲಿ ಬಹುಮತದ ಮೂಲಕ ಸರ್ಕಾರ ರಚಿಸಿದ ಆಮ್ ಆದ್ಮಿ ಪಕ್ಷವನ್ನು ಈ ಬಾರಿ ಅಧಿಕಾರದಿಂದ ದೂರವಿಡಲು ಕಾಂಗ್ರೆಸ್, ಬಿಜೆಪಿ ಸಜ್ಜಾಗಿದೆ. ದೇಸದ ಅತ್ಯಂತ ಪ್ರಭಾವಶಾಲಿ ರಾಜಕೀಯ ಪಕ್ಷವಾಗಿರುವ ಕೇಂದ್ರ ಆಡಳಿತ ಬಿಜೆಪಿ ವಿರುದ್ಧ ಎಎಪಿ ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಭಾರೀ ಪ್ರಾಬಲ್ಯ ಸಾಧಿಸಿದೆ.

ಬಿಜೆಪಿ ಮಾತ್ರವಲ್ಲದೇ, 2013 ಮುನ್ನ ದೆಹಲಿಯಲ್ಲಿ ಹಿಡಿತ ಸಾಧಿಸಿದ ಕಾಂಗ್ರೆಸ್ ಸಹ ವಿಧಾನಸಭಾ ಕಣದಲ್ಲಿದೆ. ಆದರೆ ಒಬ್ಬೆ ಒಬ್ಬ ಸದಸ್ಯನನ್ನು ಪಕ್ಷ ಹೊಂದಿಲ್ಲ ಎಂಬುದು ಈ ಬಾರಿ ಪ್ರಬಲ ಪೈಪೋಟಿ ನೀಡಲು ಮತ್ತೊಂದು ಕಾರಣ ಎನ್ನಲಾಗಿದೆ. ಇದೆಲ್ಲ ಇತಿಹಾಸದಿಂದಾಗಿ 2025ರ ದೆಹಲಿ ಚುನಾವಣೆ ಪ್ರಮುಖ ಕೇಂದ್ರ ಬಿಂದುವಾಗಲಿದೆ.
ಮೂರನೇ ಭಾರಿ ಅಧಿಕಾರ ಹಿಡಿಯಲು ಎಎಪಿ ಯತ್ನ
ಕಳೆದ ಎರಡು ಬಾರಿ ದೆಹಲಿಯಲ್ಲಿ ರಾಜ್ಯ ಸರ್ಕಾರ ರಚನೆ ಮಾಡಿರುವ ಎಎಪಿ ಪಕ್ಷವು ಸಣ್ಣ ಪಕ್ಷವಾದರೂ ಸಹಿತ ಅದನ್ನು ಹಿಂದಕ್ಕೆ ಸರಿಸಿ ಈ ಬಾರಿ ಚುನಾವಣೆ ಗೆಲ್ಲುವುದು ಸಾಮಾನ್ಯ ವಿಷಯವಲ್ಲ. ಎರಡು ಭಾರಿ ಬೃಹತ್ ಪಕ್ಷಗಳ ವಿರುದ್ಧ ಎಎಪಿ ಗೆದ್ದು ಬೀಗಿದೆ.
ಮೂರನೇ ಬಾರಿ ಅಧಿಕಾರ ಪಟ್ಟಕ್ಕೇರುವ ತವಕದಲ್ಲಿರುವ ಆಮ್ ಆದ್ಮಿ ಪಕ್ಷವು ಈ ಬಾರಿಯ ಆಡಳಿತ ವಿರೋಧಿ ಅಲೆಯ ನಡುವೆ ಪ್ರಬಲ ಪಕ್ಷಗಳ ವಿರುದ್ಧ ಹೋರಾಡಬೇಕಿದೆ. ಆದರೆ ಎಎಪಿ ತಮ್ಮ ಸರ್ಕಾರದ ವಿರುದ್ಧ ಜನರಿಗೆ ನಕಾರಾತ್ಮಕ ಭಾವನೆ ಇಲ್ಲ. ಉತ್ತಮ ಆಡಳಿತ ನೀಡಿದ್ದೇವೆ ಅಂತಲೇ ಹೇಳಿಕೊಳ್ಳುತ್ತಿದೆ. ಎಎಪಿ ಜನಪ್ರಿಯ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಆಡಳಿತ, ಯೋಜನೆಗಳ ಮೇಲೆ ಗೆಲ್ಲಲಿದೆ ಅಂತಲೂ ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯಿಂದಲೇ ಬಿಜೆಪಿ ಚುನಾವಣೆ ಪ್ರಚಾರ!
ಚುನಾವಣೆ ಘೋಷಣೆ ಮೊದಲೇ ಬಿಜೆಪಿ ಕೆಲವು ತಿಂಗಳುಗಳಿಂದ ಚುನಾವಣೆ ಪ್ರಚಾರ ನಡೆಸಿತ್ತು. ಕೆಲವು ಕೇಂದ್ರ ವಿಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ಕಿರುಕುಳ, ತನಿಖಾ ಸಂಸ್ಥೆಗಳ ದುರಪಯೋಗ ಬಗ್ಗೆ ಆರೋಪಿಸಿವೆ. ಇತ್ತೀಚೆಗೆ ಎಎಪಿ ನಾಯಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಕೆಲವು ನಾಯಕರ ಬಂಧನ ವೇಳೆ ಹೀಗೆಯೇ ಆರೋಪಿಸಲಾಗಿತ್ತು.
ಸದ್ಯ ಎಲ್ಲ ಪಕ್ಷಗಳು ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬಿಜೆಪಿ ಪ್ರಚಾರವನ್ನು ದೆಹಲಿಯಲ್ಲಿ ಮುನ್ನಡೆಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಹಾಗೂ ಇನ್ನಿತರ ಪಕ್ಷಗಳು ಮತದಾರರನ್ನು ತಮ್ಮದೇ ಆದ ರೀತಿಯಲ್ಲಿ ಓಲೈಕೆಗೆ ಮುಂದಾಗಿದೆ. ಇನ್ನಿಲ್ಲದಂತೆ ಭರವಸೆಗಳನ್ನು ನೀಡುತ್ತಿವೆ.
ಮತ್ತೊಂದು ವಿಶೇಷವೆಂದರೆ ಬಿಜೆಪಿ ವಿರುದ್ಧ ಲೋಕಸಭಾ ಚುನಾವಣೆ ವೇಳೆ ರಚನೆಯಾದ 'ಇಂಡಿಯಾ' ಕೂಟದಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಎರಡು ಸದಸ್ಯ ಪಕ್ಷಗಳಾಗಿವೆ. ಇದೀಗ ಅವರೇ ಮುಖಾ ಮುಖಿ ಆಗುವ ಸಾಧ್ಯತೆ ಇದೆ. ಏಕೆಂದರೆ ಹರಿಯಾಣ ಚುನಾವಣೆ ವೇಳೆ ಕಾಂಗ್ರೆಸ್ ಎಎಪಿಗೆ ಅವಕಾಶ ನೀಡಲು ನಿರಾಕರಿಸಿತ್ತು. ದೆಹಲಿ ಚುನಾವಣೆಯಲ್ಲಿ ಎಎಪಿ ಜೊತೆಗೆ ಕೈ ಜೋಡಿಸುವುದಿಲ್ಲ ಎನ್ನಲಾಗಿದೆ.
ಇತ್ತ ಬಿಎಸ್‌ಪಿ ಪಕ್ಷವು ತಾನು ಸ್ವತಂತ್ರವಾಗಿ ದೆಹಲಿ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿಕೊಂಡಿದೆ. ಹೀಗೆ ಹತ್ತು ಹಲವು ಅಂಶಗಳೊಂದಿಗೆ ದೆಹಲಿ ಚುನಾವಣೆ ಕಣ ರಂಗೇರುತ್ತಿದೆ. ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.












Click it and Unblock the Notifications