ದೆಹಲಿಯಲ್ಲಿ ಭೂಕಂಪ: ಮನೆಯಿಂದ ಓಡಿ ಹೊರ ಬಂದ ಕೇಂದ್ರ ಸಚಿವ
ಬೆಂಗಳೂರು, ಅಕ್ಟೋಬರ್ 03: ಇಂದು ಮಂಗಳವಾರ ಮಧ್ಯಾಹ್ನ ವೇಳೆ ನವದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವೆಡೆ ಬಲವಾಗಿ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಮನೆಗಳು ಮತ್ತು ಕಚೇರಿಗಳ ಹೊರಗೆ ಧಾವಿಸಿದರು. ಈ ಪೈಕಿ ಸಾವಿರಾರು ಮನೆಗಳಿಂದ ಹೊರ ಓಡಿ ಬಂದವರ ಪೈಕಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇದ್ದರು.
ಮಾಂಡವಿಯಾ ಮತ್ತು ಸರ್ಕಾರಿ ಅಧಿಕಾರಿಗಳು ಅವರ ಕಚೇರಿಯಾದ ನಿರ್ಮಾಣ್ ಭವನದ ಹೊರಗೆ ಬಂದು ಆವರಣದಲ್ಲಿ ನಿಂತ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳ ಮಧ್ಯೆ ನಾಲ್ಕು ಭೂಕಂಪಗಳು ನೇಪಾಳದಲ್ಲಿ ಸಂಭವಿಸಿವೆ 25 ನಿಮಿಷಗಳ ಅಂತರದಲ್ಲಿ 4.6 ಮತ್ತು 6.2 ತೀವ್ರತೆಯ ಎರಡು, 15 ನಿಮಿಷಗಳ ನಂತರ 3.6 ತೀವ್ರತೆಯ ಮೂರನೇ ಒಂದು ಭೂಕಂಪನ ಸಂಭವಿಸಿದೆ. ಈ ವೇಳೆ ಜೋರು ಶಬ್ದ ಸಹ ಕೇಳಿ ಬಂದಿದೆ. ಭೂಮಿ ಕಂಪನಿಸಿದ ತೀವ್ರತೆ ಜನ ಭಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಪ್ರಬಲ ಭೂಕಂಪನದ ಕೇಂದ್ರಬಿಂದು ಉತ್ತರಾಖಂಡದ ಜೋಶಿಮಠದ ಆಗ್ನೇಯಕ್ಕೆ 206 ಕಿಮೀ ಮತ್ತು ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ 284 ಉತ್ತರದಲ್ಲಿದೆ. ನೇಪಾಳದಲ್ಲಿ ಸರಣಿ ಭೂಕಂಪನವಾದರೂ ಸಹಿತ ಹಾನಿ ಬಗ್ಗೆ ವರದಿ ಆಗಿಲ್ಲ.
#WATCH | Delhi | Union Health Minister Mansukh Mandaviya stepped out of Nirman Bhawan, along with others, as strong tremors hit different parts of north India. pic.twitter.com/8EbNFX4b46
— ANI (@ANI) October 3, 2023
ಮನೆಗಳ ಗೋಡೆಯಲ್ಲಿ ಬಿರುಕು
ನೇಪಾಳದ ಬಜಾಂಗ್ ಜಿಲ್ಲೆಯ ಕೆಲವು ಕಟ್ಟಡಗಳಿಗೆ ಗಮನಾರ್ಹ ಹಾನಿ ಉಂಟಾಗಿದೆ. 30 ಸೆಕೆಂಡ್‌ಗಳ ವೀಡಿಯೊದಲ್ಲಿ ಕೆಲವು ಗೋಡೆಗಳು ಮತ್ತು ಇತರ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಭಾರತದಲ್ಲಿ ಈ ಭೂಕಂಪನದಿಂದ ಯಾವುದೇ ಹಾನಿ, ನಷ್ಟಗಳ ಬಗ್ಗೆ ವರದಿ ಆಗಿಲ್ಲ.
strong fluctuations - potential for strong to major seismic event pic.twitter.com/8OhAv363mp
— SSGEOS (@ssgeos) September 30, 2023
ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಹಾಗೂ ಲಕ್ನೋ ಮತ್ತು ಉತ್ತರಾಖಂಡದ ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ. ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬರಬೇಕು. ಯಾವುದೇ ಭಯ ಬೇಡ, ತುರ್ತು ಸಹಾಯಕ್ಕಾಗಿ 112 ಸಂಖ್ಯೆ ಸಂಪರ್ಕಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.
On 30 September we recorded atmospheric fluctuations that included parts of and near Pakistan. This is correct. It can be an indicator of an upcoming stronger tremor (as was the case with Morocco). But we cannot say with certainty that it will happen. https://t.co/B6MtclMOpe
— Frank Hoogerbeets (@hogrbe) October 2, 2023
ನೇಪಾಳವು ವಿಶ್ವದ ಅತ್ಯಂತ ಸಕ್ರಿಯವಾದ ಟೆಕ್ಟೋನಿಕ್ ವಲಯವು ಹೌದಾಗಿದೆ. ಹೀಗಾಗಿ ಇಲ್ಲಿನ ಭೂಮಿ ಅತ್ಯಂತ ದುರ್ಬಲ ಎನ್ನಲಾಗಿದೆ. ಏಪ್ರಿಲ್ 2015 ರಲ್ಲಿ 7.8 ತೀವ್ರತೆಯ ಭೂಕಂಪವು 8,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.












Click it and Unblock the Notifications