ಮಳೆಗೂ ತಾಳಲಿಲ್ಲ ವಿಮಾನ ನಿಲ್ದಾಣದ ಮೇಲ್ಛಾವಣಿ; ಕಪ್ಪು ಚುಕ್ಕೆ
ದೇಶದಲ್ಲಿ ಈಗ ವಿಮಾನ ಸೇವೆಗಳತ್ತ ಜನ ಹೆಚ್ಚಾಗಿ ಮುಖ ಮಾಡುತ್ತಿದ್ದಾರೆ. ಇದರ ಲಾಭವನ್ನು ಪಡೆದು ಸಮಯವನ್ನು ಉಳಿಸಿಕೊಳ್ಳುವ ಯೋಜನೆ ಜನರದ್ದಾಗಿದೆ. ದೇಶದಲ್ಲಿ ಹಲವು ಜನಬೀಡು ವಿಮಾನ ನಿಲ್ದಾಣಗಳಿವೆ. ಅದರಲ್ಲಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹ ಸೇರಿದೆ. ಇಂದಿರಾಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಶುಕ್ರವಾರ ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಹೊರಭಾಗದಲ್ಲಿನ ಗೇಟ್ ನಂ. 1 ರಿಂದ ಗೇಟ್ ನಂ. 2 ರವರೆಗೆ ವಿಸ್ತರಿಸಿರುವ ಶೆಡ್ ಕುಸಿದಿದೆ. ಪರಿಣಾಮ, 4 ವಾಹನಗಳಿಗೂ ಹಾನಿಯಾಗಿದೆ. ಈ ಘಟನೆಯ ವಿಡಿಯೋಗಳು ಮತ್ತು ಚಿತ್ರಗಳು ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ದೃಶ್ಯವನ್ನು ಕಂಡು ಜನ ಸರ್ಕಾರದ ವಿರುದ್ಧ ಕೆಂಡ್ ಕಾರುತ್ತಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಆದ ಘಟನೆಯಲ್ಲಿ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ಸಾಂತ್ವಾನ ಹೇಳಿದ್ದು, 20 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಇನ್ನು ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಇದು ಸಂಚಾರಕ್ಕೆ ಮುಕ್ತವಾಗಲಿದೆ. ಈ ಘಟನೆಯಿಂದಾಗಿ ದೆಹಲಿ ಹೆಮ್ಮೆಯ ವಿಮಾನ ನಿಲ್ದಾಣಕ್ಕೆ ಚುಕ್ಕೆ ಬಿದ್ದಂತಾಗಿದೆ.
ಶುಕ್ರವಾರ ಮುಂಜಾನೆ ದೆಹಲಿ ಮತ್ತು ಸುತ್ತ ಮುತ್ತ ಗುಡುಗು ಮತ್ತು ಮಿಂಚು ಸಹಿತ ನಿರಂತರ ಮಳೆಯಾಗಿದೆ. ದೆಹಲಿಯಲ್ಲಿ ಮುಂದಿನ ಏಳು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 29 ರಂದು ಹವಾಮಾನವು ಸ್ವಲ್ಪ ತಂಪಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಲ್ಲಿ ಕೋಟ್ಯಂತರ ಪ್ರಯಾಣಿಕರ ಪ್ರಾಣ ಅಪಾಯದಲ್ಲಿರುವಾಗ, ಪ್ರಶ್ನೆಗಳು ಉದ್ಭವಿಸುತ್ತವೆ. ವಿಶ್ವದರ್ಜೆಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೆಹಲಿ ಐಜಿಐ ವಿಮಾನ ನಿಲ್ದಾಣವು ಒಂದು ಮಳೆಯ ಭಾರವನ್ನೂ ಸಹಿಸಲಾಗದ ಸ್ಥಿತಿ ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿವೆ. ಜಿಎಸ್‌ಟಿ ಹಾಗೂ ಭಾರೀ ಶುಲ್ಕವನ್ನು ವಿಧಿಸಿದ ಬಳಿಕವೂ ಇದೆಂತಹ ವ್ಯವಸ್ಥೆಯನ್ನು ನೀಡುತ್ತಿದ್ದಾರೆ ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ.












Click it and Unblock the Notifications