Railway New Project: ಕೆಆರ್‌ಸಿಎಲ್ ವಿಲೀನ ವಿಳಂಬ! ಕೊಂಕಣ ರೈಲ್ವೆ ದ್ವಿಪಥ ಯೋಜನೆ ಜಾರಿಗೆ ಒತ್ತಾಯ

ಬೆಂಗಳೂರು, ಡಿಸೆಂಬರ್ 11: ಐದು ಷೇರುದಾರರಿಂದ ರಚಿತವಾದ ಕೆಆರ್‌ಸಿಎಲ್ ಅನ್ನು ಭಾರತೀಯ ರೈಲ್ವೆ ಇಲಾಖೆ ಜೊತೆಗೆ ವಿಲೀನಕ್ಕೆ ಒಪ್ಪಿಗೆ ನೀಡದ ಮೇಲೂ ಸಹಿತ ಸೇರ್ಪಡೆಗೆ ವಿಳಂಬವಾಗುತ್ತಿದೆ. ಇದರಿಂದ ರೈಲ್ವೆ ಸಂಪರ್ಕ ಸುಧಾರಣೆಗೆ ತೊಂದರೆ ಆಗುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಕೇಂದ್ರ ಸರ್ಕಾರವೇ 739 ಕಿಲೋ ಮೀಟರ್ ಉದ್ದದ ಕೊಂಕಣ ರೈಲ್ವೆ ಮಾರ್ಗವನ್ನು ದ್ವಿಪಥಗೊಳಿಸಬೇಕೆಂಬ ಆಗ್ರಹ ಕರ್ನಾಟಕದ ಸಂಸದರಿಂದ ವ್ಯಕ್ತವಾಗಿದೆ. ಇದಕ್ಕೆ ಕೇಂದ್ರ ರೈಲ್ವೆ ಸಚಿವರು ಪ್ರತಿಕ್ರಿಯಿಸಿದ್ದಾರೆ. ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ತಾ? ಇಲ್ಲವಾ? ಎಂಬ ವಿವರ ಇಲ್ಲಿದೆ.

ಸಚಿವಾಲಯ ಮತ್ತು ನಾಲ್ಕು ರಾಜ್ಯಗಳ ಷೇರಿನೊಂದಿಗೆ ಸ್ಥಾಪನೆಯಾದ ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಟ್ (KRCL) ಭಾರತೀಯ ರೈಲ್ವೆಯೊಂದಿಗೆ ವಿಲೀನ ಆಗಬೇಕೆಂಬ ಬೇಡಿಕೆ ಇನ್ನೂ ಜೀವಂತವಾಗಿದೆ. ವರ್ಷಗಳಿಂದ ವಿಳಂಬವಾಗುತ್ತಾ ಬಂದಿದೆ. ಇದನ್ನು ಸಂಸತ್ ಚಳಿಗಾಲ ಅಧಿವೇಶನ (ಲೋಕಸಭೆ) ದಲ್ಲಿ ನಿಯಮ 377 ರ ಅಡಿಯಲ್ಲಿ ಪ್ರಸ್ತಾಪಿಸಿದ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ವಿಲೀನ ವಿಳಂಬವಾದರೆ ಮಂಗಳೂರು-ಮುಂಬೈ ಕೊಂಕಣ ರೈಲು ಮಾರ್ಗ ದ್ವಿಪಥಗೊಳಿಸಬೇಕೆಂದು ಒತ್ತಾಯಿಸಿದರು ಎಂದು ದಿ ಹಿಂದೂ ವರದಿ ಮಾಡಿದೆ.

Delay in KRCL Merger MP Poojary Urges Centre to Start Doubling of Konkan Railway Line Know more

ರೈಲ್ವೆ ಸಚಿವಾಲಯ (66.35%) ಮಹಾರಾಷ್ಟ್ರ ಸರ್ಕಾರ (15.11%), ಗೋವಾ ಮತ್ತು ಕೇರಳ ಸರ್ಕಾರಗಳು (ತಲಾ 4.12%) ಮತ್ತು ಕರ್ನಾಟಕ ಸರ್ಕಾರ (10.30%)ದ ‍‍ಷೇರುಗಳೊಂದಿಗೆ ಕೆಆರ್‌ಸಿಎಲ್ 1990 ರಲ್ಲಿ ಸ್ಥಾಪನೆಯಾಗಿದೆ. ಈ ಎಲ್ಲ ಪಾಲುದಾರರು ಸಹ ಕೆಆರ್‌ಸಿಎಲ್ ವಿಲೀನಕ್ಕೆ ಒಪ್ಪಿಗೆ ನೀಡಿವೆ. ಆದರೆ ವಿಳಂಬವಾಗುತ್ತಿದೆ. ಕೊಂಕಣ ರೈಲ್ವೆ ಮಾರ್ಗವನ್ನು ಅಭಿವೃದ್ಧಿಗೆ ಇದು ಹಿನ್ನಡೆ ಉಂಟು ಮಾಡದೇ ಎಂದು ಸಂಸದರು ಹೇಳಿದರು.

ಸಂಸದರ ಪ್ರಸ್ತಾಪ ಬೆನ್ನಲ್ಲೆ ಉತ್ತರಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು,ಕೊಂಕಣ ಮಾರ್ಗದ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಆ ಪೈಕಿ ಸುಮಾರು 263 ಕಿಮೀ) ದ್ವಿಗುಣಗೊಳಿಸಲು ಇಲಾಖೆ ಮುಂದಾಗಿದ್ದು, ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅದು ಸಿದ್ಧವಾಗಲಿದೆ ಎಂದರು.

ರೈಲ್ವೆ ಡಬಲಿಂಗ್ ಆಗಿದ್ದೆಷ್ಟು?

739 ಕಿ.ಮೀ. ಉದ್ದದ ಕೊಂಕಣ ರೈಲ್ವೆ ಮಾರ್ಗದಲ್ಲಿ, ರೋಹಾ-ವೀರ್ ಮತ್ತು ಮಡ್ಗಾಂವ್-ಮಜೋರ್ಡಾ ವಿಭಾಗಗಳಲ್ಲಿ 55 ಕಿ.ಮೀ. ಲೈನ್ ದ್ವಿಪಥ ಕೆಲಸ ಮುಗಿದಿದೆ. ಉಳಿದ 685 ಕಿ.ಮೀ. ಮಾರ್ಗದ ಡಬ್ಲಿಂಗ್ ಕೆಲಸ ಕೈಗೆತ್ತಿಕೊಂಡಿದ್ದೇವೆ. ಕೆಆರ್‌ಸಿಎಲ್ ಷೇರುದಾರರ ರಾಜ್ಯ ಸರ್ಕಾರಗಳಿಂದ ಇದಕ್ಕೆ ಹೂಡಿಕೆ ಅಗತ್ಯತೆ ಇದೆ ಎಂದು ವಿವರಿಸಿದರು.

ಕೋಂಕಣ ರೈಲ್ವೆ ಯೋಜನೆ ಮಾತ್ರವಲ್ಲದೇ ಯಾವುದೇ ರೈಲು ಯೋಜನೆಗಳ ಮಂಜೂರಾತಿಗೆ ಹಲವು ತಾಂತ್ರಿಕ ಅಂಶಗಳನ್ನು ಅವಲಂಬಿಸಿರುತ್ತದೆ. ಸದರಿ ಪ್ರಸ್ತಾವಿತ ಯೋಜನೆ ಅಗತ್ಯತೆ ರೈಲ್ವೆ ಇಲಾಖೆಯ ಗಮನದಲ್ಲಿದೆ. ಕಾಣೆಯಾದ ಲಿಂಕ್‌ಗಳ ಜೋಡಣೆ, ಸಂಪರ್ಕ ಸುಧಾರಣೆ, ಮಾರ್ಗ ಮತ್ತು ದ್ವಿಪಥ ನಿರ್ಮಾಣಕ್ಕೆ ಕೇಂದ್ರ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.

ಡಿಪಿಎಆರ್ ಸಿದ್ಧವಾಗುತ್ತಿದ್ದಂತೆ ರೈಲ್ವೆ ಇಲಾಖೆ ಕೊಂಕಣ ರೈಲ್ವೆ ದ್ವಿಪಥ ಯೋಜನೆಗೆ ಚುರುಕು ನೀಡಿದರೆ, ಮುಂಬರುವ ವರ್ಷಗಳಲ್ಲಿ ಕರ್ನಾಟಕದ ಕರಾವಳಿಯಿಂದ ಮಹಾರಾಷ್ಟ್ರದ ಮುಂಬೈವರೆಗೆ ಮಾರ್ಗದ ಮಧ್ಯ ಭಾಗಗಳ ಸಂಪರ್ಕ ಸುಧಾರಿಸುತ್ತದೆ. ಸಾರ್ವಜನಿಕರು, ಕೈಗಾರಿಕೆ ಜೊತೆಗೆ ಪ್ರವಾಸೋಧ್ಯಮಕ್ಕೆ ಉತ್ತೇಜನ ಲಭಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+