ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಹ್ರಾಡೂನ್ ರೈಲ್ವೆ ನಿಲ್ದಾಣದಲ್ಲಿ ಅಂಧರಿಗಾಗಿ ಸೂಚನಾ ಫಲಕ

|
Google Oneindia Kannada News

ಡೆಹ್ರಾಡೂನ್, ಮಾರ್ಚ್ 19: ಉತ್ತರಕಾಂಡ್‌ನ ಡೆಹ್ರಾಡೂನ್ ರೈಲ್ವೆ ನಿಲ್ದಾಣದಲ್ಲಿ ಪರಿಚಯ ಮಾಡಿರುವ ಯೋಜನೆಯೊಂದು ಸಾರ್ವಜನಿಕರ ಮೆಚ್ಚಿಗೆ ಪಡೆದಿದೆ. ರೈಲ್ವೆ ನಿಲ್ದಾಣಕ್ಕೆ ಬರುವ ಅಂಧರಿಗಾಗಿ ಬ್ರೈಲ್ ಲಿಪಿಯ ಸೂಚನಾ ಫಲಕ ಹಾಕಲಾಗಿದೆ.

ಬ್ರೈಲ್ ಲಿಪಿಯ ಮೂಲಕ ಅಂಧರು ಓದುತ್ತಾರೆ. ರೈಲ್ವೆ ನಿಲ್ದಾಣಗಳಲ್ಲಿ ಇರುವ ಸಾಮಾನ್ಯ ಸೂಚನಾ ಫಲಕಗಳು ಅವರಿಗೆ ಓದಲು ಆಗುವುದಲ್ಲ. ಹೀಗಾಗಿ, ರೈಲ್ವೆ ನಿಲ್ದಾಣದಲ್ಲಿ ಅಂಧರಿಗೆ ಮತ್ತೊಬ್ಬರ ಸಹಾಯದ ಅಗತ್ಯ ಬರುತ್ತಿತ್ತು. ಇದನ್ನು ಗಮನಿಸಿದ ರೈಲ್ವೆ ನಿಲ್ದಾಣದ ಆಡಳಿತ ಮಂಡಳಿ ಬ್ರೈಲ್ ಲಿಪಿಯ ಸೂಚನಾ ಫಲಕ ಹಾಕಿದೆ.

ಬ್ರೈಲ್ ಲಿಪಿಯ ಸೂಚನಾ ಫಲಕದ ಮೂಲಕ ಅಂಧರು ಅಲ್ಲಿನ ಸೂಚನೆಯನ್ನು ಬೇರೆಯವರ ಸಹಾಯ ಇಲ್ಲದೆ ತಿಳಿಯಬಹುದಾಗಿದೆ. ಅದರ ಮೂಲಕ ಅವರು ತಾವೇ ಫ್ಲಾಟ್ ಫಾಮ್ ಕಡೆ ಹೋಗುವುದು, ವಿಚಾರಣೆ ವಿಭಾಗ, ಶೌಚಾಲಯಗೆ ತೆರಳುತ್ತಿದ್ದಾರೆ ಎಂದು ಅಲ್ಲಿನ ರೈಲ್ವೆ ವಿಭಾಗದ ಮ್ಯಾನೆಜರ್ ಅರುಣ್ ಪ್ರಕಾಶ್ ತಿಳಿಸಿದ್ದಾರೆ.

 Dehradun Railway Station Have Instructions In Braille

ರೈಲ್ವೆ ಇಲಾಖೆ ಹಾಗೂ ಎನ್‌ ಜಿ ಓ ವತಿಯಿಂದ ಈ ಕೆಲಸ ಮಾಡಿದ್ದು, ಇದರಿಂದ ಅಂಧರಿಗೆ ಸಹಾಯ ಆಗಿದೆ. ಅಲ್ಲಿನ ಸಾರ್ವಜನಿಕರು ಈ ಕಾರ್ಯ ನೋಡಿ ಖುಷಿಯಾಗಿದ್ದಾರೆ.

English summary
Uttarakhand Dehradun Railway Station introduces signage in Braille for blind people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X