ಉತ್ತರಾಖಂಡ್ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ ಮೇ 25: ಕೇಂದ್ರ ಬಿಜೆಪಿ ಸರ್ಕಾರ ವಂದೇ ಭಾರತ್ ಎಕ್ಸ್‌ಪ್ರೆಸ್ ಯೋಜನೆ ವಿಸ್ತರಣೆಯನ್ನು ಮುಂದುವರೆಸಿದೆ. ಅದರ ಭಾಗವಾಗೇ ಡೆಹ್ರಾಡೂನ್‌ನಿಂದ ನವದೆಹಲಿಗೆ ಸಂಪರ್ಕ ಸಾಧಿಸುವ ದೇಶಿ ನಿರ್ಮಿತ ರೈಲಿಗೆ ಚಾಲನೆ ದೊರೆತಿದೆ.

ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರು ಸ್ವದೇಶದಲ್ಲಿ ನಿರ್ಮಿಸಲಾದ ಮತ್ತು ಡೆಹ್ರಾಡೂನ್‌- ನವದೆಹಲಿಯನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ನೂತನ ರೈಲಿಗೆ ಹಸಿರು ಭಾವುಟ ತೋರಿಸುವ ಮೂಕ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.

Dehradun-New Delhi Express: PM Modi Flag Off Uttarakhand First Vande Bharath Express

ಭಾರತೀಯ ರೈಲ್ವೆ ಇಲಾಖೆಯ ಈ ನೂತನ ರೈಲು ಸೇವೆ ಆರಂಭವು ಉತ್ತರಾಖಂಡ ಭಾಗದಲ್ಲಿ ಪರಿಚಯಿಸಲಾದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಿದೆ. ಈ ರೈಲನ್ನು ಸ್ಥಳೀಯವಾಗಿ ನಿರ್ಮಿಸಲಾಗಿದೆ. ಕವಾಚ್ ತಂತ್ರಜ್ಞಾನ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಈ ಉತ್ತರಾಖಂಡ ನ ಮೊದಲು ರೈಲು ಹೊಂದಿದೆ.

ಅಷ್ಟೇ ಅಲ್ಲದೇ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ವಿಶಿಷ್ಠ ಅನುಭವ ನೀಡಿಲಿದೆ.

ಈ ರಾಜ್ಯಕ್ಕೆ ಪ್ರಯಾಣಿಸುವ ಪ್ರವಾಸಿಗರಿಗೆ ಆರಾಮದಾಯಕ ಸುಖಕರ ಪ್ರಯಾಣದ ಅನುಭವ ನೀಡುವಲ್ಲಿ ಈ ವಂದೇ ಭಾರತ್ ಯಶಸ್ವಿಯಾಗಲಿದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

Dehradun-New Delhi Express: PM Modi Flag Off Uttarakhand First Vande Bharath Express

ಭಾರತೀಯ ರೈಲ್ವೆಯು ದೇಶದ ನಾಗರಿಕರಿಗೆ ಅತ್ಯುತ್ತಮ ಸಾರಿಗೆ ಸೇವೆ ನೀಡುವಲ್ಲಿ ಗಮನ ಹರಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದೂರದೃಷ್ಟಿ ಮತ್ತು ಪೂರಕ ಯೋಜನೆಗಳಿಂದ ದೇಶದ ವಿವಿಧೆಡೆ ವೇಗದ ಮತ್ತು ವಿಶೇಷ ಮೂಲಸೌಕರ್ಯಗಳ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳ ಸೇವೆ ಹಂತ ಹಂತವಾಗಿ ಆರಂಭವಾಗುತ್ತಿದೆ. ಭವಿಷ್ಯದಲ್ಲಿ ದೇಶದ ರೈಲು ಮಾರ್ಗಗಳನ್ನು ಸಂಪೂರ್ಣ ವಿದ್ಯುದ್ದೀಕರಿಸುವ ಅನ್ವೇಷಣೆಗೆ ಒಳಪಡಲಿವೆ ಎಂದು ಭಾರತೀಯ ರೈಲ್ವೆ ಸಚಿವಾಲಯ ತಿಳಿಸಿದೆ.

ಜೂನ್ ಅಂತ್ಯಕ್ಕೆ ಪುರಿ ಮತ್ತು ಹೌರಾ ನಡುವೆ ರೈಲು ಆರಂಭ

ಇನ್ನೂ ಭಾರತೀಯ ರೈಲ್ವೆಯು ಮುಂದಿನ ಜೂನ್ ಅಂತ್ಯದ ವೇಳೆಗೆ ಕನಿಷ್ಠ ಐದು ಸೆಮಿ ಸ್ಪೀಡ್ ರೈಲುಗಳಿಗೆ ಚಾಲನೆ ನೀಡಲು ಸಜ್ಜಾಗುತ್ತಿದೆ. ಈ ರೈಲುಗಳು ಪುರಿ ಮತ್ತು ಹೌರಾ ನಡುವೆ ಆರಂಭವಾಗಲಿವೆ. ವಂದೇ ಭಾರತ್ ರೈಲ್‌ಗಳ ಪೂರೈಕೆಯನ್ನು ವ್ಯವಸ್ಥಿತಗೊಳಿಸಿರುವ ಕೇಂದ್ರ ರೈಲ್ವೆಇಯು ಒಂದು ತಿಂಗಳಲ್ಲಿ ಸರಣಿ ರೂಪದಲ್ಲಿ ಈ ಸೆಮಿ ಸ್ಪೀಡ್ ರೈಲುಗಳನ್ನು ಲೋಕಾರ್ಪಣೆಗೊಳಿಸಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಸದ್ಯ ಈ ವಂದೇ ಭಾರತ್ ರೈಲುಗಳು ದೇಶದ ವಿವಿಧ ರಾಜ್ಯಗಳ ಮಾರ್ಗದಲ್ಲಿ ಅಗತ್ಯವಿದೆ ಎಂಬುದನ್ನು ಸರ್ಕಾರ ಮನಗಂಡಿದೆ. ಆದರೆ ಉದ್ದೇಶಿತ ಮಾರ್ಗಗಳಲ್ಲಿ ಈ ಎಕ್ಸ್‌ಪ್ರೆಸ್ ರೈಲುಗಳ ಓಡಾಟ ಕಾರ್ಯಸಾಧ್ಯವೇ ಎಂಬುದನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ.

ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳ ಜೊತೆಗೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಡೆಹ್ರಾಡೂನ್ ರೈಲು ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+