ಆರ್.ಎಸ್.ಎಸ್ ವಿರುದ್ಧ ಹೇಳಿಕೆ, ಕೋರ್ಟಿಗೆ ಹಾಜರಾಗಲಿದ್ದಾರೆ ರಾಹುಲ್

Subscribe to Oneindia Kannada

ಬೆಂಗಳೂರು, ಜನವರಿ 30: ನಾಳೆ (ಜನವರಿ 31) 'ಮಹಾತ್ಮಾ ಗಾಂಧಿ ಹತ್ಯೆಗೆ ಆರ್.ಎಸ್.ಎಸ್ ಕಾರಣ' ಎಂದು ಹೇಳಿದ್ದಾರೆ ಎನ್ನಲಾದ ಪ್ರಕರಣದಲ್ಲಿ ರಾಹುಲ್ ಗಾಂಧಿ ಇಂದು ಕೋರ್ಟಿಗೆ ಹಾಜರಾಗಲಿದ್ದಾರೆ. ಥಾಣೆಯ ಭಿವಾಂಡಿ ಕೋರ್ಟಿನಲ್ಲಿ ಈ ಸಂಬಂಧ ಸೋಮವಾರ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ನಡೆಯಲಿದೆ.

ಕಳೆದ ವಿಚಾರಣೆ ವೇಳೆ ಭಿವಾಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ರಾಹುಲ್ ಗಾಂಧಿ ಹಾಜರಾಗಿದ್ದರಿಂದ ಅವರಿಗೆ ಜಾಮೀನು ನೀಡಲಾಗಿತ್ತು. ನಂತರ ವಿಚಾರಣೆಯನ್ನು ಇಂದಿಗೆ (ಜನವರಿ30) ಮುಂದೂಡಲಾಗಿತ್ತು.[ರಾಣೆಬೆನ್ನೂರಿನ ಬಿಜೆಪಿ ಯುವ ಮೋರ್ಚಾದಿಂದ ರಾಹುಲ್ ಗೆ ಹೊಸ ಅಂಗಿ ರವಾನೆ]

Defamation case: Rahul Gandhi to appear in a court

ಇಂದು ರಾಹುಲ್ ಗಾಂಧಿ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ ಎಂದು ಅವರ ವಕೀಲ ನಾರಾಯಣ ಐಯರ್ ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿ ಜತೆ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಕೂಡಾ ಹಾಜರಾಗಲಿದ್ದಾರೆ.

ಮಾರ್ಚ್ 6, 2014ರಂದು ಲೋಕಸಭಾ ಚುನಾವಣೆ ಸಂದರ್ಭ ರಾಹುಲ್ ಗಾಂಧಿ ಭಿವಾಂಡಿಯಲ್ಲಿ ಬಾಷಣ ಮಾಡಿದ್ದರು. ಈ ಸಂದರ್ಭ ಮಹಾತ್ಮಾ ಗಾಂಧಿ ಹತ್ಯೆಗೆ ಆರ್.ಎಸ್.ಎಸ್ ಕಾರಣ ಎಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ಥಳೀಯ ಆರ್.ಎಸ್.ಎಸ್ ನಾಯಕ ರಾಜೇಶ್ ಕುಂಟೆ ಪ್ರಕರಣ ದಾಖಲಿಸಿದ್ದರು.[ರಾಹುಲ್ ಗಾಂಧಿಯನ್ನು ದಿನಾ ಶಾಲೆಗೆ ಬಿಡಲು ಸಿಧು ಕಾಂಗ್ರೆಸ್ಸಿಗೆ ಸೇರಿದ್ದಾ?]

ಈ ಹಿಂದೆ ಸುಪ್ರಿಮ ಕೋರ್ಟ್ ಭಿವಾಂಡಿಯಲ್ಲಿ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ರಾಹುಲ್ ಗಾಂಧಿ ಕೋರಿಕೊಂಡಿದ್ದರು. ಆದರೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೊರ್ಟ್ ಹೇಳಿದ ನಂತರ ತಾನು ವಿಚಾರಣೆಯನ್ನು ಎದುರಿಸುವುದಾಗಿ ರಾಹುಲ್ ಹೇಳಿದ್ದರು. ಅದೇ ರೀತಿ ಪ್ರಕರಣ ರದ್ದು ಪಡಿಸುವಂತೆ ಬಾಂಬೆ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನೂ ರಾಹುಲ್ ಹಿಂದಕ್ಕೆ ಪಡೆದುಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the Defamation case, over alleged comment against the RSS regarding Mahatma Gandhi’s assassination, Congress vice president Rahul Gandhi would be appearing at a Bhiwandi Court, Thane.
Please Wait while comments are loading...