'ಪಠಾನ್‌' ಚಿತ್ರಕ್ಕೆ ಬ್ಯಾನ್ ಬಿಸಿ: ಕೇಸರಿ ಉಡುಪು ತೊಟ್ಟ ನಟಿ ದೀಪಿಕಾ ವಿರುದ್ಧ ಬಿಜೆಪಿ ಸಚಿವನ ವಾಗ್ದಾಳಿ

ನವದೆಹಲಿ, ಡಿಸೆಂಬರ್ 14: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಪಠಾನ್' ಚಿತ್ರದ ಹಾಡು ಭಾರೀ ವಿವಾದವನ್ನು ಹುಟ್ಟುಹಾಕಿದೆ.

ಹೊಸ ಹಾಡು 'ಬೇಷರಂ ರಂಗ್'ಗೆ ಬಿಜೆಪಿಯ ಮುಖಂಡರು ಖ್ಯಾತೆ ತೆಗೆದಿದ್ದಾರೆ.

ಬಿಡುಗಡೆಯಾದಾಗಿನಿಂದಲೂ ಪಠಾನ್‌ ಚಿತ್ರದ ಮೊದಲ ಹಾಡು ಟ್ರೆಂಡಿಂಗ್ ಆಗಿದೆ. ಇದು ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗುತ್ತಿದೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ಬೇಷರಂ ರಂಗ್' ಹಾಡಿನ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.

Deepika Padukones costumes sparks row; MP minister says Pathaan release doubtful

ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ಸಚಿವ ನರೋತ್ತಮ್ ಮಿಶ್ರಾ, 'ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚಿಂತಿಸಲಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಹಾಡಿನಲ್ಲಿ ಉಡುಗೆಗಳ ಆಯ್ಕೆ ಮತ್ತು ಕೆಲವು ಹಾಡಿನ ಸೀಕ್ವೆನ್ಸ್‌ಗಳಲ್ಲಿ ದೀಪಿಕಾ ಧರಿಸಿರುವ ವೇಷಭೂಷಣಗಳ ಬಣ್ಣ ಕೇಸರಿ ಇದೆ ಎಂದು ಅವರು ಆಕ್ಷೇಪಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ನರೋತ್ತಮ್ ಮಿಶ್ರಾ, 'ಮೊದಲ ನೋಟದಲ್ಲಿ ಹಾಡಿನಲ್ಲಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. 'ತುಕ್ಡೆ ತುಕ್ಡೆ ಗ್ಯಾಂಗ್' ಅನ್ನು ಬೆಂಬಲಿಸುವ ನಟಿ ದೀಪಿಕಾ ಪಡುಕೋಣೆ ಪಠಾಣ್ ಚಿತ್ರದ ಹಾಡಿನಲ್ಲಿದ್ದಾರೆ. ವೇಷಭೂಷಣಗಳು ಹೆಚ್ಚು ಆಕ್ಷೇಪಾರ್ಹವಾಗಿದ್ದು, ಇಂತಹ ಹಾಡನ್ನು ಚಿತ್ರೀಕರಿಸಲಾಗಿದೆ. ಇದೊಂದು ಕೊಳಕು ಮನಸ್ಥಿತಿ. ಹಾಡುಗಳ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿಸಬೇಕೇ ಅಥವಾ ಬೇಡವೇ ಎಂದು ನಾವು ಪರಿಗಣಿಸುತ್ತೇವೆ' ಎಂದು ತಿಳಿಸಿದ್ದಾರೆ.

Deepika Padukones costumes sparks row; MP minister says Pathaan release doubtful

ಕುಮಾರ್ ಅವರ ಸಾಹಿತ್ಯದೊಂದಿಗೆ ವಿಶಾಲ್-ಶೇಖರ್ ಸಂಯೋಜಿಸಿದ ಪೆಪ್ಪಿ ಹಾಡು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಹಾಟ್‌ ಕೆಮಿಸ್ಟ್ರಿಯನ್ನು ತೋರಿಸುತ್ತದೆ.

ದೀಪಿಕಾ ಅವರ ನೃತ್ಯ, ಶಾರುಖ್‌ರ ಹಾಟ್‌ ಲುಕ್‌ ಅನೇಕ ಪಡ್ಡೆ ಹುಡುಗರ ಮನಸ್ಸು ಗೆದ್ದಿದೆ. ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿರುವ ಹಾಡಿಕೆ ಕೋಟ್ಯಂತರ ಅಭಿಮಾನಿಗಳು ಭೇಷ್‌ ಎಂದಿದ್ದಾರೆ. ಆದರೆ, ಈಗ ವಿವಾದ ಹುಟ್ಟಿಕೊಂಡಿದೆ. ಇದಕ್ಕೆ ಚಿತ್ರದ ತಯಾರಕರು ಹೇಗೆ ಪ್ರತಿಕ್ರಯಿಸುತ್ತಾರೆಂದು ಕಾದು ನೋಡಬೇಕಿದೆ.

'ಪಠಾನ್' ಜನವರಿ 25, 2023 ರಂದು ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+