ಬಿಜೆಪಿಗೆ ದೊಡ್ಡ ಆಘಾತ : ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಪುತ್ರ

ಮಧ್ಯಪ್ರದೇಶದಲ್ಲಿ ಚುನಾವಣೆಗೆ ಆರು ತಿಂಗಳ ಮೊದಲೇ ಬಿಜೆಪಿ ಭಾರಿ ಆಘಾತ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಜನಸಂಘದ ಮುಖಂಡ ದಿವಂಗತ ಕೈಲಾಶ್ ಜೋಶಿ ಅವರ ಪುತ್ರ ದೀಪಕ್ ಜೋಶಿ ಭೋಪಾಲ್‌ನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ತಂದೆಯನ್ನು ಅವಮಾನಿಸಿದ್ದಾರೆ ಮತ್ತು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡಲಿಲ್ಲ ಎಂದು ದೀಪಕ್ ಜೋಶಿ ಆರೋಪಿಸಿದ್ದಾರೆ.

 Deepak Joshi Son of Late Madhya Pradesh BJP CM Kailash Joshi Joins Congress

ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಜೋಶಿ ಅವರು ತಮ್ಮ ಹೆಂಡತಿಯನ್ನು ಇಂದೋರ್‌ನ ಆಸ್ಪತ್ರೆಗೆ ಸೇರಿಸಬೇಕಾಗಿತ್ತು ಆದರೆ ಮುಖ್ಯಮಂತ್ರಿ ಅಥವಾ ಸರ್ಕಾರದಿಂದ ಯಾವುದೇ ಸಹಾಯವನ್ನು ಸಿಗಲಿಲ್ಲ ಮತ್ತು ಸೂಕ್ತ ಚಿಕಿತ್ಸೆ ಸಿಗದೆ ಅವರು ಪ್ರಾಣ ಕಳೆದುಕೊಂಡರು ಎಂದು ಆರೋಪಿಸಿದರು.

ಮಾಲ್ವಾ ಪ್ರದೇಶದಲ್ಲಿ ವಿಶೇಷವಾಗಿ ದೇವಾಸ್ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಉತ್ತಮ ಹಿಡಿತ ಹೊಂದಿದ್ದಾರೆ. ದೇವಾಸ್‌ನ ಬಾಗ್ಲಿ ಮತ್ತು ಹಟ್ಪಿಪಾಲಿಯಾ ವಿಧಾನಸಭಾ ಕ್ಷೇತ್ರಗಳಿಂದ ದೀಪಕ್ ಜೋಶಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೂರನೇ ಚುನಾವಣಾ ಗೆಲುವಿನ ನಂತರ, ಸಿಎಂ ಚೌಹಾಣ್ ಅವರ ಕ್ಯಾಬಿನೆಟ್‌ಗೆ ಸೇರಿಕೊಂಡರು ಮತ್ತು 2018 ರವರೆಗೆ ಕ್ಯಾಬಿನೆಟ್‌ನ ಸದಸ್ಯರಾಗಿದ್ದರು.

2018 ರಲ್ಲಿ, ಜೋಶಿ ಹಟ್ಪಿಪ್ಲ್ಯಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೋಜ್ ಚೌಧರಿ ವಿರುದ್ಧ ಸೋತರು ಮತ್ತು ನಂತರ ಚೌಧರಿ ಮಾರ್ಚ್ 2020 ರಲ್ಲಿ 22 ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರಿದ್ದರು. ಶನಿವಾರ, ಕಾಂಗ್ರೆಸ್ ಸೇರಲು, ಜೋಶಿ ಅವರು ತಮ್ಮ ತಂದೆಯ ಭಾವಚಿತ್ರದೊಂದಿಗೆ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದ್ದರು.

ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ತನ್ನ ತಂದೆಯ ಮೂರ್ತಿ ಸ್ಥಾಪಿಸಲು ಪಕ್ಷಕ್ಕೆ ಬೇಡಿಕೆ ಇಟ್ಟಿದ್ದೇನೆ ಆದರೆ ರಾಜ್ಯ ನಾಯಕರು ಅವರ ಬೇಡಿಕೆಗೆ ಗಮನ ಕೊಡಲಿಲ್ಲ ಎಂದು ಹೇಳಿದರು. ಅತ್ಯಂತ ಪ್ರಾಮಾಣಿಕ ರಾಜಕೀಯ ನಾಯಕನಿಗೆ ಗೌರವ ನೀಡಲು ಅವರು ಒಂದು ಸಣ್ಣ ತುಂಡು ಭೂಮಿಯನ್ನೂ ನೀಡಲಿಲ್ಲ" ಎಂದು ಜೋಶಿ ಆರೋಪಿಸಿದ್ದಾರೆ

ಜನಸಂಘದ ಸಿದ್ಧಾಂತಕ್ಕೆ ಬಿಜೆಪಿಯಲ್ಲಿ ಜಾಗವಿಲ್ಲ, ಅದಕ್ಕಾಗಿಯೇ ನಾನು ಕಾಂಗ್ರೆಸ್‌ ಸೇರುತ್ತಿದ್ದೇನೆ. ಬಿಜೆಪಿ ನಾಯಕರು ಈ ವಿಷಯದ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ ಆದರೆ ನನ್ನ ಕುಂದುಕೊರತೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಭೋಪಾಲ್‌ನಲ್ಲಿ ಕಾಂಗ್ರೆಸ್‌ಗೆ ಸೇರಿದ ನಂತರ ಜೋಶಿ ಹೇಳಿದರು.

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಗತ್ಯವಿದ್ದರೂ ಮುಖ್ಯಮಂತ್ರಿ ಮತ್ತು ಸಂಪುಟದ ಸಚಿವರನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ಹೈಟೆಕ್ ಪಕ್ಷವಾಗಿ ಮಾರ್ಪಟ್ಟಿದೆ, ಇದರಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಸ್ಥಾನವಿಲ್ಲ ಎಂದು ಅವರು ಹೇಳಿದರು. ಜೋಶಿ ಅವರೊಂದಿಗೆ ದಾತಿಯಾ ಜಿಲ್ಲೆಯ ಶಾಸಕ ರಾಧೇಲಾಲ್ ಬಘೇಲ್ ಕೂಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+