ಸಲಿಂಗಕಾಮ ಅಪರಾಧವಲ್ಲ: ಐತಿಹಾಸಿಕ ತೀರ್ಪಿಗೆ ಟ್ವಿಟ್ಟರ್ ಪ್ರತಿಕ್ರಿಯೆ
ಬೆಂಗಳೂರು, ಸೆಪ್ಟೆಂಬರ್ 06: ಪರಸ್ಪರ ಒಪ್ಪಿತ ಸಲಿಂಗಕಾಮ ಅಪರಾಧವಲ್ಲ ಎಂದು ಎಂದು ಹೇಳಿರುವ ಸುಪ್ರೀಂಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ.
72 ವರ್ಷಗಳ ಹಿಂದಿನ ಸೆಕ್ಷನ್ 377 ಅನುಸಾರ ಸಲಿಂಗಕಾಮ ಅಪರಾಧ ಎಂದು ಪರಿಗಣಿಸಲಾಗುತ್ತಿದ್ದು. ಅದಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ವೈಯಕ್ತಿಕ ಭಾವನೆಗಳ ಅತ್ಯಂತ ಮಹತ್ವದ್ದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ದೇಶದಾದ್ಯಂತ ಸುಪ್ರೀಂಕೋರ್ಟ್‌ನ ಈ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಾಮಾನ್ಯರು, ಪತ್ರಕರ್ತರು ಸುಪ್ರೀಂಕೋರ್ಟ್‌ನ ಈ ತೀರ್ಪನ್ನು ಸ್ವಾಗತಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಸ್ತುತ ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿರುವ #section377 ಒಟ್ಟಾರೆ ದೇಶದ ಅಭಿಪ್ರಾಯವನ್ನು ಹೇಳುತ್ತಿದೆ.
|
ಭಾರತೀಯಳಾಗಿದ್ದಕ್ಕೆ ಹೆಮ್ಮೆ
ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಹೆಮ್ಮೆ ಪಟ್ಟಿರುವ ನಿಶಾ ಶ್ರೀಧರನ್ ಅವರು, ನಾನು ಭಾರತೀಯಳು ಎನಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಹೆಚ್ಚಿನ ಹೆಮ್ಮೆ ಈಗ ಆಗುತ್ತಿದೆ ಎಂದು ಎಂದಿದ್ದಾರೆ. ಅತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಸಮಾನತೆಗೆ ಗೌರವ ನೀಡಿದೆ ಎಂದಿದ್ದಾರೆ ಅವರು.
| Array |
ಕಣ್ಣುಕುರುಡಾಗಿದ್ದರೂ ನ್ಯಾಯದೇವತೆಗೆ ಪ್ರೀತಿ ಕಂಡಿದೆ
ಸಲಿಂಗಕಾಮಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿರುವುದನ್ನು ಕಾವ್ಯಾತ್ಮಕವಾಗಿ ಅರ್ರೆ ಸಂಸ್ಥೆ ಮಾಡಿರುವ ಟ್ವೀಟ್. 'ನ್ಯಾಯ ದೇವತೆ ಕುರುಡಾಗಿದ್ದರೂ ಸಹ ಕುರುಡು ಪ್ರೀತಿಯನ್ನು ಕಂಡಿದೆ' ಎಂದಿದೆ ಅವರ ಟ್ವೀಟ್.
|
ಕರಣ್ ಜೋಹರ್ ಟ್ವೀಟ್
ಕೊನೆಗೂ ಸಲಿಂಗಕಾಮ ಕಾನೂನುಬದ್ಧವಾಗಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ. ಮಾನವೀಯತೆ ಮತ್ತು ಸಮಾನತೆಗೆ ಈ ಐತಿಹಾಸಿಕ ತೀರ್ಪು ಆಮ್ಲಜನಕವನ್ನು ಒದಗಿಸಿದೆ. ಸೆಕ್ಷನ್ 377 ಅನ್ನು ತೆಗೆದುಹಾಕಿರುವುದು ಬಹುದೊಡ್ಡ ಬೆಳವಣಿಗೆ ಎಂದು ಟ್ವೀಟ್ ಮಾಡಿದ್ದಾರೆ ಅವರು.
| Array |
ಎಲ್ಲ ಚಾನೆಲ್‌ನಲ್ಲೂ ಕಾಮನಬಿಲ್ಲು
ದೂರದರ್ಶನದಲ್ಲಿ 'ಅಡಚಣೆಗಾಗಿ ವಿಷಾಧಿಸುತ್ತೇವೆ' ಎಂದು ಕಾಮನಬಿಲ್ಲಿನ ಬಣ್ಣಗಳನ್ನು ಪ್ರದರ್ಶಿಸುತ್ತಿದ್ದರಲ್ಲ ಅದು ಇಂದು ಎಲ್ಲಾ ಟಿವಿ ಚಾನೆಲ್‌ಗಳಲ್ಲೂ ಪ್ರದರ್ಶಿತವಾಗಲಿದೆ ಎಂದು ತಮಾಷೆ ಮಾಡಿದ್ದಾರೆ ಸೋನಿನಾಮಿಕ್ಸ್. ಸಲಿಂಗಕಾಮಿಗಳು ಕಾಮನಬಿಲ್ಲಿನ ಎಲ್ಲ ಬಣ್ಣಗಳನ್ನು ತಮ್ಮ ತಮ್ಮ ಅಸ್ಮಿತೆಯ ಚಿಹ್ನೆಯಾಗಿ ಬಳಸುತ್ತಾರೆ.
|
ಭಾರತಕ್ಕೆ ಕಾಮನಬಿಲ್ಲಿನ ಬಣ್ಣ
ಸಲಿಂಗಕಾಮ ಸಕ್ರಮಗೊಳಿಸಿ ನೀಡಿರುವ ಐತಿಹಾಸಿಕ ತೀರ್ಪಿನಿಂದ ಭಾರತಕ್ಕೆ ಕಾಮನಬಿಲ್ಲಿನ ಬಣ್ಣ ಬಳಿದಂತಾಗಿದೆ ಎಂದಿದ್ದಾದೆ ಸೆಲೆಬ್ರಿಟಿ ಸ್ವರ ಭಾಸ್ಕರ್. ಇದಕ್ಕಾಗಿ ಹೊರಾಡಿದ ಎಲ್ಲ ಹೋರಾಟಗಾರರಿಗೆ ಹಾಗೂ ತೀರ್ಪು ನೀಡಿದ ನ್ಯಾಯಾಧೀಶರಿಗೆ ಧನ್ಯವಾದ ಎಂದಿದ್ದಾರೆ ಅವರು.
| Array |
ತಮ್ಮ ಹಕ್ಕುಗಳಿಗಾಗಿ ಹೋರಾಡಿದ್ದವರ ಸಂತಸ
ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದ ಹೊರಾಟಗಾರರು ಸುಪ್ರಿಂಕೋರ್ಟ್ ತೀರ್ಪು ಹೊರಬಿದ್ದ ಕೂಡಲೆ ಹೋರಾಟಗಾರರು ತಮ್ಮ ಸಂತಸ ವ್ಯಕ್ತ ಪಡಿಸಿದ ವಿಡಿಯೋ ಇದು.
|
ಸುಬ್ರಹ್ಮಣಿಯನ್ ಸ್ವಾಮಿ ಹಳೆ ಟ್ವೀಟ್‌ನ ನೆನಪು
ಬಿಜೆಪಿಯ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರ ಹಳೆ ಟ್ವೀಟ್ ಅನ್ನು ನೆನಪು ಮಾಡಿರುವ ಪ್ಯಾರೆಡಿ ಖಾತೆಯೊಂದು, ಎಂಥಹಾ ಅವಮಾನ, ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಅವರು ಹಿಂದೆ ಸಲಿಂಗಕಾಮ ವಿರೋಧಿಸಿ ಮಾಡಿದ್ದ ಟ್ವೀಟ್‌ನ ಸ್ಕ್ರೀನ್ ಶಾಟ್‌ಗಳನ್ನು ಅದು ಪ್ರಕಟಿಸಿದೆ.
|
ಮಾಧ್ಯಮಗಳಿಗೆ ಸಲಹೆ
ಭಾರತೀಯ ಮಾಧ್ಯಮಗಳು ಈ ವಿಷಯದ ಸುದ್ದಿ ಅಥವಾ ಚರ್ಚೆ ಮಾಡುವಾಗ ಇದನ್ನು ಪರ ವಿರೋಧ ಚರ್ಚೆಯ ವಿಷಯ ಎಂದು ನೋಡದೆ ಬಹಳ ಕಾಲದ ಹಿಂದೆಯೇ ಬರಬೇಕಿದ್ದ ತೀರ್ಪು ಎಂದು ಚರ್ಚಿಸಿ ಎಂದು ಸಲಹೆ ನೀಡಿದ್ದಾರೆ ಪರಮೇಶ್ ಶಹಾನಿ.
|
ಬೆಳಕಿನ ಕಿರಣ ಬಣ್ಣಗಳಾದಾಗ
ಸೆಕ್ಷನ್ 377 ಸುಪ್ರಿಂಕೋರ್ಟ್ ಎನ್ನುವ ಗಾಜಿನ ತ್ರಿಭುಜದ ಒಳಗೆ ಹೊಕ್ಕು ಸಲಿಂಗಕಾಮ ಸಕ್ರಮವಾಗಿ ಹೊರಹೊಮ್ಮಿದೆ ಎಂದು ಈಸ್ಟ್ ಇಂಡಿಯಾ ಕಾಮೆಡಿ ಎಂದು ಟ್ವಿಟ್ಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ.
|
ಕಡ್ಡಿ ಅಲ್ಲಾಡಿಸುವವರೂ ಇದ್ದಾರೆ
ಸುಪ್ರಿಂಕೋರ್ಟ್‌ನ ತೀರ್ಪಿನಿಂದ ಕೆಲವರಿಗೆ ಅಸಹನೆಯೂ ಉಂಟಾಗಿದೆ. 'ಸುಪ್ರೀಂಕೋರ್ಟ್ ಸಲಿಂಗಕಾಮಿಗಳ ಬಗ್ಗೆ ಬಹಳ ಕಾಳಜಿ ವಹಿಸಿದಂತಿದೆ. ಆದರೆ ಅದು ಇನ್ನಿತರ ವಿಷಯಗಳ ಬಗ್ಗೆಯೂ ಗಮನವಹಿಸಬೇಕು' ಎಂದು ಪಟ್ಟಿ ನೀಡಿದ್ದಾರೆ ಇಲ್ಲೊಬ್ಬ ಅತೃಪ್ತ ಜೀವಿ. ಇವರ ನೀಡಿರುವ ಪಟ್ಟಿ ಪ್ರಕಾರ, ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ನಿರ್ಮಿಸಬೇಕಂತೆ, ಮೀಸಲಾತಿ ರದ್ದು ಮಾಡಬೇಕಂತೆ, ಜೊತೆಗೆ ಕಾಶ್ಮೀರಕ್ಕೆ ವಿಶೇಷ ಮಾನ್ಯತೆ ನೀಡುವ ಆರ್ಟಿಕಲ್ 370 ಅನ್ನೂ ರದ್ದು ಮಾಡಬೇಕಂತೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications