ಬುಲೆಟ್ ಪ್ರೂಫ್ ವಾಹನ ಶಾಪಿಂಗ್ ಮಾಡಿದ ದಾವೂದ್ ಇಬ್ರಾಹಿಂ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 25: ಹಲವು ತನಿಖಾ ಸಂಸ್ಥೆಗಳು ಡಾನ್ ದಾವೂದ್ ಇಬ್ರಾಹಿಂ ಹಿಡಿಯಲು ಬೆವರು ಹರಿಸುತ್ತಿದ್ದರೆ, ಅತ ಮಾತ್ರ ಷಾಪಿಂಗ್ ನಲ್ಲಿ ಬಿಜಿಯಾಗಿದ್ದಾನೆ. ಮಜಬೂತಾಗಿರುವ ಬುಲೆಟ್ ಪ್ರೂಫ್ ಕಾರು ಖರೀದಿಸುವಲ್ಲಿ, ಅದರ ಇಂಟೀರಿಯರ್ಸ್ ಬಗ್ಗೆ ಆಲೋಚಿಸುತ್ತಾ ತನ್ನ ಏಜೆಂಟ್ ಜತೆ ಮಾತುಕತೆಯಲ್ಲಿದ್ದಾನೆ.

ಪಾಕಿಸ್ತಾನದಲ್ಲಿರುವ ದಾವೂದ್ ನನ್ನು ಹೆಡೆಮುರಿ ಕಟ್ಟಿ, ಭಾರತಕ್ಕೆ ಕರೆತರುವುದಕ್ಕೆ ಇಲ್ಲಿನ ಸರ್ಕಾರ ಯತ್ನಿಸುತ್ತಿದೆ. ಮತ್ತೊಂದು ಕಡೆ ದಾವೂದ್ ನನ್ನು ಮುಗಿಸೇ ಬಿಡುವ ಪ್ರಯತ್ನದಲ್ಲಿರುವ ಆತನ ವೈರಿಗಳು ಇದ್ದಾರೆ. ಈ ಮಧ್ಯೆ ಅನಾರೋಗ್ಯದಿಂದ ನರಳುತ್ತಿರುವ ಆತನಿಗೆ ಜೀವ ಭಯ ಕಾಡುತ್ತಿದೆ.[ದಾವೂದ್ ಮನೆ ವಿಳಾಸ: 9 ರಲ್ಲಿ 6 ಮಾತ್ರ ಸರಿಯಿದೆ : ಯುಎಸ್]

Dawood wanted to pick up bullet proof vehicles

ತನ್ನ ರಕ್ಷಣೆಗಾಗಿ ಭದ್ರತಾ ವ್ಯವಸ್ಥೆ ಹೆಚ್ಚಿಸಿಕೊಳ್ಳುವುದಕ್ಕೆ ಬುಲೆಟ್ ಪ್ರೂಫ್ ಕಾರು ಖರೀದಿಗೆ ಮುಂದಾಗಿರುವ ಆತ, ಯುಎಇಯಲ್ಲಿರುವ ವ್ಯಕ್ತಿಯೊಬ್ಬನ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾನೆ. ಮತ್ತು 5 ಬುಲೆಟ್ ಪ್ರೂಫ್ ವಾಹನ ಖರೀದಿಸಿ, ಪಾಕಿಸ್ತಾನಕ್ಕೆ ಕಳುಹಿಸುವಂತೆ ತಿಳಿಸಿದ್ದಾನೆ. ಯುಎಇಯ ಆ ವ್ಯಕ್ತಿಯ ಹೆಸರು ತಾರಿಕ್. ದಾವೂದ್ ಗಾಗಿ ಆತ ಕೆಲಸ ಮಾಡುತ್ತಿದ್ದಾನೆ. ಈ ಖರೀದಿ ವ್ಯವಹಾರ ಇಂಟೆಲಿಜೆನ್ಸ್ ಬ್ಯುರೋಗೆ ಅಕ್ಟೋಬರ್, 2014ರಲ್ಲೇ ಗಮನಕ್ಕೆ ಬಂದಿತ್ತು.

ದಾವೂದ್ ಮೇಲೆ ದಾಳಿ ಆಗಬಹುದು ಎಂದು ಆತನ ಆಪ್ತ ವಲಯ ಅನುಮಾನ ವ್ಯಕ್ತಪಡಿಸಿರುವುದರಿಂದ ಯುಎಇಯಿಂದ ಕಸ್ಟಮ್ ಮೇಡ್ ಬುಲೆಟ್ ಪ್ರೂಫ್ ವಾಹನ ಖರೀದಿಗೆ ನಿರ್ಧರಿಸಲಾಗಿದೆ. ತನಿಖಾ ಸಂಸ್ಥೆಗಳಿಗೆ ದೊರೆತಿರುವ ಮಾಹಿತಿ ಪ್ರಕಾರ, ಖರೀದಿಗೆ ಬೇಕಾದ ಎಲ್ಲ ಕೆಲಸಗಳನ್ನು ತಾರಿಕ್ ಮಾಡಿ ಮುಗಿಸಿದ್ದಾನೆ. ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.[ದಾವೂದ್ ಇಬ್ರಾಹಿಂ ಫಿಟ್ ಆಗಿದ್ದಾನೆ: ಛೋಟಾ ಶಕೀಲ್]

ದಾವೂದ್ ಇಬ್ರಾಹಿಂಗೆ ಬೇಕಾದಂತೆ ವಾಹನದ ಮಾರ್ಪಾಡು ಮಾಡಲಾಗಿದ್ದು, ಅತಿ ಶೀಘ್ರದಲ್ಲೇ ಕರಾಚಿಯನ್ನು ತಲುಪಲಿದೆ. ದುಬೈ ಮೂಲದ ತಾರಿಕ್ ಇದೇ ಮೊದಲು ದಾವೂದ್ ಗಾಗಿ ವಾಹನ ಕಳುಹಿಸುತ್ತಿರುವುದೇನಲ್ಲ. 2009ರಲ್ಲೂ ದಾವೂದ್ ಗಾಗಿ ಇದೇ ರೀತಿ ವಾಹನ ಖರೀದಿಸಿ ಕರಾಚಿ ತಲುಪುವಂತೆ ನೋಡಿಕೊಂಡಿದ್ದ ಎಂದು ತನಿಖಾ ಸಂಸ್ಥೆಗಳು ಖಚಿತಪಡಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While many agencies were looking out of fugitive don, Dawood Ibrahim, the man was shopping. As part of his security upgrade programme, he wanted to pick up a couple of state of the art bullet proof vehicles.
Please Wait while comments are loading...