ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಸ್ಮಾರ್ಟ್ ಸಿಟಿಗಳ ಮೊದಲ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ

By Mahesh
|
Google Oneindia Kannada News

ನವದೆಹಲಿ, ಜ. 28: ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಮೊದಲ 20 ನಗರಗಳ ಪಟ್ಟಿಯನ್ನು ಗುರುವಾರ (ಜನವರಿ 28) ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಎಂ ವೆಂಕಯ್ಯ ನಾಯ್ಡು ಅವರು ಪ್ರಕಟಿಸಿದ್ದಾರೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ದಾವಣಗೆರೆ ಹಾಗೂ ಬೆಳಗಾವಿ ಆಯ್ಕೆಯಾಗಿವೆ.

ಒಟ್ಟು 98 ನಗರಗಳನ್ನು ಸ್ಮಾರ್ಟ್ ಸಿಟಿ ದರ್ಜೆಗೇರಿಸಲು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಯೋಜನೆ ಹಾಕಿಕೊಂಡಿದೆ. ಈಗ ಆಯ್ಕೆಯಾಗಿರುವ ಮೊದಲ ಪಟ್ಟಿಯಲ್ಲಿ 20 ನಗರಗಳು ಆಯ್ಕೆಯಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಇನ್ನು 40 ಹಾಗೂ 38 ನಗರಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗುತ್ತದೆ. [ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ]

The list of 20 smart cities out of the 98 shortlisted for the 'Smart Cities Mission'

ಸ್ಮಾರ್ಟ್ ಸಿಟಿ : ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನ(ಐಸಿಟಿ) ವನ್ನು ಬಳಸಿಕೊಂಡು ನಗರದ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು. ನೀರು, ವಿದ್ಯುತ್ ಪೂರೈಕೆ, ಒಳಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆ, ಸಾರಿಗೆ ಸಂಪರ್ಕ, ಮಾಹಿತಿ ಮತ್ತು ತಂತ್ರಜ್ಞಾನ ಸಂಪರ್ಕ, ಇ ಆಡಳಿತ, ನಾಗರಿಕರ ಪಾಲ್ಗೊಳ್ಳುವಿಕೆ, ಸುರಕ್ಷತೆ ಹಾಗೂ ಭದ್ರತೆ ಒದಗಿಸುವುದು. ಸರ್ಕಾರದ ಸೌಲಭ್ಯಗಳು ಎಲ್ಲಾ ನಾಗರಿಕರಿಗೂ ಸುಲಭವಾಗಿ ತಲುಪಿಸುವುದು. [ಸ್ಮಾರ್ಟ್ ಸಿಟಿ : ಕರ್ನಾಟಕಕ್ಕೆ 6 ಮಿಕ್ಕ ರಾಜ್ಯಕ್ಕೆ ಎಷ್ಟು?]

ಮೊದಲ ಪಟ್ಟಿ ಇಂತಿದೆ:
1. ಭುವನೇಶ್ವರ್, ಒಡಿಶಾ
2. ಪುಣೆ, ಮಹಾರಾಷ್ಟ್ರ
3. ಜೈಪುರ, ರಾಜಸ್ಥಾನ
4. ಸೂರತ್, ಗುಜರಾತ್
5. ಕೊಚ್ಚಿ, ಕೇರಳ
6. ಅಹಮದಾಬಾದ್, ಗುಜರಾತ್
7. ಜಬಲ್ ಪುರ್, ರಾಜಸ್ಥಾನ
8. ವಿಶಾಖಪಟ್ಟಣಂ, ಆಂಧ್ರಪ್ರದೇಶ
9. ಶೋಲಾಪುರ್, ಮಹಾರಾಷ್ಟ್ರ
10. ದಾವಣಗೆರೆ, ಕರ್ನಾಟಕ
11. ಇಂದೋರ್, ಮಧ್ಯಪ್ರದೇಶ
12. ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್
13. ಕೊಯಮತ್ತೂರು, ತಮಿಳುನಾಡು
14. ಕಾಕಿನಾಡ, ಆಂಧ್ರಪ್ರದೇಶ
15. ಬೆಳಗಾವಿ, ಕರ್ನಾಟಕ
16. ಉದಯಪುರ್, ರಾಜಸ್ಥಾನ
17. ಗುವಾಹಟಿ, ಅಸ್ಸಾಂ
18. ಚೆನ್ನೈ, ತಮಿಳುನಾಡು
19. ಲೂಧಿಯಾನಾ, ಪಂಜಾಬ್
20. ಭೋಪಾಲ್, ಮಧ್ಯಪ್ರದೇಶ

ಉತ್ತರಪ್ರದೇಶಕ್ಕೆ 13, ತಮಿಳುನಾಡಿಗೆ 12, ಮಹಾರಾಷ್ಟ್ರಕ್ಕೆ 10, ಮಧ್ಯಪ್ರದೇಶಕ್ಕೆ 7, ಗುಜರಾತ್ ಹಾಗೂ ಕರ್ನಾಟಕಕ್ಕೆ ತಲಾ 6 ಸ್ಮಾರ್ಟ್ ಸಿಟಿಗಳು ಮಂಜೂರು ಮಾಡಲಾಗಿದೆ. ಮಿಕ್ಕ ಹೆಸರುಗಳನ್ನು ಪ್ರಕಟಿಸಲಾಗುತ್ತದೆ. ಒಟ್ಟಾರೆ 3ಲಕ್ಷ ಕೋಟಿ ರು ಅನುದಾನ ಈ ಮಹತ್ವದ ಯೋಜನೆಗೆ ಸಿಗಲಿದೆ. [ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಸಮರ್ಥ ನಗರ]
(ಒನ್ ಇಂಡಿಯಾ ಸುದ್ದಿ)

English summary
The list of 20 smart cities out of the 98 shortlisted for the 'Smart Cities Mission' was released on Thursday. These 20 cities will be the first to receive funds, thus kickstarting the process of developing them into 'smart cities'. The next two years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X