ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದು ಅವಿಭಜಿತ ಕುಟುಂಬದಲ್ಲಿ ತಂದೆ ಆಸ್ತಿಯಲ್ಲಿ ಮಗಳಿಗೆ ಹಕ್ಕು!

|
Google Oneindia Kannada News

ನವದೆಹಲಿ, ಆ. 11: ಹಿಂದು ಅವಿಭಜಿತ ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಮುಖ್ಯವಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಹಕ್ಕು ನೀಡುವ ಬಗ್ಗೆ ಕೋರ್ಟ್ ತೀರ್ಪು ನೀಡಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಜಾರಿಗೆ ಬರುವ ಮೊದಲು ಹಿರಿಯರು ನಿಧನರಾದರೂ ಸಹ ಹೆಣ್ಣುಮಕ್ಕಳಿಗೆ ಪೂರ್ವಜರ ಆಸ್ತಿಯ ಮೇಲೆ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ತೀರ್ಪು ನೀಡಿದೆ.

ಹೀಗಾಗಿ, ಹಿಂದೂ ಅವಿಭಜಿತ ಕುಟುಂಬ(HUF)ದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳು ಇಬ್ಬರಿಗೂ ಸಮಾನ ಪಾಲು ಪಡೆಯುವ ಅಧಿಕಾರ ನೀಡಲಾಗಿದೆ. 2005ರಲ್ಲಿ 1956ರ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಮಗ ಮತ್ತು ಮಗಳು ಇಬ್ಬರಿಗೂ ತಮ್ಮ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ತೀರ್ಪು ನೀಡಲಾಗಿತ್ತು. ಆದರೆ 2005ರ ಮೊದಲೇ ತಂದೆ ಸಾವನ್ನಪ್ಪಿದರೆ ಅಂತಹ ಮಕ್ಕಳು ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಯಾವುದೇ ಹಕ್ಕು ಇಲ್ಲ ಎನ್ನಲಾಗಿತ್ತು. ಇದರಿಂದ ಗೊಂದಲ ಮೂಡಿತ್ತು. ಆದರೆ, ಈಗ ಹೊಸ ತೀರ್ಪಿನ ಅನ್ವಯ, ತಿದ್ದುಪಡಿ ದಿನಾಂಕಕ್ಕೆ ಅನ್ವಯವಾಗುವಂತೆ ತಂದೆ, ಮಗಳು ಇಬ್ಬರಲ್ಲಿ ಒಬ್ಬರು ಅಥವಾ ಇಬ್ಬರೂ ಜೀವಂತ ಇರಲಿ, ಅಥವಾ ಮೃತಪಟ್ಟಿರಲಿ, ಅನುವಂಶಿಕ ಆಸ್ತಿ ಹಕ್ಕುದಾರರಾಗುತ್ತಾರೆ. ಸದರಿ ತಿದ್ದುಪಡಿ ದಿನಾಂಕಕ್ಕೂ ಮೊದಲೇ ತಂದೆ ಮೃತಪಟ್ಟಿದ್ದರೂ ಹೆಣ್ಣು ಮಕ್ಕಳು ಆಸ್ತಿ ಪಾಲು ಹೊಂದಬಹುದು ಎಂದು ಹೇಳಲಾಗಿದೆ.

Daughters Have Right to HUF Property Even if Their Father Died Before 2005 Law Came Into Force, Rules SC

ಈ ಹಿಂದೆ ಕಾನೂನು ಏನಿತ್ತು?: 1956ರ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣು ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಹಕ್ಕು ಇರಲಿಲ್ಲ. ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ-2005 ಜಾರಿಗೆ ಬರುವ ಮುನ್ನ ತಂದೆ ಸಾವನ್ನಪ್ಪಿದ್ದಲ್ಲಿ ಅಥವಾ ಆಸ್ತಿ ಹಂಚಿಕೆಯಾಗಿದ್ದಲ್ಲಿ ಅಂತಹ ಹೆಣ್ಣು ಮಕ್ಕಳಿಗೆ ತಂದೆಯ ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಇರುವುದಿಲ್ಲ. 2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನ ಮತ್ತು ನಂತರದ ದಿನಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಮಾತ್ರ ತಮ್ಮ ತಂದೆಯ ಆಸ್ತಿಗೆ ಹಕ್ಕುದಾರರಾಗಿರುತ್ತಾರೆ ಎನ್ನಲಾಗಿತ್ತು. ಆದರೆ, ಈಗ ಗಂಡು ಹಾಗೂ ಹೆಣ್ಣು ಮಕ್ಕಳು ಇಬ್ಬರಿಗೂ ಸಮಾನ ಪಾಲು ಪಡೆಯುವ ಅಧಿಕಾರ ನೀಡಿ ತೀರ್ಪು ಪ್ರಕಟಿಸಲಾಗಿದೆ.

English summary
In a landmark judgment, the Supreme Court on Tuesday rule in favour of rights of daughters to have a share in a Hindu Undivided Family (HUF) property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X