ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಪೋಸ್ಟ್ ವಿರುದ್ಧ ಫತ್ವಾ

|
Google Oneindia Kannada News

ಮುಸ್ಲಿಂ ಪುರುಷರು ಹಾಗೂ ಮಹಿಳೆಯರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದವರ ಫೋಟೋಗಳನ್ನು ಹಾಕಬಾರದು ಎಂದು ದಾರುಲ್ ಉಲೂಮ್ ದೇವಬಂದ್ ನಿಂದ ಉತ್ತರಪ್ರದೇಶದ ಸಹರಾನ್ ಪುರ್ ನಲ್ಲಿ ಫತ್ವಾ ಹೊರಡಿಸಲಾಗಿದೆ.

ಕುರಾನ್ ಬಗ್ಗೆ ಸಲ್ಮಾನ್ ರಶ್ದಿ ಮತ್ತೊಂದು ವಿವಾದಕಾರಿ ಹೇಳಿಕೆಕುರಾನ್ ಬಗ್ಗೆ ಸಲ್ಮಾನ್ ರಶ್ದಿ ಮತ್ತೊಂದು ವಿವಾದಕಾರಿ ಹೇಳಿಕೆ

ಬುಧವಾರ ಫತ್ವಾ ಹೊರಡಿಸಿದ್ದು, ಫೆಸ್ ಬುಕ್, ವಾಟ್ಸ್ ಅಪ್ ನಂಥ ಸಾಮಾಜಿಕ ಮಾಧ್ಯಮ ವೆಬ್ ಸೈಟ್ ಗಳಲ್ಲಿ ತಮ್ಮದು ಹಾಗೂ ತಮ್ಮ ಕುಟುಂಬದವರ ಫೋಟೋಗಳನ್ನು ಹಾಕಲು ಇಸ್ಲಾಮ್ ನಲ್ಲಿ ಅವಕಾಶವಿಲ್ಲ ಎಂದು ಹೇಳಲಾಗಿದೆ.

Darul Uloom Deoband fatwa bans posting photos on social media

ಸಾಮಾಜಿಕ ಮಾಧ್ಯಮಗಳಿಗೆ ಫೋಟೋಗಳನ್ನು ಪೋಸ್ಟ್ ಮಾಡಲು ಇಸ್ಲಾಮ್ ನಲ್ಲಿ ಅವಕಾಶ ಇದೆಯೇ ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ದಾರುಲ್ ಉಲೂಮ್ ದೇವ್ ಬಂದ್ ನಿಂದ ಫತ್ವಾ ಹೊರಡಿಸಲಾಗಿದೆ.

ಇಲ್ಲಿನ ಮದರಸಾಕ್ಕೆ ಸಂಬಂಧಿಸಿದ ಇಸ್ಲಾಂ ವಿದ್ವಾಂಸ ಮುಫ್ತಿ ತಾರೀಕ್ ಖಸ್ಮಿ ಮಾತನಾಡಿ, ಫೋಟೋಗಳ ಮೇಲೆ ಅನಗತ್ಯವಾಗಿ ಕ್ಲಿಕ್ಕಿಸುವುದಕ್ಕೇ ಇಸ್ಲಾಮ್ ನಲ್ಲಿ ಅವಕಾಶ ಇಲ್ಲದಿರುವಾಗ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಪೋಸ್ಟ್ ಮಾಡಲು ಅವಕಾಶ ಇರಲು ಹೇಗೆ ಸಾಧ್ಯ ಎಂದಿದ್ದಾರೆ.

English summary
The Darul Uloom Deoband in Uttar Pradesh's Saharanpur has issued a fatwa prohibiting Muslim men and women from posting their or their families' photographs on social media sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X