ಗುಂಡಿಬಿದ್ದ ಎಕ್ಸ್‌ಪ್ರೆಸ್‌ವೇ: ತಮ್ಮದೇ ಸರ್ಕಾರದ ವಿರುದ್ಧ ವರುಣ್ ಗಾಂಧಿ ಆಕ್ರೋಶ
ನವದೆಹಲಿ, ಜುಲೈ, 22: ಉತ್ತರ ಪ್ರದೇಶದಲ್ಲಿ ಉದ್ಘಾಟಿಸಲಾಗಿದ್ದ ಹೊಸ ಎಕ್ಸ್‌ಪ್ರೆಸ್‌ವೇ ಒಂದೇ ವಾರದಲ್ಲಿ ತಗ್ಗು ಗುಂಡಿಗಳು ಬಿದ್ದು ಹಾಳಾಗಿದೆ. ಭಾರಿ ಮಳೆಯಿಂದ ರಸ್ತೆ ಹಾಳಾಗಿದ್ದು, ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರಲ್ಲದೇ ಸ್ವಪಕ್ಷ ನಾಯಕ, ಸಂಸದ ವರುಣ್ ಗಾಂಧಿ ಅವರು ಆಕ್ರೋಶ ಹೊರಹಾಕಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳೆಂದರೆ ಸುಗಮ ಸಂಚಾರಕ್ಕೆ ಸೂಕ್ತವಾದವುಗಳಾಗಿರುತ್ತವೆ. ಆದರೆ, ಉತ್ತರ ಪ್ರದೇಶದಲ್ಲಿ ಬೃಹತ್ ಹೆದ್ದಾರಿಯನ್ನು ಒಂದು ವಾರದ ಹಿಂದೆಯಷ್ಟೇ ಮೋದಿಯವರು ಉದ್ಘಾಟಿಸಿದ್ದರು. ಇನ್ನೂ ವಾರ ಆಗಿಲ್ಲ ಆಗಲೇ ಈ ರಸ್ತೆ ತಗ್ಗು ಗಂಡಿಗಳು ಬಿದ್ದು ಹಾಳಾಗಿದೆ. ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮಾಡಿದ ಮೋದಿಯವರ ವಿರುದ್ಧ ಟ್ವೀಟ್‌ಗಳ ಸಮರವೇ ಆಗುತ್ತಿದೆ.
ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 296 ಕಿಲೋ ಮೀಟರ್ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಜಲೌನ್ ಜಿಲ್ಲೆಯ ಬಳಿಯಿರುವ ಛಿರಿಯಾ ಸಲೆಂಪುರ್‌ನಲ್ಲಿ ಕುಸಿದಿದೆ. ಮತ್ತು ಗುರುವಾರ ಸುರಿದ ಭಾರಿ ಮಳೆಗೆ ಆಳವಾದ ಗುಂಡಿಗಳು ಬಿದ್ದಿವೆ. ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವರುಣ್ ಗಾಂಧಿ ಆಗ್ರಹಿಸಿದ್ದಾರೆ.

ಎಕ್ಸ್‌ಪ್ರೆಸ್‌ವೇನ ಒಟ್ಟು ಉದ್ದ?
ನಾಲ್ಕು ದಿಕ್ಕಿಗೂ ಸಂಪರ್ಕ ಕಲ್ಪಿಸುವ ನಿಟ್ಟನಲ್ಲಿ ಇದನ್ನು ಚತುಷ್ಟಥ ರಸ್ತೆ ಎಂದು ಕರೆಯಲಾಗುತ್ತದೆ. ಇಂತಹ ಬೃಹತ್ ರಸ್ತೆಯ ಕಾಮಗಾರಿ ಐದೇ ದಿನಗಳಲ್ಲಿ ಹಾಳಾಗುತ್ತದೆ ಎಂದರೆ ಎಂಥವರೂ ಆಶ್ಚರ್ಯ ಪಡುತ್ತಾರೆ. ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮದೇ ಪಕ್ಷದ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದಾರೆ. ಟೀಕಾಕಾರರ ಸಾಲಿಗೆ ವರುಣ್ ಗಾಂಧಿ ಸೇರಿಕೊಂಡು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ. 15,000 ಕೋಟಿ ರೂಪಾಯ ವೆಚ್ಚದಲ್ಲಿ ನಿರ್ಮಿಸಲಾದ ಎಕ್ಸ್‌ಪ್ರೆಸ್‌ವೇ 5 ದಿನಗಳಿಂದ ಸುರಿದ ಮಳೆಗೆ ಹಾಳಾಗಿದೆ.

ಕೇಂದ್ರ ಸರ್ಕಾದ ವಿರುದ್ಧ ವಿಪಕ್ಷಗಳು ಕಿಡಿ
ಬುಲ್ಡೋಜರ್‌ಗಳನ್ನು ತಂದು ರಸ್ತೆಯ ದುರಸ್ತಿ ಕಾರ್ಯವನ್ನು ಮಾಡಲಾಗಿದ್ದು, ತಕ್ಷಣ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಯೊಬ್ಬರು ತಿಳಿಸಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎಕ್ಸ್‌ಪ್ರೆಸ್‌ವೇ ಹಾಳಾಗಿರುವುದರ ಬಗ್ಗೆ ಟ್ವೀಟ್ ಮಾಡಿದ್ದು, ಇದು "ಬಿಜೆಪಿಯ ಅರೆಮನಸ್ಸಿನ ಅಭಿವೃದ್ಧಿಯ ಗುಣಮಟ್ಟದ ಮಾದರಿ" ಎಂದು ಕರೆದರು. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಅನ್ನು ದೊಡ್ಡ ದೊಡ್ಡ ವ್ಯಕ್ತಿಗಳು ಬಂದು ಉದ್ಘಾಟಿಸಿದರು. ಒಂದು ವಾರದಲ್ಲಿ, ದೊಡ್ಡ ಭ್ರಷ್ಟಾಚಾರದ ಸತ್ಯವೊಂದು ಹೊರಬಿದ್ದಿದೆ ಎಂದು ಕಿಡಿಕಾರಿದ್ದಾರೆ. ಇನ್ನು ಈ ಬಗ್ಗೆ ಯುಪಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಉತ್ತರ ಪ್ರದೇಶವನ್ನು ಗುಂಡಿ ಮುಕ್ತ ಮಾಡುವುದಾಗಿ ಭರವಸೆ ನೀಡಿ ನಿರ್ಮಿಸಿದ ಹೊಸ ಎಕ್ಸ್‌ಪ್ರೆಸ್‌ವೇ ಈಗ ಹಾಳಾಗಿದೆ ಎಂದು ಬಿಜೆಪಿ ಸರ್ಕಾರಕ್ಕೆ ತಿರುಗೇಟು ನೀಡಿದೆ. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಂಡ ವಾರದಲ್ಲೇ ಹಾಳಾಗಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ ಎಂದು ಆಕ್ರೋಶ ಹೊರಹಾಕಿದೆ. ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ವಾರದ ಒಳಗೆ ಹಾಳಾಗಿರುವುದು ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಸ್ವತಃ ಮೋದಿ ಅವರೇ ಉದ್ಘಾಟಿಸಿದ ಕಾರಣ ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಕೆಂಡ ಕಾರುತ್ತಿವೆ.

ಯಾವ ಪ್ರದೇಶಗಳಿಗೆ ಹೆದ್ದಾರಿ ಸಂಪರ್ಕ?
ಜುಲೈ 16ರಂದು ಪ್ರಧಾನಿ ಮೋದಿ ಅವರು ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟಿಸಿದ್ದರು. ಚತುಷ್ಕೋನದ ಎಕ್ಸ್‌ಪ್ರೆಸ್‌ವೇ ಭಾರತ್ ಕೂಪ್, ಇಟಾವಾದಲ್ಲಿನ ಕುದುರೆಲ್‌ನೊಂದಿಗೆ ಸಂಪರ್ಕಿಸುತ್ತಿದ್ದು, ಇದು 7 ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಈ ರಸ್ತೆಯು ಆಗ್ರಾ-ಲಕ್ನೋ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಗಳಿಗೂ ಸಂಪರ್ಕ ಕಲ್ಪಿಸುತ್ತದೆ ಎಂದು ಉತ್ತರಪ್ರದೇಶ ಎಕ್ಸ್‌ಪ್ರೆಸ್‌ವೇ ಪ್ರಾಧಿಕಾರ ತಿಳಿಸಿದೆ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 296 ಕಿಲೋ ಮೀಟರ್ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಜಲೌನ್ ಜಿಲ್ಲೆಯ ಬಳಿಯಿರುವ ಛಿರಿಯಾ ಸಲೆಂಪುರ್‌ನಲ್ಲಿ ಕುಸಿದಿದೆ. ಮತ್ತು ಗುರುವಾರ ಸುರಿದ ಭಾರಿ ಮಳೆಗೆ ಆಳವಾದ ಗುಂಡಿಗಳು ಬಿದ್ದಿವೆ. ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವರುಣ್ ಗಾಂಧಿ ಆಗ್ರಹಿಸಿದ್ದಾರೆ.












Click it and Unblock the Notifications