ಗುಜರಾತ್‌ನಲ್ಲಿ ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸಿದ ದಲಿತ ಕುಟುಂಬದ ಮೇಲೆ ಹಲ್ಲೆ
ಅಹಮದಾಬಾದ್, ಅಕ್ಟೋಬರ್ 04: ಗುಜರಾತ್‌ನ ಗ್ರಾಮವೊಂದರಲ್ಲಿ ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸಿದ 17 ವರ್ಷದ ದಲಿತ ಬಾಲಕ ಮತ್ತು ಆತನ ಕುಟುಂಬದ ಮೇಲೆ ಹಲ್ಲೆ ನಡೆಸಿ, ಕಲ್ಲು ತೂರಾಟ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಸಂಬಂಧ ಕಪದ್ವಾಂಜ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಪದ್ವಾಂಜ್‌ನ ನರಸಿಂಹಪುರ ಗ್ರಾಮದಲ್ಲಿ ವಾಸವಾಗಿರುವ ಅಜಯ್ ವಂಕರ್ ಎಂಬ ದಲಿತ ಹುಡುಗನ ಮೇಲೆ ಆರೋಪಿಯಾದ ಹಿಮಾಂಶು ಠಾಕೋರ್ ಹಲ್ಲೆ ನಡೆಸಿದ್ದಾನೆ. ಅಲ್ಲದೆ ತನ್ನಿಂದ ದೂರ ಕಾಯ್ದುಕೊಳ್ಳುವಂತೆ ಪಟಾಕಿ ಹಚ್ಚಿ ಆ ಹುಡುಗನ ಮೇಳೆ ಎಸೆದಿದ್ದಾನೆ ಎಂದು ತಿಳಿದು ಬಂದಿದೆ.

ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸಿದ ಅಜಯ್ ವಂಕರ್ ಆತನ ತಂದೆ ಭಾನು ವಂಕರ್ ಅವರು ಈ ಸಂಬಂಧ ದೂರು ನೀಡಿದ್ದಾರೆ. ಅಜಯ್ ವಂಕರ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐಟಿಐ) ವಿದ್ಯಾರ್ಥಿಯಾಗಿದ್ದಾನೆ.
ಅಜಯ್ ಮತ್ತು ಕುಟುಂಬದವರ ಮೇಲೆ ಹಲ್ಲೆ:
ಕಳೆದ ಭಾನುವಾರ ಅಜಯ್ ತಂದೆ ಭಾನು ತನ್ನ ಮಗನ ಮೇಲೆ ಹಲ್ಲೆ ಮಾಡಿರುವ ವಿಷಯವನ್ನು ತಿಳಿಸಲು ಹಿಮಾಂಶುವಿನ ಮನೆಗೆ ಹೋದರು. ಬಳಿಕ ಸೋಮವಾರ ಬೆಳಿಗ್ಗೆ ಭಾನು, ಅಜಯ್ ಮತ್ತು ಇತರ ಕುಟುಂಬ ಸದಸ್ಯರು ಹಿಮಾಂಶುವಿನ ನರಸಿಂಹಪುರ ಗ್ರಾಮದ ತಮ್ಮ ಮನೆಯಲ್ಲಿದ್ದರು, ಆಗ ಕೆಲವು ಬೈಕ್‌ಗಳು ಆತನ ಮನೆ ಬಳಿ ಬಂದವು. ಆಗ ಹಿಮಾಂಶು ಮತ್ತು ಅವನ ಸಹಚರರು ಆರಂಭದಲ್ಲಿ ಅಜಯ್‌ನನ್ನು ಅವನ ತಲೆ ಕೂದಲಿನಿಂದ ಹೊರಗೆ ಎಳೆದುಕೊಂಡು ಹೋದರು. ಬಳಿಕ ಆತನ ಮೇಲೆ ಜಾತಿ ಆಧಾರಿತ ನಿಂದನೆ ಮಾಡಿ ಹಲ್ಲೆ ನಡೆಸಿದರು.
ಗ್ರಾಮಸ್ಥರು ಜಮಾಯಿಸಿದ ನಂತರ ಆರೋಪಿ ಪರಾರಿ:
ಹಲ್ಲೆ ನಡೆಯವಾಗ ಅಜಯ್ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿದರು. ಆದರೆ ಅವರ ಮೇಲೂ ದೈಹಿಕ ಹಲ್ಲೆ ನಡೆಸಲಾಯಿತು. ಆರು ಜನರ ಗುಂಪು ಅಜಯ್ ತಲೆಗೆ ಕಲ್ಲಿನಿಂದ ಹೊಡೆದು ತೀವ್ರ ಗಾಯಗೊಳಿಸಿತು. ಅಜಯ್‌ನ ತಾಯಿ ತೇಜಶ್ರೀ ತನ್ನ ಮಗನನ್ನು ರಕ್ಷಿಸಲು ಯತ್ನಿಸಿದಳು. ಆದರೆ ಆಕೆಯ ತಲೆಗೆ ಕಲ್ಲಿನಿಂದ ಹೊಡೆಯಲಾಯಿತು. ಅಜಯ್ ಮತ್ತು ಅವರ ಕುಟುಂಬ ಸದಸ್ಯರನ್ನು ಕೊಲ್ಲುವ ಬೆದರಿಕೆ ಹಾಕಲಾಯಿತು. ಹಲ್ಲೆಯಾಗುತ್ತಿದ್ದಾಗ ಇತರ ಗ್ರಾಮಸ್ಥರು ಸೇರಲು ಪ್ರಾರಂಭಿಸಿದಾಗ ಆರೋಪಿಗಳು ಓಡಿಹೋದರು.
ಪೊಲೀಸ್ ದೂರು ದಾಖಲು:
ಅಜಯ್ ತಂದೆ ಭಾನು ನಂತರ ಪೊಲೀಸರ ಬಳಿ ಹೋಗಿ ಗಲಭೆ, ಕಾನೂನುಬಾಹಿರ ಸಭೆ, ಗಂಭೀರ ಹಾನಿ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರುಗಳನ್ನು ದಾಖಲಿಸಿದರು.












Click it and Unblock the Notifications