Delhi Election 2025 Exit Poll: ದೆಹಲಿಯಲ್ಲಿ ಎಎಪಿ ಮತ್ತೆ ಅಧಿಕಾರಕ್ಕೆ, ಬಾಡಿದ ಕಮಲ, 'ಕೈ'ಗೆ ಮುಖಭಂಗ

ಬೆಂಗಳೂರು, ಫೆಬ್ರವರಿ 05: ದೆಹಲಿ ವಿಧಾನಸಭಾ ಚುನಾವಣೆಗೆ 2025 ಇಂದು (ಫೆ.5) ಮತದಾನ ನಡೆದಿದ್ದು, ಸುಮಾರು ಶೇಕಡಾ 57ರಷ್ಟು ಮತದಾನ ಆಗಿದೆ. ಈ ದೆಹಲಿ ಚುನಾವಣೋತ್ತರ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ಬುಧವಾರ Dainik Bhaskar Exit Poll ಪ್ರಕಟಿಸಿದೆ. ಇದರ ಪ್ರಕಾರ, ದೆಹಲಿಯಲ್ಲಿ ಮತ್ತೆ ಆಡಳಿತ ಪಕ್ಷ ಆಮ್ ಆದ್ಮಿ ಪಕ್ಷ (AAP) ಮುನ್ನಡೆ ಸಾಧಿಸಬಹುದು ಎಂದು ತಿಳಿಸಿದೆ. ಇನ್ನು ಬಿಜೆಪಿಗೆ ಹಿನ್ನಡೆ ಆದರೆ, ಕಾಂಗ್ರೆಸ್ ತೀರಾ ಹಿನ್ನಡೆ, ಮುಖಭಂಗ ಅನುಭವಿಸಲಿದೆ ಎಂದು ತಿಳಿಸಿದೆ.

ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಒಂದೇ ಹಂತದಲ್ಲಿ ಮತದಾನ ನಡೆದಿದೆ. ಅಧಿಕಾರ ಹಿಡಿಯುವ ಪಕ್ಷ ಮ್ಯಾಜಿಕ್ ನಂಬರ್ ಕನಿಷ್ಠ 36 ಕ್ಷೇತ್ರಗಳಲ್ಲಿ ಜಯ ಗಳಿಸಬೇಕು. ಈ ಪೈಕಿ Dainik Bhaskar ಎಕ್ಸಿಟ್ ಪೋಲ್ ಪ್ರಕಾರ, ಎಎಪಿಯು 43-47 ಸೀಟುಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ.

Dainik Bhaskar Delhi Exit Poll Result 2025 Highlights AAP gets 43-47 Seats BJP gets 23-27 seats dereated

ಇನ್ನೂ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯು ಕೇವಲ 23-27 ರಷ್ಟು ಸೀಟು ಗೆಲ್ಲಬಹುದು. ಉಳಿದಂತೆ ಕಾಂಗ್ರೆಸ್ 01 ಸೀಟಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ. ಎಎಪಿಗೆ ತೀವ್ರ ಪೈಪೋಟಿ ಕೊಡುವಲ್ಲಿ ಬಿಜೆಪಿ ಯಶಸ್ಸು ಕಂಡಿದೆ ಹೊರತು ಎಎಪಿ ಮೀರಿಸಿ ಅಧಿಕಾರ ಹಿಡಿಯುವಲ್ಲಿ ಈ ಬಾರಿಯು ಸೋತಿದೆ ಎಂದು ಹೇಳಬಹುದು.

ದೆಹಲಿಯಲ್ಲಿ ಎಎಪಿ ಮೂರನೇ ಭಾರಿಗೆ ಅಧಿಕಾರ ಹಿಡಿಯವಲ್ಲಿ ಅದರ ಜನಪರ ಕಾರ್ಯಕ್ರಮಗಳು ಕೈಹಿಡಿದಿವೆ ಎನ್ನಬಹುದು. ಹೀಗಾಗಿಯೇ ಹಲವು ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಆಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಜೈಲಿಗೆ ಹೋದರು, ಒಂದಷ್ಟು ರಾಜಕೀಯ ಬದಲಾವಣೆ ಆದರೂ ಸಹಿತ ಜನರು ಎಎಪಿಗೆ ಆಶೀರ್ವಾದ ಮಾಡಿದ್ದಾರೆ ಎಂಬುದು ಇಂದಿನ ಎಕ್ಸಿಟ್ ಪೋಲ್‌ನಿಂದ ತಿಳಿದು ಬರುತ್ತಿದೆ.

ಫೆಬ್ರವರಿ 08ರಂದು ಅಧಿಕೃತ ಫಲಿತಾಂಶ ಪ್ರಕಟ

ಸದ್ಯ ಎಕ್ಸಿಟ್ ಪೋಲ್ ಸಮೀಕ್ಷೆ ಕೇವಲ ತಾತ್ಕಾಲಿಕವಾಗಿದ್ದು, ಇದೇ ಫೆಬ್ರವರಿ 08ರಂದು ಕೇಂದ್ರ ಚುಣಾವಣೆ ಆಯೋಗವು ದೆಹಲಿ ಅಸೆಂಬ್ಲಿ ಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟಿಸಲಿದೆ. ಅಂದು ಬೆಳಗ್ಗೆ 07 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ದೆಹಲಿ ಗದ್ದುಗೆ ಯಾರ ಪಾಲು ಎಂಬುದು ಗೊತ್ತಾಗಿ ಬಿಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+