ಭಾರತಕ್ಕೆ ಜೆಕ್‌ ರಿಪಬ್ಲಿಕ್‌ ಪ್ರಯಾಣ ನಿರ್ಬಂಧ: 200 ರಷ್ಟು ಭಾರತೀಯರ ಜೀವನ ಅತಂತ್ರ

ನವದೆಹಲಿ, ಆ.10: ಸುಮಾರು 200 ಐಟಿ ವೃತ್ತಿಪರರು, ಹೊಸಬರು, ಸಂಶೋಧನಾ ವಿದ್ವಾಂಸರ ಗುಂಪು, ಮಾನ್ಯ ಪಡೆದ ಜೆಕ್‌ ರಿಪಬ್ಲಿಕ್‌ ವೀಸಾ ಹೊಂದಿರುವವರು ಭಾರತದ ಕೋವಿಡ್ -19 ಪ್ರಯಾಣ ನಿರ್ಬಂಧಗಳ ನಡುವೆ ಯುರೋಪಿಯನ್ ದೇಶದ ತಮ್ಮ ಉದ್ಯೋಗದಾತರೆಡೆ ತೆರಳಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಜೆಕ್‌ ರಿಪಬ್ಲಿಕ್‌ ಆಗಸ್ಟ್ 2 ರ ನಂತರ ವೀಸಾಗಳನ್ನು ಪಡೆದವರಿಗೆ ಮಾತ್ರ ಅನುಮತಿ ನೀಡಿದೆ. ಆದರೆ ಇತರರು ಇನ್ನೂ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

ಚೆಕ್‌ ರಿಪಬ್ಲಿಕ್‌ ಕಚೇರಿಯ ಅಧಿಕಾರಿಗಳು ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, "ಜೆಕ್‌ ರಿಪಬ್ಲಿಕ್‌ಗೆ ಪ್ರವೇಶಿಸುವ ಷರತ್ತುಗಳನ್ನು ಜೆಕ್‌ ರಿಪಬ್ಲಿಕ್‌ನ ಆರೋಗ್ಯ ಸಚಿವಾಲಯದ ರಕ್ಷಣಾತ್ಮಕ ದೃಷ್ಟಿಕೋನದಿಂದ ನಿಯಂತ್ರಿಸಲಾಗುತ್ತದೆ," ಎಂದು ಹೇಳಿದ್ದಾರೆ.

"ರಕ್ಷಣಾತ್ಮಕ ಅಳತೆಯ ಕೊನೆಯ ನವೀಕರಣದ ಪ್ರಕಾರ, ಭಾರತದಿಂದ ಆಗಮಿಸುವ ಹಲವಾರು ವರ್ಗದ ಪ್ರಯಾಣಿಕರು ಜೆಕ್ ರಿಪಬ್ಲಿಕ್‌ ಅನ್ನು ಪ್ರವೇಶಿಸಬಹುದು, ಇದರಲ್ಲಿ ಜೆಕ್ ಅಧಿಕಾರಿಗಳು ನೀಡಿದ ದೀರ್ಘಕಾಲೀನ ಅಥವಾ ಶಾಶ್ವತ ಅಥವಾ ತಾತ್ಕಾಲಿಕ ನಿವಾಸ ಪರವಾನಗಿಯನ್ನು ಹೊಂದಿರುವವರು ಜೆಕ್ ರಿಪಬ್ಲಿಕ್‌ ಅನ್ನು ಪ್ರವೇಶಿಸಬಹುದು. ವೃತ್ತಿಪರ ಕ್ರೀಡಾಪಟುಗಳು ಅಥವಾ ಅಂತರಾಷ್ಟ್ರೀಯವಾಗಿ ದೇಶಗಳನ್ನು ಪ್ರತಿನಿಧಿಸುವ ವ್ಯಕ್ತಿಗಳು ಮತ್ತು ಆಗಸ್ಟ್ 2, 2021 ರ ನಂತರ ನೀಡಲಾದ ದೀರ್ಘಾವಧಿಯ ವೀಸಾ ಹೊಂದಿರುವವರು, ವಿದೇಶಿ ಪ್ರಜೆಗಳು ಜೆಕ್ ಗಣರಾಜ್ಯದ ಪ್ರದೇಶಕ್ಕೆ ಪ್ರವೇಶಿಸಲು ಅಧಿಕಾರ ನೀಡಿದರೆ ತೆರಳಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.

2021-2022 ಶೈಕ್ಷಣಿಕ ವರ್ಷದಲ್ಲಿ ಜೆಕ್ ವಿಶ್ವವಿದ್ಯಾನಿಲಯಗಳಲ್ಲಿ ಮಾನ್ಯತೆ ಪಡೆದ ಅಧ್ಯಯನ ಕಾರ್ಯಕ್ರಮಗಳಲ್ಲಿ ಅಧ್ಯಯನದ ಉದ್ದೇಶಕ್ಕಾಗಿ ಜೆಕ್ ರಾಯಭಾರ ಕಚೇರಿಯು ದೀರ್ಘಾವಧಿಯ ವೀಸಾಗಳು ಮತ್ತು ದೀರ್ಘಾವಧಿಯ ನಿವಾಸ ಪರವಾನಗಿಗಳಿಗಾಗಿ ವೀಸಾ ಅರ್ಜಿಗಳನ್ನು ಸ್ವೀಕರಿಸಲು ಅಧಿಕೃತಗೊಳಿಸಲಾಗಿದೆ.

 ಅಲ್ಲೂ ಇಲ್ಲ, ಇಲ್ಲೂ ಇಲ್ಲ: ಉದ್ಯೋಗವಿಲ್ಲದೇ ಸಂಕಷ್ಟ

ಅಲ್ಲೂ ಇಲ್ಲ, ಇಲ್ಲೂ ಇಲ್ಲ: ಉದ್ಯೋಗವಿಲ್ಲದೇ ಸಂಕಷ್ಟ

ಉತ್ತರಪ್ರದೇಶದ 25 ವರ್ಷದ ಶ್ರೀಸ್ತಿ ವರ್ಮಾ ಎಂಬಾಕೆ, ಏಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ತನ್ನ ಕೆಲಸವನ್ನು ತೊರೆದರು. ಜೂನ್ ಅಂತ್ಯದಲ್ಲಿ ಜೆಕ್ ಮೂಲದ ಕಂಪನಿಯಿಂದ "ಜೀವಮಾನದಲ್ಲಿಯೇ ಮೊದಲ ಬಾರಿಗೆ" ಉದ್ಯೋಗ ದೊರೆಯಿತು. ತನ್ನ ಕುಟುಂಬದಲ್ಲಿ ಏಕೈಕ ದುಡಿಯುವ ವ್ಯಕ್ತಿ ಆಗಿರುವ ವರ್ಮಾ ಈಗ ತನ್ನ ಉಳಿತಾಯದಿಂದ ಬದುಕುವಂತಾಗಿದೆ. ಹಾಗೆಯೇ ಉಳಿತಾಯವೂ ಖಾಲಿಯಾಗುತ್ತಿದೆ ಎಂದು ಹೇಳುತ್ತಾರೆ. ಈಗ ಇಲ್ಲಿನ ಉದ್ಯೋಗವೂ ಇಲ್ಲ, ಅಲ್ಲಿನ ಉದ್ಯೋಗವೂ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. "ಅಗತ್ಯ ಪ್ರಯಾಣಕ್ಕೆ ಸರ್ಕಾರ ಅನುಮತಿ ನೀಡಿದೆ. ನಮಗೆ, ನಮ್ಮ ಕೆಲಸ ಅತ್ಯಗತ್ಯ. ನನ್ನ ನಿವೃತ್ತ ಪೋಷಕರು ಮತ್ತು ನನ್ನ ಕಾಲೇಜಿಗೆ ಹೋಗುವ ಸಹೋದರ ನನ್ನನ್ನು ಅವಲಂಬಿಸಿದ್ದಾರೆ. ಕೊರೊನಾ ವೈರಸ್‌ ಸಾಂಕ್ರಾಮಿಕದ ನಡುವೆ ಉಳಿತಾಯವು ಖಾಲಿಯಾಗುತ್ತಿರುವುದರಿಂದ, ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನಾನು ಜೆಕ್‌ನಲ್ಲಿರುವ ನನ್ನ ಸಂಸ್ಥೆಗೆ ಇನ್ನೂ ಹೋಗದ ಕಾರಣ, ನಾನು ಇನ್ನೂ ಪೂರ್ಣಾವಧಿ ಉದ್ಯೋಗಿಯಾಗಿಲ್ಲ ಮತ್ತು ಅವರ ಉದ್ಯೋಗದ ಆಫರ್‌ ನನ್ನ ಕೈ ಜಾರಿದೆ. ಬೇರೆ ಉದ್ಯೋಗ ಲಭಿಸುವ ಕಾರಣ ಹಳೆಯ ಸಂಸ್ಥೆಯಲ್ಲಿ ಉದ್ಯೋಗ ತೊರೆದ ಕಾರಣ ನಾನು ನನ್ನ ಹಳೆಯ ಸಂಸ್ಥೆಗೆ ಪುನಃ ಸೇರಲು ಸಾಧ್ಯವಿಲ್ಲ ಅಥವಾ ನನ್ನ ಟಿಕೆಟ್ ಬಂದಾಗ ಹೋಗಬಹುದು ಎಂದು ಅದನ್ನು ಬಿಟ್ಟು ಬೇರೆ ಕೆಲಸ ಹುಡುಕಲು ಸಾಧ್ಯವಿಲ್ಲ. ಪ್ರಸ್ತುತ ಭಾರತ ಸರ್ಕಾರವು ಜೆಕ್ ಜೊತೆ ಮಾತುಕತೆ ನಡೆಸಬೇಕು ಮತ್ತು ನನ್ನ ಉದ್ಯೋಗ ಮತ್ತು ವೀಸಾ ಸ್ಥಿತಿಯ ಬಗ್ಗೆ ಸ್ಪಷ್ಟತೆಯನ್ನು ಹೊಂದಬೇಕು," ಎಂದು ಮನವಿ ಮಾಡಿದ್ದಾರೆ.

 #openczembind ಅಭಿಯಾನ

#openczembind ಅಭಿಯಾನ

ಈ ಕೋವಿಡ್‌ ಕಾರಣದಿಂದ ಜಾರಿಗೆ ತರಲಾದ ಪ್ರಯಾಣ ನಿರ್ಬಂಧದಿಂದ ಸಂಕಷ್ಟಕ್ಕೆ ಒಳಗಾದ ವೃತ್ತಿಪರರು #openczembind ಎಂಬ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಹಾಗೆಯೇ change.org ನಲ್ಲಿ ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ್ದಾರೆ. ಈ ಸಹಿ ಅಭಿಯಾನದಲ್ಲಿ ಆಗಸ್ಟ್ 8 ರ ವೇಳೆಗೆ 600 ಕ್ಕೂ ಹೆಚ್ಚು ಸಹಿಗಳನ್ನು ಪಡೆದಿದ್ದಾರೆ ಎಂದು ಆನ್‌ಲೈನ್ ಅರ್ಜಿಯು ಹೇಳುತ್ತದೆ. "ಭಾರತದಲ್ಲಿ ಕೋವಿಡ್ -19 ರ ಹಿನ್ನೆಲೆ ಭಾರತದ ಜೆಕ್ ರಾಯಭಾರ ಕಚೇರಿ ಏಪ್ರಿಲ್ 2021 ರ ಅಂತ್ಯದಿಂದ ಇಲ್ಲಿಯವರೆಗೆ ತನ್ನ ಚಟುವಟಿಕೆಗಳನ್ನು ನಿಲ್ಲಿಸಿದೆ. ಅಂದಿನಿಂದ ಇಂದಿನವರೆಗೆ ಭಾರತದ ಪರಿಸ್ಥಿತಿ ಸುಧಾರಿಸಿದೆ ಮತ್ತು ಇತರ ಹಲವು ಇಯು ರಾಷ್ಟ್ರಗಳು (ಉದಾಹರಣೆಗೆ, ಜರ್ಮನಿ, ನೆದರ್‌ಲ್ಯಾಂಡ್ಸ್, ಫ್ರಾನ್ಸ್, ಸ್ಪೇನ್, ಬೆಲ್ಜಿಯಂ, ಆಸ್ಟ್ರಿಯಾ, ಸ್ಲೊವಾಕಿಯಾ, ಕ್ರೊಯೇಷಿಯಾ, ಬಹುತೇಕ ಎಲ್ಲಾ ಇಯು) ಈಗಾಗಲೇ ಅಗತ್ಯ ಪ್ರಯಾಣವನ್ನು ಅನುಮತಿಸಿದೆ. ಆದರೆ ಭಾರತದಿಂದ ಅಗತ್ಯ ಪ್ರಯಾಣ (ಸಂಶೋಧಕರು, ಉದ್ಯೋಗಿ ಉದ್ಯೋಗಿಗಳು ಮತ್ತು ಇಯು ಅಲ್ಲದ ಸದಸ್ಯರ ಕುಟುಂಬ ಪುನರ್ಮಿಲನಕ್ಕೆ ಸಂಬಂಧಿಸಿದೆ) ಜೆಕ್‌ ನಿಷೇಧಿಸುವುದನ್ನು ಮುಂದುವರಿಸಿದೆ. ಬಹುತೇಕ ನಾವೆಲ್ಲರೂ ನಮ್ಮ ಉದ್ಯೋಗ ಒಪ್ಪಂದಗಳನ್ನು ಮತ್ತು ಸಂಶೋಧನಾ ಸ್ಥಾನಗಳಿಗಾಗಿ ಹೋಸ್ಟಿಂಗ್ ಒಪ್ಪಂದಗಳನ್ನು ನಾಲ್ಕು/ಐದು ತಿಂಗಳುಗಳ ಕಾಲ ಕೈಯಲ್ಲಿ ಇರಿಸಿದ್ದೇವೆ. ಈ ಸಮಯದಲ್ಲಿ ನಮ್ಮ ವೃತ್ತಿಜೀವನವನ್ನು ಪಣಕ್ಕಿಡಲಾಗಿದೆ. ಈ ಅನಿಶ್ಚಿತತೆ ಮತ್ತು ವಿಳಂಬವು ಅನೇಕರಲ್ಲಿ ಅಗಾಧವಾದ ಭಾವನಾತ್ಮಕ, ಮಾನಸಿಕ ಮತ್ತು ಹಣಕಾಸಿನ ತೊಂದರೆಯನ್ನು ಉಂಟು ಮಾಡಿದೆ," ಎಂದು ಈ ಅರ್ಜಿಯು ಉಲ್ಲೇಖ ಮಾಡಿದೆ.

 ವಿದ್ಯಾರ್ಥಿಗಳ ಜೀವನ ಅತಂತ್ರ

ವಿದ್ಯಾರ್ಥಿಗಳ ಜೀವನ ಅತಂತ್ರ

ಮೇರಿ ಕ್ಯೂರಿ ಅರ್ಲಿ ಸ್ಟೇಜ್ ರಿಸರ್ಚರ್ ಅನುದಾನವನ್ನು ಹೊಂದಿರುವ 29 ವರ್ಷದ ಸಂಶೋಧನಾ ವಿದ್ಯಾರ್ಥಿಯೋರ್ವ ತನ್ನ ಪೋಷಕರನ್ನು ಭೇಟಿ ಮಾಡಲು ಭಾರತಕ್ಕೆ ಭೇಟಿ ನೀಡಿದ್ದರು.; ಆದರೆ ಈಗ ಕೋವಿಡ್‌ ಸಂಬಂಧಿತ ಪ್ರಯಾಣ ನಿರ್ಬಂಧದಿಂದಾಗಿ ಮತ್ತೆ ತೆರಳಲು ಸಾಧ್ಯವಾಗಲಿಲ್ಲ. ಅತ್ಯಂತ ಪ್ರತಿಷ್ಠಿತ ಫೆಲೋಶಿಪ್ ಹೊಂದಿರುವವರು ಈ ವಿದ್ಯಾರ್ಥಿಯು ತನ್ನ ಅತ್ರಂತ್ರ ಸ್ಥಿತಿಯ ಬಗ್ಗೆ ನ್ಯೂಸ್‌ 18 ಜೊತೆ ಮಾತನಾಡಿದ್ದಾರೆ. "ವಿದ್ಯಾರ್ಥಿಗಳಿಗೆ ಹಿಂತಿರುಗಲು ಅವಕಾಶವಿದೆ ಆದರೆ ಸಂಶೋಧಕರಿಗೆ ಅಲ್ಲ ಏಕೆಂದರೆ ನಮ್ಮ ಸ್ಟೈಫಂಡ್‌ಗಳು ಹೆಚ್ಚು ಮತ್ತು ತೆರಿಗೆ ವಿಧಿಸಲಾಗುತ್ತದೆ. ನಾನು ತಾಂತ್ರಿಕವಾಗಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದೇನೆ ಮತ್ತು ನನ್ನ ಸಂಶೋಧನೆಯನ್ನು ಪೂರ್ಣಗೊಳಿಸಲು ನಾನು ವಿಶ್ವವಿದ್ಯಾಲಯದಲ್ಲಿರಬೇಕು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ದಾಖಲಾಗುವ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಕ್ಕೆ ಕರೆಯುವುದರಿಂದ, ಸಂಶೋಧನೆಯು ಬಾಕಿ ಉಳಿದಿದೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು

ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು

ಝಾನ್ಸಿಯ 26 ವರ್ಷದ ವೃತ್ತಿಪರ ಯುವತಿ ಉಪಾಸನಾ ಶ್ರೀವಾಸ್ತವ, ಇಂದು ನಾನು "ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದಣಿದಿದ್ದೇನೆ" ಎಂದು ಹೇಳುತ್ತಾರೆ. ಈಕೆ ಕೂಡ ಜೆಕ್‌ನಲ್ಲಿ ತನ್ನ ಕೆಲಸಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. "ನಾವು ಸುಮಾರು 200 ಜನರ ಒಂದು ಸಣ್ಣ ಗುಂಪು, ನಮ್ಮದು ಸಣ್ಣ ಗುಂಪು ಆಗಿರುವುದರಿಂದ ನಮ್ಮ ಧ್ವನಿಗಳು ಕೇಳಿಸುವುದಿಲ್ಲ ಎಂದು ಅರ್ಥೈಸಬಾರದು. ನಮಗೆ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಮತ್ತು ನಮಗೆ ಸ್ವಲ್ಪ ಸ್ಪಷ್ಟತೆ ನೀಡಬೇಕು, ಈ ಸಮಸ್ಯೆಯನ್ನು ಬಗೆಹರಿಸಬೇಕು," ಎಂದು ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ಜೆಕ್ ರಿಪಬ್ಲಿಕ್‌ನ ಭಾರತದ ರಾಯಭಾರಿ ಹೇಮಂತ್ ಹೆಚ್ ಕೋಟಲ್ವಾರ್‌, "ರಾಯಭಾರ ಕಚೇರಿಗೆ ಈ ವಿಷಯ ಚೆನ್ನಾಗಿ ತಿಳಿದಿದೆ ಮತ್ತು ಜೆಕ್ ಅಧಿಕಾರಿಗಳನ್ನು ಅನುಸರಿಸುತ್ತಿದೆ," ಎಂದು ಹೇಳಿದರು. ಏಪ್ರಿಲ್-ಮೇನಲ್ಲಿ ಕೋವಿಡ್ -19 ರ ಎರಡನೇ ಕೋವಿಡ್‌ ಅಲೆಯಿಂದಾಗಿ ಜೆಕ್ ಆರೋಗ್ಯ ಅಧಿಕಾರಿಗಳು ಭಾರತವನ್ನು "ತೀವ್ರ ಅಪಾಯದ" ದೇಶಗಳ ಪಟ್ಟಿಗೆ ಸೇರಿಸಿದ್ದಾರೆ ಎಂದು ಕೋಟಲ್ವಾರ್ ಹೇಳಿದರು. "ನಾವು ನಿರಂತರವಾಗಿ ಜೆಕ್ ಅಧಿಕಾರಿಗಳ ಸಂಪರ್ಕದಲ್ಲಿದ್ದೇವೆ. ಭಾರತದಲ್ಲಿ ಸಿಲುಕಿರುವ ಮತ್ತು ಲಸಿಕೆ ಹಾಕಿಸಿಕೊಂಡ ಜನರು ಬೇಗನೆ ಜೆಕ್ ಗಣರಾಜ್ಯಕ್ಕೆ ಮರಳಬಹುದು. ನಮಗೆ ತಿಳಿದಿರುವಂತೆ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ಇತರ ಹಲವಾರು ವರ್ಗಗಳ ಭಾರತೀಯರು ಇನ್ನೂ ಸಿಲುಕಿಕೊಂಡಿದ್ದಾರೆ," ಎಂದಿದ್ದಾರೆ.

ಜೆಕ್ ಸಾರ್ವತ್ರಿಕ ಚುನಾವಣೆಗಳು ಅಕ್ಟೋಬರ್ ಮೊದಲ ವಾರದಲ್ಲಿ ನಡೆಯಲಿವೆ ಮತ್ತು ಡೆಲ್ಟಾ ರೂಪಾಂತರವು ರಾಜಕಾರಣಿಗಳಿಗೆ ಮಾತನಾಡುವ ವಿಷಯವಾಗಿದೆ. 10 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ದೇಶವು ಅಕ್ಟೋಬರ್ 2020 ರಿಂದ ಮೇ 2021 ರವರೆಗೆ 15,000 ದೈನಂದಿನ ಕೋವಿಡ್ -19 ಪ್ರಕರಣಗಳು ಮತ್ತು ಒಟ್ಟು 30,000 ಕ್ಕೂ ಹೆಚ್ಚು ಸಾವುಗಳೊಂದಿಗೆ ಅತ್ಯಂತ ಬಿಕ್ಕಟ್ಟನ್ನು ಎದುರಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜೆಕ್ ಅಧಿಕಾರಿಗಳು ಅತ್ಯಂತ ಜಾಗರೂಕರಾಗಿದ್ದಾರೆ ಎಂದು ಹೇಳಿದರು.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+