ಚಿತ್ರಗಳು: ಆಂಧ್ರದಲ್ಲಿ ಭಾರೀ ಮಳೆ ತಂದ ಅವಾಂತರ
ವಿಜಯವಾಡ, ಮೇ, 19: ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಉಂಟಾದ ಚಂಡಮಾರುತ ತಮಿಳುನಾಡಿನಿಂದ ಆಂಧ್ರ ಪ್ರದೇಶದ ಕಡೆ ಸಾಗಿದೆ. ಪರಿಣಾಮ ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇನ್ನು ಎರಡು ಮೂರು ದಿನ ಮುಂದುವರಿಯಲಿದೆ.
ಆಂಧ್ರದ ಕರಾವಳಿ ಪ್ರದೇಶಗಳು, ನೆಲ್ಲೂರು, ರಾಯಲುಸೀಮಾ ಪ್ರದೇಶಗಳು ಹೆಚ್ಚಿನ ಮಳೆ ಪಡೆದುಕೊಂಡಿವೆ. ತಿರುಪತಿಯಲ್ಲೂ ಸಹ ಮಳೆಯಾಗಿದೆ. ಶಹರ್, ಸುಲ್ಲಾರ್ ಪೇಟ್ ಭಾಗಗಳು 15 ಸೆಂಮೀ ಮಳೆ ಪಡೆದುಕೊಂಡಿವೆ. ಆಂಧ್ರದ ಕರಾವಳಿಯ 9 ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.[ವಾಯುಭಾರ ಕುಸಿತ: ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ]

ಆಂಧ್ರ ಸರ್ಕಾರ ಚಂಡಮಾರುತ ಭೀತಿ ಮತ್ತು ಪರಿಣಾಮ ಎದುರಿಸಲು ಸಿದ್ಧವಾಗಿದೆ. ಈ ಬಗ್ಗೆ ವಿಶಾಖಪಟ್ಟಣ ಜಿಲ್ಲಾಧಿಕಾರಿ ಎನ್. ಯುವರಾಜ್ ಅಧಿಕಾರಿಗಳ ಸಭೆ ಕರೆದು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. [ಮುಂಗಾರು ಪ್ರವೇಶ ಒಂದು ವಾರ ವಿಳಂಬ]
75 ಕಿಮೀ ವೇಗದಲ್ಲಿ ಮಾರುತಗಳು ಬೀಸುತ್ತಿದ್ದು ಈಗಾಗಲೇ ಆಸ್ತಿ ಪಾಸ್ತಿ ಹಾನಿ ಮಾಡಿವೆ. ಮುಂದಿನ ದಿನಗಳಲ್ಲಿ ಮಳೆ ಆರ್ಭಟ ಮುಂದುವರಿದರೆ ಬರದಿಂದ ತತ್ತರಿಸಿದ್ದ ರಾಜ್ಯ ಇನ್ನಷ್ಟು ಆತಂಕಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.












Click it and Unblock the Notifications