Biporjoy Cyclone: ಆರು ದಶಕದಲ್ಲಿ ಜೂನ್‌ನಲ್ಲಿ ಅಬ್ಬಿರಿಸುತ್ತಿರುವ 3ನೇ ದೊಡ್ಡ ಚಂಡಮಾರುತ, ಗುಜರಾತ್‌ಗೆ ಎಚ್ಚರಿಕೆ

ಬೆಂಗಳೂರು, ಜೂನ್ 14: ದೇಶದಲ್ಲಿ ಮುಂಗಾರು ಆರಂಭವಾಗುವ ಜೂನ್ ತಿಂಗಳಲ್ಲಿ ಇದುವರೆಗೂ ಮೂರು ಚಂಡಮಾರುತಗಳು ಬಂದು ಹೋಗಿವೆ. ಆ ಪೈಕಿ ಮೂರನೇಯದ್ದೇ ಈ ಬಿಪರ್‌ಜಾಯ್ ಚಂಡಮಾರುತ. ಪಥ ಬದಲಿಸಿರುವ ಬಿಪರ್‌ಜಾಯ್ ನಾಳೆ ಜೂನ್ 15ರಂದು ಗುಜರಾತ್‌ನ ಕಚ್‌ ಭಾಗಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಐಎಂಡಿ ಹೇಳಿಕೆ ಪ್ರಕಾರ, ಕಳೆದ ಸುಮಾರು ಆರು ದಶಕಗಳಲ್ಲಿ (58 ವರ್ಷ) ಮಳೆಗಾಲ ಆರಂಭದ ಜೂನ್ ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೃಹತ್ ಚಂಡಮಾರುತ ಎಂಬ ಹೆಗ್ಗಳಿಕೆ ಬಿಪರ್‌ಜಾಯ್‌ನದ್ದಾಗಿದೆ. ಸದ್ಯ ರೌದ್ರಾವತಾರ ಪಡೆದಿದ್ದು, ಅರಬ್ಬಿ ಸಮುದ್ರದ ಕರಾವಳಿ ತೀರ ಪ್ರದೇಶಗಳಲ್ಲಿ ಅಬ್ಬರಿಸುತ್ತಿದೆ.

Cyclone Of Biporjoy Is Biggest 3rd Cyclone Of June Month In Last Six Decades

ಮಹಾರಾಷ್ಟ್ರದ ಮುಂಬೈ, ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿ ಸೈಕ್ಲೋನ್ ಸಂಬಂಧ ಅಗತ್ಯ ಕಟ್ಟೆಚ್ಚರ ವಹಿಸಲಾಗಿದೆ. ಸೌರಾಷ್ಟ್ರ, ಕಛ್ ಪ್ರದೇಶಗಳು ಮತ್ತು ಪಾಕಿಸ್ತಾನದ ಕರಾವಳಿ ಪ್ರದೇಶಗಳಲ್ಲಿ ಸೈಕ್ಲೋನ್ ಹಾವಳಿ ಇಡಲಿದೆ. ಗುಜರಾತ್‌ನ ಕಚ್‌, ದೇವಭೂಮಿ ದ್ವಾರಕಾ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇದೆ. ಈ ಭಾಗದ ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್‌ ನೀಡಿದೆ.

ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ

ಇನ್ನೂ ಸಂಬಂಧ ಪಟ್ಟ ಸರ್ಕಾರಗಳು ಸಮುದ್ರ ತೀರ ಪ್ರದೇಶದ ಕೆಲವೆಡೆ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಜನರಿಗೆ ತಾತ್ಕಾಲಿಕ ಪನರ್ವಸತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಅಲ್ಲದೇ ಜನರ ಆರೋಗ್ಯ ರಕ್ಷಣೆಗು ಮುಂದಾಗಿರುವ ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿಕೊಂಡಿದೆ. ಇನ್ನೂ ಪ್ರಯಾಣಿಕರ ದೃಷ್ಟಿಯಿಂದ 69 ರೈಲುಗಳನ್ನು ರದ್ದು ಮತ್ತು ಕಾಂಡ್ಲಾ ಬಂದರಿನಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ.

ಜೂನ್ 15ರ ಸಂಜೆ ಬಿಪರ್‌ಜಾಯ್ ಕರಾವಳಿ ಭಾಗಕ್ಕೆ ಅಪ್ಪಳಿಸುವ ಮುನ್ಸೂಚನೆ ದೊರೆತ ಬೆನ್ನಲ್ಲೆ ಸರ್ಕಾರ, ಅಗತ್ಯಕ್ಕೆ ತಕ್ಕಂತೆ NDRF, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್ ಗಾರ್ಡ್‌ನ ಘಟಕಗಳ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿದೆ. ಕಚ್ ಜಿಲ್ಲೆಯ ಕರಾವಳಿ ಸಮೀಪವಿರುವ ನೂರಾರು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

Cyclone Of Biporjoy Is Biggest 3rd Cyclone Of June Month In Last Six Decades

ಬಿಪರ್‌ಜಾಯ್‌ ಗಾಳಿಯ ಗರಿಷ್ಠ ವೇಗ 150 kmph

ಕಚ್ ಜೊತೆಗೆ ಸೌರಾಷ್ಟ್ರ ಕರಾವಳಿ, ಮಾಂಡವಿ-ಜಖಾವು ಬಂದರು ಸಮೀಪ ಚಂಡಮಾರುತ ದ ವ್ಯಾಪಕ ಪ್ರಭಾವ ಕಂಡು ಬರಲಿದೆ. ಚಂಡಮಾರುತದ ಗಾಳಿಯ ವೇಗ ಪ್ರತಿ ಗಂಟೆಗೆ ಸುಮಾರು 135 ಕಿಲೋ ಮೀಟರ್‌ ನಷ್ಟಿರಲಿದೆ. ಇದು ಕೆಲವೊಮ್ಮೆ ಗರಿಷ್ಠ ವೇಗ 150 ಕಿಲೋ ಮೀಟರ್‌ಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಕಳ್, ಜಾಮ್‌ನಗರ್, ರಾಜ್ ಕೋಟ್, ದೇವಭೂಮಿ ದ್ವಾರಕಾ, ಜುನಾಗಢ ಮತ್ತು ಪೋರಬಂದರ್ ಪ್ರದೇಶಗಳಲ್ಲಿ ಚಂಡಮಾತುದ ಪರಿಣಾಮ ಉಂಟಾಗಲಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಟಿವಿ ನೈನ್ ವರದಿ ಮಾಡಿದೆ.

ಅರಬ್ಬೀ ಸಮುದ್ರದ ಕರಾವಳಿ ರಾಜ್ಯಗಳಾದ ಗುಜರಾತ್ ಜೊತೆಗೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಹ ನಿಗಾ ಇಡಲಾಗಿದೆ. ಮೀನುಗಾರರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.

ಇನ್ನೂ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗಯೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ ಇದೆ ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+