IMD Weather Forecast: ಚಂಡಮಾರುತ ಪರಿಣಾಮ, ಪೂರ್ವ ಮುಂಗಾರು ಮಳೆಯ ರಣಾರ್ಭಟ, ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 07: ಭಾರತ ಪ್ರವೇಶಿಸಿ ಪೂರ್ವ ಮುಂಗಾರು ಮಳೆಯು ಆರಂಭದಿಂದಲೂ ಅಬ್ಬರ ಶುರುವಿಟ್ಟುಕೊಂಡಿದೆ. ಇದೀಗ ಕರ್ನಾಟಕ ಸೇರಿದಂತೆ ವಿವಿಧೆಡೆ ತನ್ನ ರಣ ಸ್ವರೂಪ ತೋರುವ ಸಾಧ್ಯತೆ ಇದೆ. ಕಾರಣ ಸಮುದ್ರ ಮೇಲ್ಮೈನಲ್ಲಿ ಆದ ಕೆಲವು ವೈಪರಿತ್ಯಗಳು ಹಾಗೂ ಅವುಗಳ ತೀವ್ರತೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮುಂದಿನ ಕೆಲವು ದಿನಗಳ ಕಾಲ ಗುಡುಗು ಮಿಂಚು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆ ಅಬ್ಬರಿಸಲಿದೆ.
ಈಗಾಗಲೇ ಕರ್ನಾಟಕದಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ವಿವಿಧ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಅತ್ಯಧಿಕ ಮಳೆ ಆರ್ಭಟಿಸಲಿದೆ. ಎಲ್ಲೆಲ್ಲಿ ಎಂಬುದಕ್ಕಿಂತ ಮೊದಲು, ಸದ್ಯ ಚಂಡಮಾರುತದ ಪ್ರಭಾವ, ತೀವ್ರತೆ, ಎತ್ತರ, ಯಾವ ಭಾಗದಲ್ಲಿ ಮತ್ತು ಎಷ್ಟು ಕಡೆಗಳಲ್ಲಿ ವೈಪರಿತ್ಯ ಉಂಟಾಗಿದೆ ಎಂಬ ಮಾಹಿತಿ ಇಲ್ಲಿದೆ.

ಆಗ್ನೇಯ ಬಂಗಾಳಕೊಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ 8.30 ಗಂಟೆಗೆ ದಕ್ಷಿಣ ಬಂಗಾಳಕೊಲ್ಲಿಯ ಮಧ್ಯ ಭಾಗಗಳಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಇಲ್ಲಿನ ಚಂಡಮಾರುತ ಪರಿಚಲನೆ ಸಮುದ್ರ ಮಟ್ಟದಿಂದ ಸರಾಸರಿ 5.8 ಕಿ.ಮೀ ವರೆಗೆ ವಿಸ್ತರಿಸಿಕೊಂಡಿದೆ. ನಾಳೆ ಇನ್ನಷ್ಟು ತೀವ್ರಗೊಳ್ಳುವ ಸೂಚನೆ ಇದೆ.
ಚಂಡಮಾರುತ ಚಲಿಸುವ ದಿಕ್ಕು, ತೀವ್ರತೆ ವಿವರ
ಇದೇ ಚಂಡಮಾರತವು ಏಪ್ರಿಲ್ 08 ರವರೆಗೆ ನೈಋತ್ಯ ಬಂಗಾಳಕೊಲ್ಲಿಯ ಮೇಲೆ ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ. ನಂತರ ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯ ಮೇಲೆ ಉತ್ತರಕ್ಕೆ ಚಲಿಸುವ ಸಾಧ್ಯತೆ ಇದೆ. ಆಗ್ನೇಯ ಬಂಗಾಳಕೊಲ್ಲಿಯಿಂದ ದಕ್ಷಿಣ ತಮಿಳುನಾಡಿನವರೆಗೆ ಬಂಗಾಳಕೊಲ್ಲಿಯ ನೈಋತ್ಯಕ್ಕೆ ಚಂಡಮಾರುತದ ಪರಿಚಲನೆಯು ಸಾಗಬಹುದೆಂದು ಅಂದಾಜಿಸಲಾಗಿದೆ.

ಈ ವೇಳೆ ಆ ಚಂಡಮಾರುತವು ಸಮುದ್ರ ಮಟ್ಟದಿಂದ ಸರಾಸರಿ 1.5 ಕಿ.ಮೀ ವರೆಗೆ ವಿಸ್ತರಿಸುತ್ತದೆ. ಉತ್ತರ ಮಧ್ಯ ಮಹಾರಾಷ್ಟ್ರದಿಂದ ದಕ್ಷಿಣ ಒಳನಾಡಿನವರೆಗೆ ಉತ್ತರ ಒಳನಾಡಿನವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ವರೆಗೆ ವ್ಯಾಪಿಸಬಹುದ. ನಂತರ ಅದರ ತೀವ್ರ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಸದ್ಯ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ನೆರೆಹೊರೆಗಳಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪ್ರಸರಣ ಕಡಿಮೆಯಾಗಿದೆ. ಪೂರ್ವ ಬಿಹಾರದಿಂದ ಉತ್ತರ ತೆಲಂಗಾಣದವರೆಗೆ ಈಶಾನ್ಯ ಜಾರ್ಖಂಡ್, ಛತ್ತೀಸ್‌ಗಢದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಮುಂದುವರೆದಿದೆ ಎಂದು ಸೋಮವಾರದ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕರ್ನಾಟಕ ಸೇರಿ ವಿವಿಧೆಡೆ ಭಾರೀ ಮಳೆ ಅಬ್ಬರ
ಹವಾಮಾನದಲ್ಲಿನ ಈ ನಿರಂತರ ಬದಲಾವಣೆ ಕಾರಣದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡು, ಉತ್ತರ ಒಳನಾಡು ಭಾಗದಲ್ಲಿ ಮಳೆ ಆರ್ಭಟಿಸಲಿದೆ. ಬೆಂಗಳೂರಿನಲ್ಲೂ ಮಳೆ ಬರಲಿದೆ. ಇದರೊಂದಿಗೆ ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಹಾಗೂ ಮಹಾರಾಷ್ಟ್ರದ ಕೆಲವೆಡೆ ಸಾಧಾರಣದಿಂದ ಭಾರೀ ಮಳೆ ಆಗುವ ನಿರೀಕ್ಷೆ ಇದೆ...












Click it and Unblock the Notifications