Cyclone Biparjoy Landfall: ಭೀಕರ ಚಂಡಮಾರುತಕ್ಕೆ ಕಳಚಿಬಿತ್ತು ಅದಾನಿ ನಾಮಫಲಕ!
ಗುಜರಾತ್: ಚಂಡಮಾರುತದ ಅಬ್ಬರಕ್ಕೆ ಗುಜರಾತ್ ಕರಾವಳಿ ಭಾಗದ ಜನ ತತ್ತರಿಸಿದ್ದಾರೆ. ಈ ಹೊತ್ತಲ್ಲೇ ಉದ್ಯಮಗಳು ಕೂಡ ಬಿಪರ್‌ಜಾಯ್ ಸೈಕ್ಲೋನ್ ಅಬ್ಬರಕ್ಕೆ ಬೆಚ್ಚಿಬಿದ್ದಿದ್ದು, ಬೋರ್ಡ್ & ಬ್ಯಾನರ್ ಹಾರಿಹೋಗುವುದು ಮಾಮೂಲಾಗಿದೆ. ಹೀಗೆ ಅದಾನಿ ಸಮೂಹದ ನಾಮಫಲಕ ಕೂಡ ಭೀಕರ ಗಾಳಿಯ ಅಬ್ಬರಕ್ಕೆ ಹಾರಿ ಹೋಗಿದ್ದು, ವಿಡಿಯೋ ಫುಲ್ ವೈರಲ್ ಆಗ್ತಿದೆ (Cyclone Biparjoy).
ಅರಬ್ಬಿ ಸಮುದ್ರದಲ್ಲಿ ದಿಢೀರ್ ರೂಪುಗೊಂಡು, ಕಳೆದ 10 ದಿನದಿಂದ ಪಶ್ಚಿಮ ಭಾರತದ ನಿದ್ದೆಗೆಡಿಸಿದ್ದ 'ಬಿಪರ್‌ಜಾಯ್' ಚಂಡಮಾರುತ ಗುಜರಾತ್‌ನಲ್ಲಿ ಕೆಲವು ಗಂಟೆಗಳ ಹಿಂದೆ ನೆಲಕ್ಕೆ ಅಪ್ಪಳಿಸಿದೆ. ಆದರೆ ಗುಜರಾತ್ ಕರಾವಳಿಗೆ ಅಪ್ಪಳಿಸುವ ಮೊದಲೇ ಗುಜರಾತ್‌ನ ಹಲವು ಭಾಗಗಳಲ್ಲಿ ಚಂಡಮಾರತ ಭೀಕರವಾಗಿತ್ತು. ಹೀಗೆ ಅದಾನಿ ಸಮೂಹದ ಉದ್ಯಮ ಇರುವ ಮುಂದ್ರಾ ಪ್ರದೇಶದಲ್ಲೂ ಗಾಳಿ ಅಬ್ಬರಿಸುತ್ತಿದೆ. ಈ ಹಿನ್ನೆಲೆ ಅದಾನಿ ನಾಮಫಲಕ ಹಾರಿ ಹೋಗಿದೆ. ಗುಜರಾತ್‌ನ ಕಚ್ಛ್ ಜಿಲ್ಲೆಯ ಮುಂದ್ರಾದಲ್ಲಿ ಈ ಘಟನೆ ಸಂಭವಿಸಿದ್ದು, ಅದಾನಿ ನಾಮಫಲಕ ಹಾರಿಹೋದ ವಿಡಿಯೋ ವೈರಲ್ ಆಗುತ್ತಿದೆ.

145 ಕಿ.ಮೀ. ವೇಗದಲ್ಲಿ ಬೀಸುತ್ತಿದೆ ಗಾಳಿ!
ಭಯದಲ್ಲೇ ಉಸಿರಾಡುತ್ತಿದ್ದ ಗುಜರಾತ್ ಕರಾವಳಿಗೆ ಈಗಾಗಲೇ ಡೆಡ್ಲಿ ಸೈಕ್ಲೋನ್ ಅಪ್ಪಳಿಸಿದೆ. ಸೌರಾಷ್ಟ್ರ ಹಾಗೂ ಕಚ್ಛ್ ಭಾಗದಲ್ಲಿ ಚಂಡಮಾರುತ ನೆಲಕ್ಕೆ ಅಪ್ಪಳಿಸಿದ ನಂತರ ಸುಮಾರು 145 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. 'ಬಿಪರ್‌ಜಾಯ್' ಚಂಡಮಾರುತ ಮಳೆ ಮೋಡಗಳ ರಾಶಿಯನ್ನೇ ಹೊತ್ತು ತಂದಿದೆ. 125ರಿಂದ 145 ಕಿಲೋ ಮೀಟರ್ ವೇಗದಲ್ಲಿ ಗಾಳಿ ಚಲಿಸುತ್ತಿದೆ. ಹಾಗೇ ಗುಜರಾತ್‌ನ ಕಚ್ಛ್ ಭಾಗದಲ್ಲಿ ವಿಪರೀತ ಗಾಳಿ ಬೀಸುತ್ತಿದೆ. ಹೀಗಾಗಿ ಭಾರಿ ಪ್ರಮಾಣದ ಮಳೆ ಧೋ ಅಂತಾ ಸುರಿಯುತ್ತಿದ್ದು, ಹಲವು ಮನೆಗಳು ಮಳೆ & ಗಾಳಿ ಅಬ್ಬರಕ್ಕೆ ಕುಸಿದು ಬಿದ್ದಿವೆ. ಇದರ ಜೊತೆಗೆ ಅದಾನಿ ಸಂಸ್ಥೆಯ ನಾಮಫಲಕ ಕೂಡ ಉರುಳಿ ಬಿದ್ದಿದೆ.
Adani Port in #Mundra witnessed rain with strong windswhere damage was seen due to high winds#CycloneBiporjoy #Gujaratcyclone #kutch pic.twitter.com/sMEm41Dbtr
— Weatherman Uttam (@Gujarat_weather) June 15, 2023
ಭಾರತೀಯ ಸೇನೆ ಸನ್ನದ್ಧ ಸ್ಥಿತಿಯಲ್ಲಿ
ತವರು ರಾಜ್ಯಕ್ಕೆ ಭೀಕರ ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಪಿಎಂ ಮೋದಿ & ಅಮಿತ್ ಶಾ ಕೂಡ ಸೂಕ್ಷ್ಮವಾಗಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ಕೇಂದ್ರದ ಪಿಎಂ ಮೋದಿ ಸರ್ಕಾರ ಈಗಾಗಲೇ ಗುಜರಾತ್ ಜನರಿಗೆ ಸಂಪೂರ್ಣವಾದ ನೆರವು ನೀಡಲು ಸಜ್ಜಾಗಿದೆ. ಸಾವಿರಾರು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ನೇಮಕವಾಗಿದ್ದಾರೆ. ಅಲ್ಲದೆ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಸೇನಾ ಪಡೆ ಕರೆಸಿಕೊಳ್ಳಲು ಸಿದ್ಧತೆ ಕೈಗೊಳ್ಳಲಾಗಿದೆ. ಹೀಗಾಗಿ ಭಾರತೀಯ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿ ಇವೆ.

1 ಲಕ್ಷ ಜನರ ಸ್ಥಳಾಂತರ
ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಇಂದು ಸಂಜೆ ಹೊತ್ತಿಗೆಲ್ಲಾ 'ಬಿಪರ್‌ಜಾಯ್' ಚಂಡಮಾರುತ ಗುಜರಾತ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಎನ್‌ಡಿಆರ್‌ಎಫ್‌ನ 18, ಎಸ್‌ಡಿಆರ್‌ಎಫ್‌ನ 13 ತಂಡಗಳನ್ನ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. 1,00,000 ಜನರನ್ನ ಈವರೆಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗುಜರಾತ್ ಮಾತ್ರವಲ್ಲ ಅಕ್ಕಪಕ್ಕ ಇರುವ ರಾಜ್ಯಗಳಲ್ಲೂ ಭಾರಿ ಮಳೆ ಬೀಳುತ್ತಿದೆ. ಪ್ರವಾಸಿಗರ ಹಾಟ್ ಫೇವರಿಟ್ ಗೋವಾ & ಮಹಾರಾಷ್ಟ್ರದಲ್ಲೂ ಚಂಡಮಾರುತದ ಪ್ರಭಾವ ಇದೆ.
ರಾಕ್ಷಸ ಗಾತ್ರ ಸುಳಿಗಾಳಿ ಭೀತಿ!
'ಬಿಪರ್‌ಜಾಯ್' ಅಬ್ಬರಕ್ಕೆ ಬೆಚ್ಚಿದ್ದ ಜನರಿಗೆ ಮತ್ತೊಂದು ಆಘಾತವೂ ಇದೀಗ ಎದುರಾಗಿದೆ. ಅದೇನೆಂದರೆ ಬಿಪರ್‌ಜಾಯ್ ಚಂಡಮಾರುತದ ಉಪಗ್ರಹ ಚಿತ್ರ ಭಾರತೀಯ ಹವಾಮಾನ ಇಲಾಖೆಯಿಂದ ರಿಲೀಸ್ ಆಗಿದ್ದು, ಸೈಕ್ಲೋನ್ ಗಾತ್ರ ಬರೋಬ್ಬರಿ ಗುಜರಾತ್ ರಾಜ್ಯಕ್ಕಿಂತಲೂ ದೊಡ್ಡದಾಗಿದೆ. ದೇಶದಲ್ಲೇ 5ನೇ ದೊಡ್ಡ ರಾಜ್ಯ ಎಂಬ ಹೆಗ್ಗಳಿಕೆ ಕೂಡ ಇದೇ ಗುಜರಾತ್ ರಾಜ್ಯಕ್ಕಿದೆ. ಇಂತಹ ದೇಶದ 5ನೇ ಅತಿದೊಡ್ಡ ರಾಜ್ಯದಷ್ಟು ಗಾತ್ರದ ಚಂಡಮಾರುತ ಈಗ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅಲ್ಲದೆ ಕ್ಷಣಕ್ಷಣಕ್ಕೂ ತನ್ನ ಗಾತ್ರವನ್ನು 'ಬಿಪರ್‌ಜಾಯ್' ಚಂಡಮಾರುತ ಹಿಗ್ಗಿಸಿಕೊಳ್ಳುತ್ತಿರುವುದು ಭಯವನ್ನು ಹೆಚ್ಚಿಸುತ್ತಿದೆ.












Click it and Unblock the Notifications