ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಫಾನ್ ಚಂಡಮಾರುತ: 'ಈ' ಸುರಕ್ಷತಾ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸಿ

|
Google Oneindia Kannada News

ನವದೆಹಲಿ, ಮೇ 20: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಆತಂಕದ ನಡುವೆಯೇ ಭಾರತಕ್ಕೆ ಮತ್ತೊಂದು ಗಂಡಾಂತರ ಎದುರಾಗಿದೆ. ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದೆ.

ಅಂಫಾನ್ ಚಂಡಮಾರುತದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಭೂಕುಸಿತ ಸಂಭವಿಸಿದೆ. ಸೂಪರ್ ಸೈಕ್ಲೋನಿಕ್ ಚಂಡಮಾರುತ 'ಅಂಫಾನ್' ನಿಂದ ಜನರನ್ನು ರಕ್ಷಿಸಲು ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ನ 41 ತಂಡಗಳನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ನಿಯೋಜಿಸಲಾಗಿದೆ.

ಬಾಂಗ್ಲಾದೇಶದಲ್ಲಿ 'ಅಂಫಾನ್' ಚಂಡಮಾರುತಕ್ಕೆ ಮೊದಲ ಬಲಿಬಾಂಗ್ಲಾದೇಶದಲ್ಲಿ 'ಅಂಫಾನ್' ಚಂಡಮಾರುತಕ್ಕೆ ಮೊದಲ ಬಲಿ

ಅಂಫಾನ್ ಚಂಡಮಾರುತದ ಪ್ರಭಾವವನ್ನು ನಿಗ್ರಹಿಸಲು ಆಯಾ ರಾಜ್ಯ ಸರ್ಕಾರಗಳು ಕ್ರಮಗಳನ್ನು ಕೈಗೊಂಡಿವೆ. ಇನ್ನೂ ಜನರೂ ಕೂಡ ಸುರಕ್ಷತೆಗೆ ಆದ್ಯತೆ ಕೊಡಬೇಕಿದೆ. ಚಂಡಮಾರುತದ ಸಮಯದಲ್ಲಿ ಜನರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ) ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಎನ್.ಡಿ.ಎಂ.ಎ ಬಿಡುಗಡೆ ಮಾಡಿರುವ ಮಾರ್ಗಸೂಚಿ ಇಲ್ಲಿದೆ:

ಚಂಡಮಾರುತ ಅಪ್ಪಳಿಸುವ ಮುನ್ನ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು

* ವದಂತಿಗಳಿಗೆ ಕಿವಿಗೊಡಬೇಡಿ. ಶಾಂತವಾಗಿರಿ, ಹೆದರಬೇಡಿ.

* ಸದಾ ಸಂಪರ್ಕದಲ್ಲಿ ಇರಲು ನಿಮ್ಮ ಮೊಬೈಲ್ ಫೋನ್ ಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳಿರಿ.

* ಹವಾಮಾನದ ಮಾಹಿತಿಗಾಗಿ ಟಿವಿ ನೋಡಿ, ರೇಡಿಯೋ ಆಲಿಸಿ, ದಿನಪತ್ರಿಕೆ ಓದಿರಿ..

* ಅತ್ಯಗತ್ಯ ದಾಖಲಾತಿಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ವಾಟರ್-ಪ್ರೂಫ್ ಕಂಟೇನರ್ ಗಳಲ್ಲಿ ಇರಿಸಿ.

* ಅಗತ್ಯ ವಸ್ತುಗಳಿರುವ 'ತುರ್ತು ಕಿಟ್' ತಯಾರಿಸಿ ಇಟ್ಟುಕೊಳ್ಳಿರಿ.

* ಪ್ರಾಣಿಗಳ ಸುರಕ್ಷತೆಗಾಗಿ ಸಾಕುಪ್ರಾಣಿಗಳನ್ನು ಬಂಧಮುಕ್ತಗೊಳಿಸಿ.

ಚಂಡಮಾರುತ ಅಪ್ಪಳಿಸಿದಾಗ/ಅಪ್ಪಳಿಸಿದ ಬಳಿಕ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು

ಚಂಡಮಾರುತ ಅಪ್ಪಳಿಸಿದಾಗ/ಅಪ್ಪಳಿಸಿದ ಬಳಿಕ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು

* ಒಳಾಂಗಣದಲ್ಲಿ: ವಿದ್ಯುತ್ ಮತ್ತು ಅನಿಲ ಸರಬರಾಜನ್ನು ಸ್ಥಗಿತಗೊಳಿಸಿ.

* ನಿಮ್ಮ ಮನೆಯ ಬಾಗಿಲುಗಳು ಮತ್ತು ಕಿಟಿಕಿಗಳನ್ನು ತೆರೆಯಬೇಡಿ.

* ನಿಮ್ಮ ಮನೆ ಸುರಕ್ಷಿತವಲ್ಲ ಎಂದೆನಿಸಿದರೆ, ಚಂಡಮಾರುತದ ಮುನ್ಸೂಚನೆ ಸಿಕ್ಕ ಕೂಡಲೆ ಬೇರೆಡೆಗೆ ಶಿಫ್ಟ್ ಆಗಿ.

* ಹವಾಮಾನ ವರದಿಗಾಗಿ ರೇಡಿಯೋ ಆಲಿಸಿ.

* ಕುದಿಸಿ ಆರಿಸಿದ ನೀರು ಕುಡಿಯಿರಿ.

* ಸರ್ಕಾರ ಮತ್ತು ಸರ್ಕಾರಿ ಇಲಾಖೆಯಿಂದ ಬರುವ ಅಧಿಕೃತ ಎಚ್ಚರಿಕೆಯನ್ನು ಮಾತ್ರ ಪರಿಗಣಿಸಿ.

 ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಅತಿದೊಡ್ಡ ಸೈಕ್ಲೋನ್ 'ಅಂಫಾನ್' ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಅತಿದೊಡ್ಡ ಸೈಕ್ಲೋನ್ 'ಅಂಫಾನ್'

ನಿಮಗಿದು ಗೊತ್ತಿರಲಿ

ನಿಮಗಿದು ಗೊತ್ತಿರಲಿ

* ಹೊರಾಂಗಣದಲ್ಲಿ: ಹಾನಿಗೊಳಗಾದ ಕಟ್ಟಡಗಳನ್ನು ಪ್ರವೇಶಿಸಬೇಡಿ.

* ರಸ್ತೆಯಲ್ಲಿ ಓಡಾಡುವಾಗ ಮುರಿದ ವಿದ್ಯುತ್ ಕಂಬ, ತಂತಿಗಳು ಮತ್ತು ಚೂಪಾದ ವಸ್ತುಗಳ ಮೇಲೆ ಗಮನವಿರಲಿ.

* ಆದಷ್ಟು ಬೇಗ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಿರಿ.

* ಮೀನುಗಾರರು ಸಮುದ್ರಕ್ಕೆ ಇಳಿಯಬಾರದು.

* ಸುರಕ್ಷಿತ ಸ್ಥಳದಲ್ಲಿ ತಮ್ಮ ಬೋಟುಗಳನ್ನು ಮೀನುಗಾರರು ಕಟ್ಟಬೇಕು.

ನಿಮ್ಮ ಗಮನಕ್ಕೆ

ನಿಮ್ಮ ಗಮನಕ್ಕೆ

* ಸುರಕ್ಷಿತ ಸ್ಥಳದಲ್ಲಿ ನೀವು ಆಶ್ರಯ ಪಡೆದಿದ್ದರೆ.. ''ಸುರಕ್ಷಿತವಾಗಿ ನೀವು ಮನೆಗೆ ತೆರಳಬಹುದು'' ಎಂದು ತಿಳಿಸುವವರೆಗೂ ನೀವು ಅಲ್ಲೇ ಇರಿ.

* ನೀವು ವಾಹನ ಚಲಾಯಿಸಬೇಕಿದ್ದರೆ, ಎಚ್ಚರ ವಹಿಸಿ.

* ಭಗ್ನಾವಶೇಷಗಳನ್ನು ಕೂಡಲೆ ತೆರವುಗೊಳಿಸಿ.

English summary
Cyclone Amphan: Here is the List of Do's and Dont's to stay safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X