ಐದು ರಾಜ್ಯಗಳ ಚುನಾವಣೆ: ಚುನಾವಣಾಪೂರ್ವ ಸಮೀಕ್ಷಾ ವರದಿ

Posted By:
Subscribe to Oneindia Kannada

ಕೇಂದ್ರ ಚುನಾವಣಾ ಆಯೋಗ ಐದು ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಿಸಿದ ಬೆನ್ನಲ್ಲೇ, ಐದು ರಾಜ್ಯಗಳ ನಾಡಿಮಿಡಿತ ಅರಿಯುವ ಕೆಲಸವನ್ನು ಸಿವೋಟರ್ ಮಾಡಿದೆ.

ಸಿವೋಟರ್ - ಇಂಡಿಯಾ ಟಿವಿ ಜಂಟಿಯಾಗಿ ಪುದುಚೇರಿ ಹೊರತು ಪಡಿಸಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ ಮತ್ತು ಅಸ್ಸಾಂ ರಾಜ್ಯದ ಅಸೆಂಬ್ಲಿಯ ಚುನಾವಣಾಪೂರ್ವ ಸಮೀಕ್ಷೆ ನಡೆಸಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. (5 ರಾಜ್ಯಗಳ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆ)

ಇನ್ನು ಚುನಾವಣೆ ನಡೆಯಲಿರುವ ಐದೂ ರಾಜ್ಯಗಳಲ್ಲಿ ಬಿಜೆಪಿಗೆ ಅಷ್ಟೇನೂ ಭದ್ರ ತಳಹದಿ ಇಲ್ಲದಿದ್ದರೂ, ಕಳೆದ ಚುನಾವಣೆಗೆ ಹೋಲಿಸಿದರೆ ಕಮಲ ತನ್ನ ವರ್ಚಸ್ಸನ್ನು ಗಣನೀಯವಾಗಿ ಸುಧಾರಿಸಿಕೊಳ್ಳಲಿದೆ ಎನ್ನುತ್ತದೆ ಸಮೀಕ್ಷೆಯಲ್ಲಿನ ವರದಿ.

ಪ್ರಸಕ್ತ ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಡಿಎಂಕೆ - ಎಂಡಿಎಂಕೆ ಮೈತ್ರಿಕೂಟ, ಕೇರಳದಲ್ಲಿ ಒಮನ್ ಚಾಂಡಿ ನೇತೃತ್ವದ ಕಾಂಗ್ರೆಸ್ - ಮುಸ್ಲಿಂಲೀಗ್ ಯುಡಿಎಫ್ ಮೈತ್ರಿಕೂಟ, ಅಸ್ಸಾಂನಲ್ಲಿ ತರುಣ್ ಗಗೋಯಿ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿದೆ.

ಇನ್ನು ಪುದುಚೇರಿಯಲ್ಲಿ ಎನ್ ರಂಗಸ್ವಾಮಿ ನೇತೃತ್ವದ ಎಐಎನ್ಆರ್ಸಿ ಮತ್ತು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು ಸ್ಥಾನ ಸಿಗಬಹುದು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಬಿಜೆಪಿ - ತಮಿಳುನಾಡು

ಬಿಜೆಪಿ - ತಮಿಳುನಾಡು

ತಮಿಳುನಾಡಿನಲ್ಲಿ ಯಾವ ಪಕ್ಷ, ಯಾರ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ವಿಚಾರ ಇನ್ನೂ ಅಂತಿಮವಾಗಿಲ್ಲವಾದರೂ, ಬಿಜೆಪಿ ತಮಿಳುನಾಡಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಸಿವೋಟರ್ - ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಆದರೆ, ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದರೆ ಪಕ್ಷಕ್ಕೆ ಏನೂ ಲಾಭವಾಗುವುದಿಲ್ಲ ಎನ್ನುತ್ತದೆ ಸಮೀಕ್ಷಾ ವರದಿ.

ತಮಿಳುನಾಡು (ಆವರಣದಲ್ಲಿ ಈಗಿನ ಬಲಾಬಲ)

ತಮಿಳುನಾಡು (ಆವರಣದಲ್ಲಿ ಈಗಿನ ಬಲಾಬಲ)

ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ?
ಒಟ್ಟು ಸ್ಥಾನಗಳು - 234
ಎಐಡಿಎಂಕೆ, ಬಿಜೆಪಿ ಮೈತ್ರಿಕೂಟ - 116 (203)
ಡಿಎಂಕೆ ಮೈತ್ರಿಕೂಟ - 101 (31)
ಇತರರು - 17

ಪಶ್ಚಿಮ ಬಂಗಾಲ (ಆವರಣದಲ್ಲಿ ಈಗಿನ ಬಲಾಬಲ)

ಪಶ್ಚಿಮ ಬಂಗಾಲ (ಆವರಣದಲ್ಲಿ ಈಗಿನ ಬಲಾಬಲ)

ಒಟ್ಟು ಸ್ಥಾನಗಳು - 294
ತೃಣಮೂಲ ಕಾಂಗ್ರೆಸ್ - 156 (184)
ಎಡಪಕ್ಷ - 114 (60)
ಕಾಂಗ್ರೆಸ್ - 13 (42)
ಇತರರು - 11

ಕೇರಳ (ಆವರಣದಲ್ಲಿ ಈಗಿನ ಬಲಾಬಲ)

ಕೇರಳ (ಆವರಣದಲ್ಲಿ ಈಗಿನ ಬಲಾಬಲ)

ಒಟ್ಟು ಸ್ಥಾನಗಳು - 140
ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ - 89 ( 66)
ಕಾಂಗ್ರೆಸ್ ನೇತೃತ್ವದ ಯುಡಿಎಫ್ - 49 (72)
ಎನ್ಡಿಎ - 01
ಇತರರು - 01

ಅಸ್ಸಾಂ (ಆವರಣದಲ್ಲಿ ಈಗಿನ ಬಲಾಬಲ)

ಅಸ್ಸಾಂ (ಆವರಣದಲ್ಲಿ ಈಗಿನ ಬಲಾಬಲ)

ಒಟ್ಟು ಸ್ಥಾನಗಳು - 126
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ - 57
ಕಾಂಗ್ರೆಸ್ - 44 (78)
ಎಐಯುಡಿಎಫ್ - 19 (18)
ಇತರರು - 06

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
C-Voter and India TV pre-poll survey of four states out of five states assembly election date announced on March 4.
Please Wait while comments are loading...