ಮೋದಿಯನ್ನು ನಾಯಿಗೆ ಹೋಲಿಸಿದ ರಾಜ್ಯದ ಮಾಜಿ ಕಾಂಗ್ರೆಸ್ ಸಂಸದ

Posted By:
Subscribe to Oneindia Kannada

ನವದೆಹಲಿ, ಮೈಸೂರು, ನ 25: ನೋಟು ನಿಷೇಧದ ವಿಚಾರದಲ್ಲಿ ಪರವಿರೋಧ ಚರ್ಚೆ, ಹೇಳಿಕೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ರಾಜ್ಯದ ಮಾಜಿ ಕೈ ಪಕ್ಷದ ಸಂಸದರೊಬ್ಬರು ಪ್ರಧಾನಿಯನ್ನು ನಾಯಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆ.

ಇತ್ತ ನೋಟು ನಿಷೇಧದ ವಿಚಾರದಲ್ಲಿ ಹೊರಬಿದ್ದಿರುವ ಸಮೀಕ್ಷೆಗಳನ್ನು 'ಕೃಪಾಪೋಷಿತ' ಎಂದು ಜರಿದಿರುವ ವಿಪಕ್ಷಗಳು, ಸಂಸತ್ತಿನ ಚಳಿಗಾಲದ ಉಭಯ ಸದನಗಳನ್ನು ಸತತವಾಗಿ ಆಹುತಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. [ಬ್ಯಾಂಕಿಗೆ ಹಣ ಹಾಕಬಹುದು, ಆದ್ರೆ ವಾಪಸ್ ತಗಳಂಗಿಲ್ಲ]

ಮತ್ತೊಂದೆಡೆ, ಬಿಜೆಪಿಯಲ್ಲಿ ಇದ್ದೂ ಇರದಂತಿರುವ ಶತ್ರುಘ್ನ ಸಿನ್ಹಾ, ಪ್ರಧಾನಿಯವರು ಮೂರ್ಖರ ಮನೆಯಲ್ಲಿ ವಾಸವಾಗಿರುವುದನ್ನು ಬಿಟ್ಟು, ವಾಸ್ತವತೆಯ ಕಡೆ ಬರಲಿ ಎಂದು ಟೀಕೆ ಮಾಡಿದ್ದಾರೆ.

ನೋಟು ನಿಷೇಧದ ಕೇಂದ್ರದ ಕ್ರಮ ಮತ್ತು ಪ್ರಧಾನಿ ಮೋದಿಯನ್ನು ಮೈಸೂರಿನ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಎಚ್ ವಿಶ್ವನಾಥ್, ಎತ್ತಿನಗಾಡಿ ಮತ್ತು ನಾಯಿಗೆ ಹೋಲಿಸಿ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.

ಗುರುವಾರ (ನ 24) ನಡೆದ ಅಲ್ಪಸ್ವಲ್ಪ ರಾಜ್ಯಸಭೆಯ ಕಲಾಪವನ್ನು ಗಮನಿಸುವುದಾದರೆ, ನೋಟು ನಿಷೇಧ ಹಿಂದಕ್ಕೆ ಪಡೆಯ ಬೇಕು ಎನ್ನುತ್ತಿದ್ದ ವಿಪಕ್ಷಗಳ ಮುಖಂಡರು, ಅಡ್ಡಗೋಡೆಯಲ್ಲಿ ಕಾರ್ತಿಕ ದೀಪ ಇಡುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಪ್ರಧಾನಿ ಬಗ್ಗೆ ವಿಶ್ವನಾಥ್ ಹೇಳಿದ್ದು, ಮುಂದೆ ಓದಿ..

ಶತ್ರುಘ್ನ ಸಿನ್ಹಾ

ಶತ್ರುಘ್ನ ಸಿನ್ಹಾ

ಪ್ರಧಾನಿ ಮೋದಿಯವರು ಮೂರ್ಖರ ಸಹವಾಸವನ್ನು ಬಿಟ್ಟು ಬಿಡಬೇಕು. ಇಂತವರ ಸಹವಾಸದಿಂದ ಹೊರ ಬಂದರೆ ಮಾತ್ರ ಮೋದಿಯವರಿಗೆ ವಾಸ್ತವತೆಯ ಅರಿವಾಗುವುದು. ನೋಟು ನಿಷೇಧದ ವಿಚಾರದಲ್ಲಿನ ಇತ್ತೀಚಿನ ಸರ್ವೇ ಎಲ್ಲಾ ಪೂರ್ವ ನಿರ್ಧಾರಿತ - ಶತ್ರುಘ್ನ ಸಿನ್ಹಾ.

ಪೂರ್ವ ತಯಾರಿಯಿಲ್ಲ

ನೋಟು ನಿಷೇಧದ ಕ್ರಮ ಮೋದಿಯವರ ಒಳ್ಳೆ ನಿರ್ಧಾರ, ಆದರೆ ಸರಿಯಾಗಿ ಪೂರ್ವ ತಯಾರಿ ಮಾಡಿಕೊಂಡು ಪ್ರಧಾನಿ ಇಂತಹ ಕೆಲಸಕ್ಕೆ ಮುಂದಾಗಬೇಕಿತ್ತು - ಸಿನ್ಹಾ ಟ್ವೀಟ್.

ಎಚ್ ವಿಶ್ವನಾಥ್

ಎಚ್ ವಿಶ್ವನಾಥ್

ಜನರು ತಮ್ಮ ದುಡ್ಡು ತೆಗೆದುಕೊಳ್ಳಲು ಎಟಿಎಂ/ಬ್ಯಾಂಕ್ ಮುಂದೆ ಕ್ಯೂನಿಲ್ಲುವ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ತಂದು ಹಾಕಿದ್ದಾರೆ. ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇವರ ಜೀವಕ್ಕೆ ಬೆಲೆಯಿಲ್ಲವೇ - ಮಾಜಿ ಸಂಸದ ಎಚ್ ವಿಶ್ವನಾಥ್.

ಎತ್ತಿನಗಾಡಿ, ನಾಯಿ

ಎತ್ತಿನಗಾಡಿ, ನಾಯಿ

ಎತ್ತಿನಬಂಡಿಯ ಕೆಳಗೆ ನಾಯಿಕೂಡಾ ಬರುತ್ತಿರುತ್ತದೆ. ನಾಯಿ ಬಂಡಿಯನ್ನು ನಾನೇ ಎಳೆಯುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿರುತ್ತದೆ. ಅದಕ್ಕೆ ಎತ್ತಿನಬಂಡಿಯ ನೆರಳಲ್ಲಿ ತಾನು ಬರುತ್ತಿದ್ದೇನೆ ಎನ್ನುವ ಅರಿವು ಇರುವುದಿಲ್ಲ. ನಮ್ಮ ಪ್ರಧಾನಿಯವರ ಪರಿಸ್ಥಿತಿ ಕೂಡಾ ಹೀಗೇ - ವಿಶ್ವನಾಥ್.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ನೋಟು ನಿಷೇಧದ ವಿಚಾರದಲ್ಲಿ ಗಾಡಿ ಯಾರೋ ಎಳೆಯುತ್ತಿದ್ದಾರೆ, ಆದರೆ ನಾನೇ ಗಾಡಿ ಎಳೆಯುತ್ತಿದ್ದೇನೆಂದು ಮೋದಿಯವರು ಭಾವಿಸಿದ್ದಾರೆ. ಸಣ್ಣ ವ್ಯಾಪಾರಿಗಳು, ಕಾರ್ಮಿಕರು, ಕೂಲಿ ಮುಂತಾದವರಿಗೆ ನೋಟು ನಿಷೇಧದಿಂದ ಆಗುತ್ತಿರುವ ತೊಂದರೆಯ ಬಗ್ಗೆ ಮೋದಿಗೆ ಅರಿವಿದೆಯೇ - ಎಚ್ ವಿಶ್ವನಾಥ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Currency ban decision, former MP from Mysuru H Vishwanath compared with bullock cart and Dog.demonetisation, h vishwanath, narendra modi, rupees, mysuru, atm, bank, dog
Please Wait while comments are loading...