
CUET Result 2022 : 100ಕ್ಕೆ 100 ಅಂಕ ಗಳಿಸಿದ ಅಂಕಿತಾ ಗುರಿಯೇ ಯುಪಿಎಸ್‌ಸಿ
ನವದೆಹಲಿ, ಅಕ್ಟೋಬರ್ 18: ದೆಹಲಿ ವಿಶ್ವವಿದ್ಯಾಲಯದ ಪ್ರವೇಶಕ್ಕಾಗಿ ಮೊದಲ ಬಾರಿಗೆ ನಡೆದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) 2022 ರಲ್ಲಿ ರಾಜಸ್ಥಾನದ ವಿದ್ಯಾರ್ಥಿನಿ ಅಂಕಿತಾ ಲೋಥಿಯಾ ಶೇ.100ರಷ್ಟು ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದ್ದಾರೆ.
ರಾಜಸ್ಥಾನದ ಶ್ರೀ ಗಂಗಾನಗರದ ಮೂಲಕ ಅಂಕಿತಾ ಲೋಥಿಯಾ ಇಂಗ್ಲಿಷ್, ಭೂಗೋಳ ಮತ್ತು ರಾಜ್ಯಶಾಸ್ತ್ರ ಸೇರಿದಂತೆ ಮೂರು ವಿಷಯಗಳಲ್ಲಿ 200ಕ್ಕೆ 200 ಅಂಕಗಳನ್ನು ಪಡೆದುಕೊಂಡಿದ್ದಾರೆ. ಇತಿಹಾಸ ಮತ್ತು ಸೋಷಿಯಲ್ ಸ್ಟಡೀಸ್ ನಲ್ಲಿ ಕ್ರಮವಾಗಿ 97 ಮತ್ತು 80 ಅಂಕಗಳನ್ನು ಗಳಿಸಿದ್ದಾರೆ.
CUET PG Results: ವಿದ್ಯಾರ್ಥಿಗಳು ಫಲಿತಾಂಶ ಪರಿಶೀಲಿಸುವುದು ಹೇಗೆ?
ದೆಹಲಿ ವಿಶ್ವವಿದ್ಯಾಲಯದ ಮೂರು ಉನ್ನತ ಕಾಲೇಜುಗಳಾದ ಸೇಂಟ್ ಸ್ಟೀಫನ್ಸ್ ಕಾಲೇಜು, ಹಿಂದೂ ಮತ್ತು ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಇತಿಹಾಸ ಅಥವಾ ರಾಜಕೀಯ ವಿಜ್ಞಾನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (BA) ಅನ್ನು ಮುಂದುವರಿಸಲು ಅಂಕಿತಾ ಲೋಥಿಯಾ ಬಯಸಿದ್ದಾರೆ.
ಐಎಎಸ್ ಅಧಿಕಾರಿಯಾಗುವ ಕನಸು:
ಕಳೆದ ಜುಲೈ 15 ಮತ್ತು 19ರಂದು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡಿದ್ದ ಅಂಕಿತಾ ಲೋಥಿಯಾ ಭವಿಷ್ಯದ ಬಗ್ಗೆ ಭವ್ಯ ಕನಸು ಕಟ್ಟಿಕೊಂಡಿದ್ದಾರೆ. ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಗುರಿಯನ್ನು ಹೊಂದಿದ್ದಾರೆ.
ವಿದ್ಯಾವಂತ ವಿದ್ಯಾರ್ಥಿನಿ ಎನಿಸಿರುವ ಅಂಕಿತಾ:
ಸರ್ಕಾರಿ ಶಾಲೆಯ ಶಿಕ್ಷಕಿಯ ಮಗಳಾಗಿರುವ ಅಂಕಿತಾ ಲೋಥಿಯಾ ಬಾಲ್ಯದಿಂದಲೂ ಉತ್ತಮ ವಿದ್ಯಾರ್ಥಿನಿ ಎನಿಸಿಕೊಂಡಿದ್ದರು. 10ನೇ ತರಗತಿಯಲ್ಲಿ ಶೇ.93.67ರಷ್ಟು ಫಲಿತಾಂಶವನ್ನು ಪಡೆದುಕೊಂಡಿದ್ದ ಅವರು, 12ನೇ ತರಗತಿಯಲ್ಲಿ ಶೇ.95.2ರಷ್ಟು ಫಲಿತಾಂಶವನ್ನು ಪಡೆದುಕೊಂಡಿದ್ದರು.
ಅಂಕಿತಾ ಆರಂಭದಲ್ಲಿ ರಾಜಸ್ಥಾನ ನ್ಯಾಯಾಂಗ ಪರೀಕ್ಷೆಗೆ ಹಾಜರಾಗಲು ಬಯಸಿದ್ದರು, ಆದರೆ ಈಗ, ಅವರು ಕಾಲೇಜಿನ ಎರಡನೇ ವರ್ಷದಲ್ಲಿ ದೇಶದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿಗೆ ತಯಾರಿ ಮಾಡುವ ಗುರಿಯನ್ನು ಹೊಂದಿದ್ದಾರೆ.