ಕೊರೊನಾ ಹೊಸ ಅಧ್ಯಯನ: ಈ 3 ವರ್ಗದವರಿಗೆ ವೈರಸ್ ಹಾವಳಿ ಕಮ್ಮಿ
ಸ್ಪೇನ್, ಚೀನಾ, ಫ್ರಾನ್ಸ್, ಇಟೆಲಿ, ಅಮೆರಿಕ ನಂತರ ಭಾರತದ ವೈದ್ಯರು ಮತ್ತು ಸಂಶೋಧಕರು ಕೊರೊನಾ ವೈರಸ್ ವಿಚಾರದಲ್ಲಿ ಅಧ್ಯಯನ ನಡೆಸಿ ವರದಿಯನ್ನು ನೀಡಿದ್ದಾರೆ. CSIR (ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್) ನಲ್ಲಿ ಅಧ್ಯಯನದ ವರದಿ ಲಭ್ಯವಿದೆ.
ಸುಮಾರು 140 ಮಂದಿ ವೃತ್ತಿಪರ ವೈದ್ಯರು ಮತ್ತು ಸಂಶೋಧನಾ ವಿಜ್ಞಾನಿಗಳು ಈ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 10,427 ಜನರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಸಿ.ಎಸ್.ಐ.ಆರ್ ನೀಡಿದ ಅಧ್ಯಯನದ ರೀತಿಯಲ್ಲೇ ಕೆಲವು ದಿನಗಳ ಹಿಂದೆ ಅಮೆರಿಕಾ ಮೂಲದ ಸಂಸ್ಥೆಯೊಂದು ವರದಿಯನ್ನು ನೀಡಿತ್ತು. ಆ ಅಧ್ಯಯನದಲ್ಲಿ ಏಳು ಸಾವಿರ ಜನರು ಪಾಲ್ಗೊಂಡಿದ್ದರು.
ಯಾವ ರಕ್ತದ ಗ್ರೂಪ್‌ನವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ, ಯಾವ ಗ್ರೂಪ್ ನವರಿಗೆ ವೈರಸ್ ಬೇಗ ಅಂಟುವ ಸಾಧ್ಯತೆ, ಸಸ್ಯಾಹಾರ ಸೇವನೆ ಈ ಸಮಯದಲ್ಲಿ ಉತ್ತಮವೇ ಎನ್ನುವುದರ ಬಗ್ಗೆ ಸಿ.ಎಸ್.ಐ.ಆರ್ ಸೆರೋ ಅಧ್ಯಯನದ ವರದಿ ಹೀಗಿದೆ:

ಸಿ.ಎಸ್.ಐ.ಆರ್ ಸೆರೋ ಅಧ್ಯಯನದ ವರದಿ
ಅಧ್ಯಯನದ ಪ್ರಕಾರ ಎರಡು ಗ್ರೂಪ್‌ನವರಿಗೆ ವೈರಸ್ ಬೇಗ ಅಂಟಬಹುದು. ಬಿ ಮತ್ತು ಎಬಿ ರಕ್ತಕಣದವರಿಗೆ ವೈರಸ್ ಸ್ವಲ್ಪಬೇಗ ಅಂಟುವ ಸಾಧ್ಯತೆಯಿದೆ. ಸಿರೊ-ಪಾಸಿಟಿವಿಟಿ ಹೆಚ್ಚಾಗಿ ಈ ಬ್ಲಡ್ ಗ್ರೂಪ್‌ನಲ್ಲಿ ಇರುವುದರಿಂದ ವೈರಸ್‌ಗಳ ಪ್ರಭಾವ ಹೆಚ್ಚಾಗಿರುತ್ತದೆ. ಫ್ರಾನ್ಸ್ ಮತ್ತು ಇಟೆಲಿಯಲ್ಲಿ ನಡೆಸಲಾದ ಅಧ್ಯಯನದಲ್ಲೂ ಇದೇ ವರದಿ ಬಂದಿದೆ ಸಿ.ಎಸ್.ಐ.ಆರ್ ಹೇಳಿದೆ.

ಸಸ್ಯಾಹಾರಿಗಳಿಗೆ ಶೀಘ್ರವಾಗಿ ವೈರಸ್ ಅಂಟುವುದಿಲ್ಲ
ಇನ್ನು, ಸಸ್ಯಾಹಾರಿಗಳಿಗೆ ಶೀಘ್ರವಾಗಿ ವೈರಸ್ ಅಂಟುವುದಿಲ್ಲ ಯಾಕೆಂದರೆ ಸಿರೊ-ಪಾಸಿಟಿವಿಟಿ ಕಮ್ಮಿ ಇರುತ್ತದೆ. ಸಾಮಾನ್ಯವಾಗಿ, ಸಸ್ಯಾಹಾರಿಗಳು ಸೇವಿಸುವ ಆಹಾರದಲ್ಲಿ ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಮತ್ತು ರೋಗ ನಿರೋಧಕ ಅಂಶ ಸಸ್ಯಾಹಾರಿ ಪದಾರ್ಥಗಳಲ್ಲಿ ಹೆಚ್ಚಿರುವುದರಿಂದ ವೈರಸ್ ಅಷ್ಟಾಗಿ ಬೇಗ ಅಂಟಿಕೊಳ್ಳುವುದಿಲ್ಲ.

ಧೂಮಪಾನಿಗಳಿಗೂ ಈ ಕೂಡಾ ವೈರಸ್ ನಿಂದ ಸೇಫ್
ಅಧ್ಯಯನದ ಮತ್ತೊಂದು ಪ್ರಮುಖ ಅಂಶವೇನಂದರೆ ಧೂಮಪಾನಿಗಳಿಗೂ ಕೂಡಾ ಈ ವೈರಸ್‌ನಿಂದ ಸೇಫ್. ಧೂಮಪಾನದಿಂದ ಶ್ವಾಸಕೋಶದಲ್ಲಿ ತೊಂದರೆಯಾದರೂ, ವೈರಸ್ ತಡೆಯುವ ಕೆಲಸವನ್ನು ಅದು ಮಾಡುತ್ತದೆ. ಅಮೆರಿಕದ ಸಂಸ್ಥೆ ಕೂಡಾ ತಮ್ಮ ಅಧ್ಯಯನದಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿತ್ತು.

ಒ (O) ರಕ್ತದ ಗ್ರೂಪಿನವರೂ ಖುಷಿ ಪಡುವ ವಿಚಾರ
ಇನ್ನು ಒ (O) ರಕ್ತದ ಗ್ರೂಪಿನವರೂ ಖುಷಿ ಪಡುವ ವಿಚಾರವೂ ಅಧ್ಯಯನದ ವರದಿಯಲ್ಲಿ ಬಂದಿದೆ. ಈ ಗ್ರೂಪ್‌ನವರಿಗೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದು ಮತ್ತು ಸಿರೊ-ಪಾಸಿಟಿವಿಟಿ ಕಮ್ಮಿ ಇರುವುದು ಇದಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.












Click it and Unblock the Notifications