ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1991ರ ಬಿಕ್ಕಟ್ಟು ನೆನಪಿಸಿದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚರ್ಚೆ

|
Google Oneindia Kannada News

ನವದೆಹಲಿ, ಆಗಸ್ಟ್ 24: ಎಐಸಿಸಿಯ ಅಧ್ಯಕ್ಷರು ಯಾರು?. ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಪಕ್ಷದಲ್ಲಿನ ಬೆಳವಣಿಗೆಗಳು 1991ರ ನೆನಪನ್ನು ಮಾಡಿಕೊಡುತ್ತಿವೆ.

ರಾಜೀವ್ ಗಾಂಧಿ ಹತ್ಯೆಯ ಬಳಿಕ ಸೋನಿಯಾ ಗಾಂಧಿ ಅವರು ಪಕ್ಷದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಭಾರಿ ಒತ್ತಡ ಹಾಕಲಾಗಿತ್ತು. ಆದರೆ, 1997ರಲ್ಲಿ ಸೋನಿಯಾ ಗಾಂಧಿ ರಾಜಕೀಯಕ್ಕೆ ಬರುವ ತೀರ್ಮಾನ ಕೈಗೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು.

ಸೋನಿಯಾ ಅಧಿಕಾರ ಅವಧಿ ಮುಕ್ತಾಯ? ಮುಂದೆ ಯಾರು? ಸೋನಿಯಾ ಅಧಿಕಾರ ಅವಧಿ ಮುಕ್ತಾಯ? ಮುಂದೆ ಯಾರು?

ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಐಸಿಸಿ ಹಂಗಾಮಿ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಕೋರಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಅವರೇ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಒತ್ತಡವನ್ನು ಹಾಕಲಾಗುತ್ತಿದೆ.

ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೆ ರಾಹುಲ್ ಗಾಂಧಿ? CWC ಕುತೂಹಲಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೆ ರಾಹುಲ್ ಗಾಂಧಿ? CWC ಕುತೂಹಲಕಾರಿ

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೊರತುಪಡಿಸಿ ಬೇರೆ ಯಾರು ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ?. ಹಲವಾರು ನಾಯಕರ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ರಾಹುಲ್ ಗಾಂಧಿ ಅವರು ಆಗಬೇಕು ಎಂಬ ಒತ್ತಡವೂ ಇದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು? ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

1997ರ ನೆನಪು

1997ರ ನೆನಪು

ರಾಜೀವ್ ಗಾಂಧಿ ಹತ್ಯೆಯ ಬಳಿಕ ಸೋನಿಯಾ ಗಾಂಧಿ ಅವರು ಪಕ್ಷದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಪದೇ ಪದೇ ಮನವಿ ಮಾಡಲಾಯಿತು. ಆದರೆ, 1997ರಲ್ಲಿ ಅವರು ರಾಜಕೀಯಕ್ಕೆ ಬಂದರು ಅಲ್ಲಿಯ ತನಕ ನರಸಿಂಹರಾವ್ ಮತ್ತು ಸೀತಾರಾಂ ಕೇಸರಿ ಪಕ್ಷದ ನೇತೃತ್ವ ವಹಿಸಿದ್ದರು.

ನಾಯಕತ್ವ ಪ್ರಶ್ನೆ ಮಾಡಲಾಯಿತು

ನಾಯಕತ್ವ ಪ್ರಶ್ನೆ ಮಾಡಲಾಯಿತು

ಮಾರ್ಚ್ 14, 1998ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. 1999ರ ಮೇ 15ರಂದು ಲೋಕಸಭೆ ಚುನಾವಣೆಗೂ ಮೊದಲು ಶರದ್ ಪವಾರ್, ಪಿ. ಎ. ಸಂಗ್ಮಾ ಮುಂತಾದವರು ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದನ್ನು ಪ್ರಶ್ನಿಸಿದರು.

ರಾಜೀನಾಮೆ ನೀಡಿದ ಸೋನಿಯಾ

ರಾಜೀನಾಮೆ ನೀಡಿದ ಸೋನಿಯಾ

ಆಗ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ಪತ್ರದಲ್ಲಿ ಅವರು ನಾನು ವಿದೇಶದಲ್ಲಿ ಹುಟ್ಟಿ ಬೆಳೆದಿರಬಹುದು. ಭಾರತವನ್ನು ನಾನು ನನ್ನ ದೇಶ ಎಂದು ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಕೊನೆಯ ಉಸಿರು ಇರುವ ತನಕ ಇಲ್ಲೇ ಇರುತ್ತೇನೆ. ಭಾರತ ನನ್ನ ಮಾತೃರಾಷ್ಟ್ರ ಎಂದು ಹೇಳಿದ್ದರು.

ಮುಖ್ಯಮಂತ್ರಿಗಳ ರಾಜೀನಾಮೆ

ಮುಖ್ಯಮಂತ್ರಿಗಳ ರಾಜೀನಾಮೆ

ಸೋನಿಯಾ ಗಾಂಧಿ ರಾಜೀನಾಮೆ ವಾಪಸ್ ಪಡೆಯಬೇಕು ಎಂದು ದೇಶಾದ್ಯಂತ ಕಾರ್ಯಕರ್ತರು ಉಪವಾಸ ಕುಳಿತು. ಮಧ್ಯಪ್ರದೇಶ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ದೆಹಲಿಯ ಶೀಲಾ ದೀಕ್ಷಿತ್, ರಾಜಸ್ಥಾನದ ಅಶೋಕ್ ಗೆಹ್ಲೋಟ್ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದರು. ಆಗ ಶರದ್ ಪವಾರ್, ಪಿ. ಎ. ಸಂಗ್ಮಾರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಸೋನಿಯಾ ಗಾಂಧಿ ರಾಜೀನಾನೆ ವಾಪಸ್ ಪಡೆದರು.

English summary
The ongoing crisis in the Congress party is a reminder of what had taken place in 1991. After assassination of Rajiv Gandhi repeated requests made to Sonia Gandhi to take the charge of party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X