ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಉಚಿತ: ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಜನವರಿ 12: ಭಾರತದಲ್ಲಿ ಕೋವಿಡ್-19 ಲಸಿಕೆಯ ಸಿದ್ಧತೆಯು ಅಂತಿಮ ಹಂತಕ್ಕೆ ಸಾಗಿದ್ದು, ಈಗಾಗಲೇ ದರವನ್ನು ಕೂಡ ನಿಗದಿಪಡಿಸಲಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಸರ್ಕಾರವು ಮೊದಲ ಖರೀದಿ ಒಪ್ಪಂದವನ್ನು ಮಾಡಿಕೊಂಡಿರುವುದರಿಂದ ಮೊದಲ ಹಂತದಲ್ಲಿ ದೇಶದ ಮೂರು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭರವಸೆ ನೀಡಿದ್ದಾರೆ.

ಸೋಮವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ಧ ಪ್ರಧಾನಿ ನರೇಂದ್ರ ಮೋದಿ ಲಸಿಕೆಯ ಸಿದ್ಧತೆ, ಹಂಚಿಕೆ ಮತ್ತು ದರದ ಕುರಿತು ತಿಳಿಸಿದರು. ಈ ವೇಳೆ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುವುದು. ಯಾವುದೇ ಜನಪ್ರತಿನಿಧಿಗಳು, ರಾಜಕಾರಣಿಗಳು ಪಾಲ್ಗೊಳ್ಳಬಾರದು ಎಂದು ಮನವಿ ಮಾಡಿದರು.

ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ 200 ರೂ ಫಿಕ್ಸ್!ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ 200 ರೂ ಫಿಕ್ಸ್!

ಜನವರಿ 16ರಿಂದ ದೇಶದಲ್ಲಿ ಲಸಿಕಾ ಅಭಿಯಾನ ಆರಂಭವಾಗಲಿದೆ. ಕಳೆದ ಸುಮಾರು ಒಂದು ತಿಂಗಳಲ್ಲಿ, ವಿವಿಧ ರಾಷ್ಟ್ರಗಳ 2.5 ಕೋಟಿ ಜನರಿಗೆ ಮಾತ್ರ ಲಸಿಕೆ ಲಭ್ಯವಾಗಿದೆ. ಆದರೆ ಭಾರತದಲ್ಲಿ ಮುಂದಿನ ಕೆಲವು ತಿಂಗಳಿನಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಲಾಗುವುದು ಎಂದಿದ್ದಾರೆ.

 Covid Vaccine Will Be Free For 3 Crore Healthcare And Frontline Workers: Narendra Modi

ಇದರ ನಡುವೆ ಎರಡೂ ಲಸಿಕೆಗಳು ಭಾರತದಲ್ಲೇ ತಯಾರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಒಂದು ವೇಳೆ ಬೇರೆ ರಾಷ್ಟ್ರಗಳಿಂದ ತರಿಸಿಕೊಳ್ಳುವುದಾದರೆ ತುಂಬಾ ಕಷ್ಟಗಳನ್ನು ಎದುರಿಸಬೇಕಾಗಿತ್ತು ಎಂದರು.

ಕೇಂದ್ರವು ಪುಣೆ ಮೂಲದ ಎಸ್‌ಐಐ ಜೊತೆ ಶನಿವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಎಸ್‌ಐಐ ಭಾರತದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಸ್ಟ್ರಾಜೆನೆಕಾ ಅವರಿಂದ ಕೋವಿಡ್ -19 ಲಸಿಕೆ ತಯಾರಿಸುತ್ತಿದೆ, ಮೊದಲ ಬಾರಿಗೆ ಸುಮಾರು 11 ಮಿಲಿಯನ್ ಡೋಸ್‌ಗಳನ್ನು ಪೂರೈಸಲು, ತಲಾ 200 ರೂ. ದರ ನಿಗದಿಪಡಿಸಿದೆ.

ಇದಲ್ಲದೆ ಕೇಂದ್ರವು ಭಾರತ್ ಬಯೋಟೆಕ್ ಜೊತೆ ಸುಮಾರು 4 ಮಿಲಿಯನ್ ಡೋಸ್‌ಗಳಿಗೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಲಸಿಕೆಯ ಪ್ರತಿ ಡೋಸ್‌ನ ಬೆಲೆ ಸುಮಾರು 300 ರೂಪಾಯಿನಷ್ಟಿದೆ.

English summary
Prime Minister Narendra Modi on Monday assured Chief Ministers that the Centre will fully bear the expenses of vaccination against Covid-19 for nearly 3 crore healthcare and frontline workers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X