ಸಿಹಿಸುದ್ದಿ: ಭಾರತದಲ್ಲಿ ಡಿಸೆಂಬರ್ ಹೊತ್ತಿಗೆ ಮಕ್ಕಳಿಗೂ ಕೊರೊನಾವೈರಸ್ ಲಸಿಕೆ

ನವದೆಹಲಿ, ನವೆಂಬರ್ 30: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗುತ್ತಿರುವ ಭೀತಿ ಎದುರಾಗಿದೆ. ಇದರ ಮಧ್ಯೆ ಮಕ್ಕಳಿಗೆ ಕೊವಿಡ್-19 ಲಸಿಕೆಯನ್ನು ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಡಾ ಎನ್‌ಕೆ ಅರೋರಾ ತಿಳಿಸಿದ್ದಾರೆ.

ದೇಶದಲ್ಲಿ ಆರೋಗ್ಯವಂತ ಮಕ್ಕಳಿಗೆ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುವುದು. ಜೈಡಸ್ ಕ್ಯಾಡಿಲಾದ ZyCoV-D ಲಸಿಕೆ ಪ್ರಮಾಣವನ್ನು ಮೂರರಿಂದ ಎರಡು ಡೋಸ್‌ಗಳಿಗೆ ತಗ್ಗಿಸುವುದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ವಯಸ್ಕರಿಗೆ ಕೊರೊನಾವೈರಸ್ ಲಸಿಕೆ ನೀಡುವಂತೆ 44 ಕೋಟಿ ಮಕ್ಕಳಿಗೂ ಲಸಿಕೆ ವಿತರಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಲಸಿಕೆ ಪಡೆದುಕೊಳ್ಳಲು ಅರ್ಹರಿರುವ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಡಾ. ಎನ್ ಕೆ ಅರೋರಾ ತಿಳಿಸಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ ಮಕ್ಕಳಿಗೆ ಕೊವಿಡ್-19 ಲಸಿಕೆ

ಡಿಸೆಂಬರ್ ತಿಂಗಳಿನಲ್ಲಿ ಮಕ್ಕಳಿಗೆ ಕೊವಿಡ್-19 ಲಸಿಕೆ

ಕೊರೊನಾವೈರಸ್ ಲಸಿಕೆ ವಿತರಣೆಯನ್ನು ನಾವು ಹಂತ-ಹಂತವಾಗಿ ಮಾಡುತ್ತೇವೆ. ಡಿಸೆಂಬರ್ ಮೊದಲೆರೆಡು ವಾರಗಳಲ್ಲಿ ಆದ್ಯತೆ ಮೇರೆಗೆ ಮಕ್ಕಳಿಗೆ ಲಸಿಕೆ ವಿತರಣೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಭಾವಿಸುತ್ತೇನೆ. ಅಗತ್ಯವಿರುವ ಶೇ.10 ರಿಂದ 15ರಷ್ಟು ಮಕ್ಕಳಿಗೆ ಲಸಿಕೆಯನ್ನು ವಿತರಿಸಿದ ನಂತರದಲ್ಲಿ ಉಳಿದ ಎಲ್ಲ ಆರೋಗ್ಯವಂತ ಮಕ್ಕಳಿಗೆ ಲಸಿಕೆ ವಿತರಿಸುವತ್ತ ಲಕ್ಷ್ಯ ವಹಿಸಲಾಗುವುದು ಎಂದು ಡಾ ಎನ್ ಕೆ ಅರೋರಾ ಮಾಹಿತಿ ನೀಡಿದ್ದಾರೆ.

ಕೊವಿಡ್-19 ಲಸಿಕೆ ಮೇಲಿನ ಪ್ರಯೋಗ

ಕೊವಿಡ್-19 ಲಸಿಕೆ ಮೇಲಿನ ಪ್ರಯೋಗ

ZyCov-D ನ ಡೋಸೇಜ್ ಪ್ರಯೋಗದ ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ. "ಕೊವ್ಯಾಕ್ಸಿನ್ ಸಹ ಪ್ರಯೋಗವನ್ನು ಪೂರ್ಣಗೊಳಿಸಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಲಸಿಕೆ ಸಿಗಲಿದೆ. ಇನ್ನೊಂದೆಡೆ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವೊವ್ಯಾಕ್ಸ್ ಲಸಿಕೆಯು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬುದರ ಕುರಿತು ವೈದ್ಯಕೀಯ ಪ್ರಯೋಗವನ್ನು ಪೂರ್ಣಗೊಳಿಸಲು ಕಾಯುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ.

ಶಾಲೆಗಳನ್ನು ತೆರೆದಿರುವಂತೆ ಸರ್ಕಾರಕ್ಕೆ ಮನವಿ

ಶಾಲೆಗಳನ್ನು ತೆರೆದಿರುವಂತೆ ಸರ್ಕಾರಕ್ಕೆ ಮನವಿ

ಮಕ್ಕಳು "ಅರಿವು ಮತ್ತು ಬೌದ್ಧಿಕ, ದೈಹಿಕ ಹಾಗೂ ಎಲ್ಲ ರೀತಿಯ ಸಾಮಾಜಿಕ ಬೆಳವಣಿಗೆಯ ಸಮಸ್ಯೆಗಳಿಂದ" ಬಳಲುತ್ತಿದ್ದಾರೆ. ಈ ಕಾರಣದಿಂದ ಶಾಲೆಗಳನ್ನು ತೆರೆಯುವುದು ಬಹುತೇಕ ತುರ್ತು ಅಗತ್ಯವಾಗಿದೆ ಎಂದು ಡಾ ಅರೋರಾ ಹೇಳಿದ್ದಾರೆ. ಅಲ್ಲದೇ, "ಶಾಲೆಗಳನ್ನು ತೆರೆಯಬೇಕು ಎಂದು ನಾನು ಇಡೀ ದೇಶವನ್ನು ಈ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಶಾಲೆಗಳಿಗೆ ವಿನಂತಿಸುತ್ತೇನೆ", ಎಂದಿದ್ದಾರೆ.

ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕಪಡಬೇಕಿಲ್ಲ

ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕಪಡಬೇಕಿಲ್ಲ

"ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಲು ಯಾವುದೇ ರೀತಿ ಆತಂಕಪಡಬೇಕಿಲ್ಲ, ಏಕೆಂದರೆ ನಮ್ಮಲ್ಲಿ ಉತ್ತಮ ರೋಗನಿರೋಧಕವನ್ನು ಪಡೆದಿರುವ ವಯಸ್ಕರ ಸಮೂಹವಿದೆ. ಎಲ್ಲಾ ಶಾಲೆಗಳಲ್ಲಿ ಬಹುತೇಕ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ, ಲಸಿಕೆ ಪಡೆಯದ ಸಿಬ್ಬಂದಿಗೆ ಲಸಿಕೆ ನೀಡಲು ವಿಶೇಷವಾಗಿ ಪ್ರಯತ್ನಿಸಲಾಗುತ್ತಿದೆ. ಶಾಲೆಗೆ ಹೋಗುವ ಮಕ್ಕಳನ್ನು ಹೊಂದಿರುವ ಕುಟುಂಬದಲ್ಲಿ ಎಲ್ಲ ಸದಸ್ಯರು ಲಸಿಕೆ ಪಡೆದುಕೊಂಡಿದ್ದಾರೆೆಯೇ ಎಂಬುದನ್ನು ಮೊದಲು ಗಮನಿಸಬೇಕು. ಇದರಿಂದ ಮಕ್ಕಳಿಗೂ, ರಕ್ಷಣೆ ಸಿಕ್ಕಂತೆ ಆಗುತ್ತದೆ. ಏಕೆಂದರೆ, ಈಗಾಗಲೇ ಹೆಚ್ಚಿನ ಮಕ್ಕಳು ಲಸಿಕೆಯನ್ನು ಪಡೆದುಕೊಂಡಿದ್ದು, ಒಂದು ರೀತಿಯ ರಕ್ಷಣೆ ನೀಡಲಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+