• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 2ನೇ ಅಲೆಗೆ ಕೆಲಸ ಕಳೆದುಕೊಂಡವರೆಷ್ಟು ಗೊತ್ತಾ? ಆಘಾತ ಹುಟ್ಟಿಸುತ್ತೆ ಅಂಕಿಅಂಶ

|
Google Oneindia Kannada News

ನವದೆಹಲಿ, ಜೂನ್ 1: ಕೊರೊನಾ ವೈರಸ್‌ನ ಎರಡನೇ ಅಲೆ ಭಾರತದಾದ್ಯಂತ ಭಾರಿ ಪ್ರಮಾಣದಲ್ಲಿ ಆಘಾತವನ್ನು ನೀಡಿದೆ. ಈ ಸಾಂಕ್ರಾಮಿಕ ರೋಗದ ನೇರ ಹೊಡೆತಕ್ಕೆ ಸಿಲುಕಿ ವೈರಸ್‌ನಿಂದ ನಲುಗಿ ಹೋದವರ ಸಂಖ್ಯೆ ಒಂದು ಕಡೆಯಾದರೆ ಕಡೆಯಾದರೆ ಮತ್ತೊಂದೆಡೆ ಪರೋಕ್ಷವಾಗಿ ನೀಡಿದ ಆಘಾತವೂ ಅಷ್ಟೇ ದೊಡ್ಡದಾಗಿದೆ. ಎರಡನೇ ಅಲೆಯಲ್ಲಿ ಕೆಲಸವನ್ನು ಅಂಕಿಅಂಶ ಇದಕ್ಕೆ ಸಾಕ್ಷಿಯನ್ನು ನೀಡುತ್ತಿದೆ.

ಕೊರೊನಾ ವೈರಸ್‌ನ ಎರಡನೇ ಅಲೆಯಿಂದಾಗಿ ಕೆಲಸ ಕಳೆದುಕೊಂಡವರ ಸಂಖ್ಯೆ ಬರೊಬ್ಬರಿ ಒಂದು ಕೋಟಿಗೂ ಅಧಿಕ ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ವ್ಯಾಸ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕಳೆದ ವರ್ಷ ಕೊರೊನಾ ವೈರಸ್ ಆರಂಭವಾದಾಗಿನಿಂದ 97 ಶೇಕಡಾ ಕುಟುಂಬಗಳು ತಮ್ಮ ಆದಾಯದಲ್ಲಿ ಕುಸಿತವನ್ನು ಅನುಭವಿಸಿದ್ದಾರೆ ಎಂದು ವಿವರಿಸಿದ್ದಾರೆ.

Bullet Point ಸುದ್ದಿ: ಲಸಿಕೆ ನೀತಿ ಬಗ್ಗೆ ಕೇಂದ್ರಕ್ಕೆ ಚುರುಕು ಮುಟ್ಟಿಸಿದ ಸುಪ್ರೀಂಕೋರ್ಟ್Bullet Point ಸುದ್ದಿ: ಲಸಿಕೆ ನೀತಿ ಬಗ್ಗೆ ಕೇಂದ್ರಕ್ಕೆ ಚುರುಕು ಮುಟ್ಟಿಸಿದ ಸುಪ್ರೀಂಕೋರ್ಟ್

ಈ ನಿರುದ್ಯೋಗದ ಪ್ರಮಾಣ ಆಗಸ್ಟ್ ತಿಂಗಳಿಗೆ ಶೇಕಡಾ 12 ಏರಿಕೆಯಾಗುವ ನಿರೀಕ್ಷೆಯನ್ನು ಥಿಂಕ್ ಟ್ಯಾಂಕ್ ವ್ಯಕ್ತಪಡಿಸುತ್ತದೆ. ಮೇ ಅಂತ್ಯದಲ್ಲಿ ಇದು ಶೇಕಡಾ 8 ರಷ್ಟಿದೆ ಎಂದು ಮಹೇಶ್ ವ್ಯಾಸ್ ತಿಳಿಸಿದ್ದಾರೆ. ಈ ಮೂಲಕ ಈ ಅವಧಿಯಲ್ಲಿ ಒಟ್ಟು 1 ಕೋಟಿಗೂ ಅಧಿಕ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು.

ನಿರುದ್ಯೋಗಕ್ಕೆ ಕೋರೊನಾ ಕಾರಣ

ನಿರುದ್ಯೋಗಕ್ಕೆ ಕೋರೊನಾ ಕಾರಣ

ಈ ಪ್ರಮಾಣದಲ್ಲಿ ಜನರು ಕೆಲಸವನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಂದು ಅವರು ತಿಳಿಸಿದ್ದಾರೆ. ಆರ್ಥಿಕತೆ ಮತ್ತೆ ತೆರೆದುಕೊಂಡಾಗ ಇದಕ್ಕೆ ಭಾಗಶಃ ಪರಿಹಾರ ಸಿಗುತ್ತದೆಯಾದರೂ ಸಂಪೂರ್ಣವಾಗಿ ಅಲ್ಲ ಎಂದು ಮಹೇಶ್ ವ್ಯಾಸ್ ಅಭಿಪ್ರಾಯಪಟ್ಟಿದ್ದಾರೆ.

ಮರಳಿ ಕೆಲಸ ಗಳಿಸುವುದು ಕಠಿಣ

ಮರಳಿ ಕೆಲಸ ಗಳಿಸುವುದು ಕಠಿಣ

ಇನ್ನು ಈ ಸಂದರ್ಭದಲ್ಲಿ ಕೆಲಸವನ್ನು ಕಳೆದುಕೊಂಡವರು ಮರಳಿ ಪಡೆಯುವುದು ಕಠಿಣವಾಗಿದೆ. ಇದರಲ್ಲಿ ಅನೌಪಚಾರಿಕ ವಲಯದ ಉದ್ಯೋಗಗಳನ್ನು ಶೀಘ್ರವಾಗಿ ಪಡೆಯುವ ಅವಕಾಶವಿದ್ದರೂ ಔಪಚಾರಿಕ ವಲಯದ ಹಾಗೂ ಉತ್ತಮ ಮಟ್ಟದ ಉದ್ಯೋಗಗಳನ್ನು ಗಳಿಸಲು ವರ್ಷಗಳೇ ಬೇಕಾಗಬಹುದು ಎಂದು ಅವರು ವಿವರಿಸಿದ್ದಾರೆ.

ಕಳೆದ ವರ್ಷ ದಾಖಲೆ ಪ್ರಮಾಣದ ನಿರುದ್ಯೋಗ

ಕಳೆದ ವರ್ಷ ದಾಖಲೆ ಪ್ರಮಾಣದ ನಿರುದ್ಯೋಗ

ಭಾರತದಲ್ಲಿ ನಿರುದ್ಯೋಗದ ಪ್ರಮಾಣ 2020 ಮೇ ತಿಂಗಳಿನಲ್ಲಿ ದಾಖಲೆಯ ಪ್ರಮಾಣವನ್ನು ತಲುಪಿತ್ತು. ಲಾಕ್‌ಡೌನ್ ಕಾರಣದಿಂದಾಗಿ 23.5 ಶೇಕಡಾದಷ್ಟು ನಿರುದ್ಯೋಗ ಪ್ರಮಾಣ ದಾಖಲಾಗಿತ್ತು. ಎರಡನೇ ಅಲೆಯ ವೈರಸ್ ಈಗಾಗಲೇ ಉತ್ತುಂಗಹಂತವನ್ನು ತಲುಪಿಯಾಗಿದ್ದು ಮುಂದಿನ ದಿನಗಳಲ್ಲಿ ಆರ್ಥಿಕ ಚಟುವಟಿಕೆ ಸರಾಗಗೊಳಿಸುವ ಪ್ರಕ್ರಿಯೆಗಳು ಆರಂಭವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

3-4 ಶೇಕಡಾ ನಿರುದ್ಯೋಗ ಪ್ರಮಾಣ ಸಾಮಾನ್ಯ

3-4 ಶೇಕಡಾ ನಿರುದ್ಯೋಗ ಪ್ರಮಾಣ ಸಾಮಾನ್ಯ

ಇನ್ನು ಇದೇ ಸಂದರ್ಭದಲ್ಲಿ 3-4 ಶೇಕಡಾದಷ್ಟು ನಿರುದ್ಯೋಗ ಪ್ರಮಾಣ ಭಾರತೀಯ ಆರ್ಥಿಕತೆಯಲ್ಲಿ ಸಾಮಾನ್ಯ ಎಂದು ಪರಿಗಣಿಸಬಹುದು ಎಂದು ಹೇಳಿದ್ದಾರೆ. ಇದೇ ವೇಳೆ ಪರಿಸ್ಥಿತಿ ಸುಧಾರಿಸುವ ಮೊದಲು ನಿರುದ್ಯೋಗ ಸಂಖ್ಯೆ ಕಡಿಮೆಯಾಗುವ ಸುಳಿವನ್ನು ಕೂಡ ನೀಡಿದ್ದಾರೆ.

English summary
Covid 19 Second wave left 1 crore Indians unemployed says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X