ಆಮ್ಲಜನಕ ಟ್ಯಾಂಕರ್‌ಗೆ ಸುಂಕವಿಲ್ಲ, ಹೆದ್ದಾರಿ ಟೋಲ್ ವಿನಾಯಿತಿ

ನವದೆಹಲಿ, ಮೇ 9: ಆಮ್ಲಜನಕ ಹೊತ್ತು ಸಾಗುವ ಟ್ಯಾಂಕರ್ ತ್ವರಿತವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಲು ಗ್ರೀನ್ ಕಾರಿಡಾರ್ ಅಗತ್ಯವಿದೆ ಎಂಬ ಕೂಗು ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಆಮ್ಲಜನಕ ಟ್ಯಾಂಕರ್‌ಗಳಿಗೆ ಸುಂಕ ವಿಧಿಸದಿರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ನಿರ್ಧರಿಸಿದೆ.

ದೇಶದಲ್ಲಿ ವೈದ್ಯಕೀಯ ಬಳಕೆಯ ಆಮ್ಲಜನಕ ಬೇಡಿಕೆ ಹೆಚ್ಚಾಗಿದೆ. ಆಮ್ಲಜನಕ ಲಭ್ಯವಾದರೂ ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಹಾಗೂ ಸರಾಗ ಸಂಚಾರ ವ್ಯವಸ್ಥೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಟೋಲ್ ಪ್ಲಾಜಾಗಳಲ್ಲಿ ಆಮ್ಲಜನಕವುಳ್ಳ ಟ್ಯಾಂಕರ್‌ಗಳಿಗೆ ಮೊದಲು ಆದ್ಯತೆ ನೀಡಲು NHAI ಮುಂದಾಗಿದೆ.

ತುರ್ತು ಸೇವೆ ಒದಗಿಸುವ ಆಂಬ್ಯುಲೆನ್ಸ್ ಸಾಗಾಟಕ್ಕೆ ಇರುವ ನಿಯಮಗಳು ಆಮ್ಲಜನಕ ಸಾಗಾಟದ ವಾಹನಕ್ಕೂ ಅನ್ವಯವಾಗಲಿದ್ದು, ಎರಡು ತಿಂಗಳುಗಳ ಕಾಲ ಟೋಲ್ ಇಲ್ಲದೆ ತ್ವರಿತವಾಗಿ ಸಾಗಾಟ ನಡೆಸಬಹುದಾಗಿದೆ.

COVID-19: NHAI exempts oxygen tankers from toll on national highways

ಫಾಸ್‌ಟ್ಯಾಗ್ ಜಾರಿಗೊಂಡ ಬಳಿಕ ಆದ್ಯತೆ ಮೇರೆಗೆ ವಾಹನ ಸಾಗಾಟದ ಮೇಲೆ ನಿಗಾ ವಹಿಸಲಾಗಿದ್ದು, ಆಮ್ಲಜನಕ ಸಾಗಾಟ, ವೈದ್ಯಕೀಯ ಸೇವೆ, ಆಂಬ್ಯುಲೆನ್ಸ್ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಇದಲ್ಲದೆ ದೇಶದೆಲ್ಲೆಡೆ 581 PSA ಆಮ್ಲಜನಕ ಘಟಕಗಳಲ್ಲಿ ಬಾಕಿ ಉಳಿದಿರುವ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರೈಸಲು NHAI ಮುಂದಾಗಿದೆ. ಮುಂದಿನ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಹೆಚ್ಚು ಹೆಚ್ಚು ಆಮ್ಲಜನಕ ಘಟಕಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+