ಮುಂಬೈ ಮಳೆಯಲ್ಲಿ ನೃತ್ಯ ಮಾಡಿದ ಜೋಡಿ: ನೆಟ್ಟಿಗರು ಫಿಧಾ- ವಿಡಿಯೋ ವೈರಲ್
ಮಳೆ... ಮಳೆ... ಮಳೆ... ಎಲ್ಲಿ ನೋಡಿದರೂ ಮಳೆಯದ್ದೇ ಮಾತು. ಮುಂಗಾರು ಮಳೆ ತಡವಾದರೂ ದೇಶದೆಲ್ಲೆಡೆ ಭರ್ಜರಿಯಾಗಿ ಅರ್ಭಟಿಸುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿದೆ. ಮುಂಗಾರು ಮಳೆಯಲ್ಲಿ ಜೋಡಿಯೊಂದು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುತ್ತಿದೆ.
2007ರಲ್ಲಿ ತೆರೆ ಕಂಡ ಸಿನಿಮಾ 'ಜಬ್ ವಿ ಮೆಟ್'ನ ರೊಮ್ಯಾಂಟಿಕ್ 'ತುಮ್ ಸೆ ಹಿ' ಹಾಡಿಗೆ ಯುವ ಜೋಡಿ ನೃತ್ಯ ಮಾಡಿದೆ. ಅನೇಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ನಟಿಸಿರುವ ಈ ಮೋಡಿಮಾಡುವ ಮಧುರವಾದ ಹಾಡನ್ನು ಮೋಹಿತ್ ಚೌಹಾನ್ ಹಾಡಿದ್ದಾರೆ. ಇರ್ಷಾದ್ ಕಾಮಿಲ್ ಅವರು ಸುಂದರವಾಗಿ ಬರೆದಿರೆ, ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ. ಬಿಡುಗಡೆಯಾದ ಹಲವು ವರ್ಷಗಳ ನಂತರವೂ ಹಾಡು ಕೇಳುಗರನ್ನು ಸೆಳೆಯುತ್ತಲೇ ಇದೆ.

ಮುಂಬೈ ಮಳೆಯಲ್ಲಿ ದಂಪತಿ ನೃತ್ಯ ಮಾಡಿದ ವೀಡಿಯೊವನ್ನು ಇಲ್ಲಿ ನೋಡಿ:
ಅನೇಕರು ಈ ಹಾಡಿನ ಟ್ಯೂನ್‌ಗೆ ಈಗಲೂ ತಲೆ ಅಲ್ಲಾಡಿಸುತ್ತಾರೆ. ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ನೃತ್ಯದ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಹಾಡನ್ನು ಒಳಗೊಂಡ ಲೆಕ್ಕವಿಲ್ಲದಷ್ಟು ವೀಡಿಯೊಗಳಲ್ಲಿ, ಈ ಒಂದು ನಿರ್ದಿಷ್ಟ ವಿಡಿಯೋ ಜನರ ಗಮನವನ್ನು ಸೆಳೆದಿದೆ.
ವಿಡಿಯೋದಲ್ಲಿ 'ತುಮ್ ಸೆ ಹಿ' ಎಂಬ ಸುಮಧುರ ಹಾಡಿಗೆ ಮುಂಬೈನಲ್ಲಿ ಜೋರು ಮಳೆಯಲ್ಲಿ ಫುಟ್‌ಪಾತ್‌ನಲ್ಲಿ ಜೋಡಿ ನೃತ್ಯ ಮಾಡುವುದನ್ನು ನೋಡಬಹುದು. ವೀಡಿಯೊ ಎಷ್ಟು ಆಕರ್ಷಕವಾಗಿದೆ ಅಂದರೆ ಮತ್ತೊಮ್ಮೆ ನೋಡುವ ಮನಸ್ಸಾಗದೇ ಇರದು.
This Or Nothing 😭😭❤️
— Anu. (@theLostFirsbee) July 7, 2023
Najar na lge 🧿 pic.twitter.com/OkG6S5dEjG
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊದ ಜೊತೆಗೆ "ದೃಷ್ಟಿ ಆಗಬಾರದು" ಎಂದು ಬರೆದು ಹಂಚಿಕೊಳ್ಳಲಾಗಿದೆ. ಜೋರಾಗಿ ಮಳೆ ಸುರಿಯುತ್ತಿರುವಾಗ ಫುಟ್‌ಪಾತ್‌ನಲ್ಲಿ ದಂಪತಿಗಳು ನೃತ್ಯ ಮಾಡುತ್ತಿರುವುದು ವೀಡಿಯೊದಲ್ಲಿದೆ. ನಗುವಿನೊಂದಿಗೆ ಈ ಜೋಡಿ ನೃತ್ಯ ಮಾಡುತ್ತಿದ್ದರೆ ಹಿಂಬದಿಯಲ್ಲಿ ಕಾರುಗಳು ಮತ್ತು ಟ್ಯಾಕ್ಸಿಗಳು ಹಾದುಹೋಗುವುದು ಕಾಣಬಹುದು.
ಈ ವಿಡಿಯೋವನ್ನು ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ನಂತರ 2.2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಸಂಖ್ಯೆಗಳು ಇನ್ನೂ ಹೆಚ್ಚುತ್ತಿವೆ. ವೀಡಿಯೊ 3,800 ಕ್ಕೂ ಹೆಚ್ಚು ಲೈಕ್ಸ್ ಮತ್ತು 700 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಸಂಗ್ರಹಿಸಿದೆ. ಅನೇಕರು ತಮ್ಮ ಆಲೋಚನೆಗಳನ್ನು ವೀಡಿಯೊ ಬಗ್ಗೆ ಹಂಚಿಕೊಂಡಿದ್ದಾರೆ.
ಕಾಮೆಂಟ್‌ಗಳ ವಿಭಾಗದಲ್ಲಿ ಜನರು ಬರೆದದ್ದು ಇಲ್ಲಿದೆ:
"ಈ ರೀತಿಯ ಪ್ರೀತಿ ಇನ್ನೂ ಇದೆಯೇ?" ಎಂದು ಪ್ರಶ್ನೆ ಮಾಡುವ ಮೂಲಕ ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಬ್ಬರು, "ಅವರು ಇಷ್ಟು ಖುಷಿಯಾಗಿರಲು ಕಾರಣವೇನು ಎನ್ನುವುದನ್ನು ನಾನು ತಿಳಿಯಬೇಕು"
"ಮಳೆಯಲ್ಲಿ ಜೊತೆಯಲಿ ದಿನವಿಡಿ ನೆನೆಯಲು" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
ನಾಲ್ಕನೆಯವರು "ಮಳೆಯಲ್ಲಿ ನೃತ್ಯ. ಯಾರಿಗಾದರೂ ಹಾಡು ತಿಳಿದಿದೆಯೇ?"
"ಎಂದೆಂದಿಗೂ ಈ ರೀತಿಯ ಸಂಬಂಧವನ್ನು ವ್ಯಕ್ತಪಡಿಸಿ" ಎಂದು ಐದನೆಯವರು ಬರೆದಿದ್ದಾರೆ.
ಆರನೆಯವರು, "ಓಮ್, ತುಂಬಾ ಮುದ್ದಾಗಿದೆ" ಎಂದು ವ್ಯಕ್ತಪಡಿಸಿದ್ದಾರೆ.












Click it and Unblock the Notifications