Couple Missing: 3 ವರ್ಷದ ಮಗುವನ್ನು ಸೇತುವೆ ಮೇಲೆ ಬಿಟ್ಟು ನದಿಗೆ ಹಾರಿದ ದಂಪತಿ!

Couple Missing: ಇನ್ನೂ ಬದುಕಿನ ಅರ್ಥವೇ ತಿಳಿಯದ ಮೂರು ವರ್ಷದ ಕಂದಮ್ಮ... ಆದರೆ ಆ ರಾತ್ರಿ ಆ ಮಗು ಸೇತುವೆ ಮೇಲೆ ಒಂಟಿಯಾಗಿ ಉಳಿಯಬೇಕಾಯಿತು. ತಂದೆ-ತಾಯಿ ಎಲ್ಲಿದ್ದಾರೆ ಎಂಬುದೇ ತಿಳಿಯದೆ ಅಳುತ್ತಿದ್ದ ಮಗುವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಗುರುವಾರ ರಾತ್ರಿ ಚಿಂಟಚಿನಾಡ ಸೇತುವೆ ಬಳಿ ಈ ಮನಕಲಕುವ ಘಟನೆ ನಡೆದಿದೆ ಎನ್ನಲಾಗಿದೆ. 29 ವರ್ಷದ ಸಾಯಿ ಮತ್ತು 28 ವರ್ಷದ ಅವರ ಪತ್ನಿ ಸಿರೀಷಾ ತಮ್ಮ ಮೂರು ವರ್ಷದ ಮಗನೊಂದಿಗೆ ರಾತ್ರಿ ಸುಮಾರು 10 ಗಂಟೆಗೆ ಸ್ಕೂಟರ್‌ನಲ್ಲಿ ಸೇತುವೆ ಬಳಿ ಬಂದಿದ್ದರು ಎಂದು ವರದಿಯಾಗಿದೆ. ಸ್ವಲ್ಪ ಸಮಯದ ಬಳಿಕ ದಂಪತಿ ಮಗುವನ್ನು ಸ್ಕೂಟರ್‌ನಲ್ಲೇ ಬಿಟ್ಟು ಗೋದಾವರಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಅಪ್ಪ-ಅಮ್ಮನಿಗಾಗಿ ಕಾಯುತ್ತಾ ಸೇತುವೆ ಮೇಲೆ ಮಗು ಅಳುತ್ತಿದ್ದ ದೃಶ್ಯ ಸ್ಥಳೀಯರ ಮನಕಲಕಿದೆ.

couple missing couple leaves 3-year-old child on bridge before allegedly jumping into godavari river

Couple Missing: ಅಪ್ಪ-ಅಮ್ಮ ಅಳುತ್ತಿದ್ದ ಕಂದಮ್ಮ

ಸೇತುವೆ ಮೇಲೆ ಒಂಟಿಯಾಗಿ ಅಳುತ್ತಿದ್ದ ಮಗುವನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಯಳಮಂಚಿಲಿ ಪೊಲೀಸರು ಮಗುವನ್ನು ರಕ್ಷಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಸ್ಕೂಟರ್‌ನ್ನೂ ವಶಕ್ಕೆ ಪಡೆದುಕೊಂಡಿದ್ದು, ಬಳಿಕ ಮಗುವನ್ನು ಕುಟುಂಬಸ್ಥರ ಆರೈಕೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಮಗುವಿನ ತಂದೆ-ತಾಯಿಯ ಸುಳಿವಿಗಾಗಿ ಪೊಲೀಸರು ಹಾಗೂ ರಕ್ಷಣಾ ತಂಡಗಳು ಗೋದಾವರಿ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿವೆ.

ಸಾಲದ ಹೊರೆ ಕಾಡಿತ್ತೇ?

ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ದಂಪತಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬ ಮಾಹಿತಿ ಸ್ಥಳೀಯರಿಂದ ದೊರೆತಿದೆ ಎನ್ನಲಾಗಿದೆ. ಸಾಲದ ಸಮಸ್ಯೆಯಿಂದ ಅವರು ಮಾನಸಿಕವಾಗಿ ನೊಂದಿದ್ದರು ಎಂಬ ಮಾತುಗಳೂ ಕೇಳಿಬಂದಿವೆ. ಆದರೆ, ಸಾಲದ ಸಮಸ್ಯೆಯೇ ದಂಪತಿ ನಾಪತ್ತೆಯಾಗಲು ಕಾರಣ ಎಂಬುದು ಇನ್ನೂ ಖಚಿತವಾಗಿಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಸಾಯಿ ಹಾಗೂ ಸಿರೀಷಾ ಭೀಮಾವರಂನಲ್ಲಿ ವಾಸವಾಗಿದ್ದರು ಎನ್ನಲಾಗಿದ್ದು, ಮೂಲತಃ ತಣಕು ಮಂಡಲದ ವೆಲ್ಪೂರು ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ಕಡೆ ಗೋದಾವರಿ ನದಿಯಲ್ಲಿ ತಂದೆ-ತಾಯಿಗಾಗಿ ಶೋಧ ನಡೆಯುತ್ತಿದ್ದರೆ, ಮತ್ತೊಂದೆಡೆ ಏನೂ ಅರಿಯದ ಮೂರು ವರ್ಷದ ಮಗು ಕುಟುಂಬಸ್ಥರ ಆಶ್ರಯದಲ್ಲಿದೆ. ಕೆಲವೇ ಗಂಟೆಗಳ ಹಿಂದೆ ಅಪ್ಪ-ಅಮ್ಮನೊಂದಿಗೆ ಸೇತುವೆ ಬಳಿ ಬಂದಿದ್ದ ಆ ಕಂದಮ್ಮ, ಇದೀಗ ಅವರಿಗಾಗಿ ಕಾಯುವ ಪರಿಸ್ಥಿತಿಗೆ ಸಿಲುಕಿರುವುದು ಘಟನೆಗೆ ಮತ್ತಷ್ಟು ನೋವಿನ ಆಯಾಮ ನೀಡಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದಂಪತಿಯ ಪತ್ತೆ ಹಾಗೂ ಘಟನೆಯ ನಿಖರ ಕಾರಣ ತಿಳಿಯಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+