ಪೋಲಿಯಾಗಿ ಹಿಂಗೆ ಬೈಕ್ ಓಡಿಸಿದ್ರೆ ಪೊಲೀಸರು ಬಿಟ್ಟಾರಾ?

ಪಣಜಿ, ಮಾ. 24: 'ಬೈಕ್ ಇರುವುದು ಪ್ರಯಾಣಕ್ಕಾಗಿ, ಸರ್ಕಸ್ ಮಾಡಿ ಪ್ರಾಣ ಕಳೆದುಕೊಳ್ಳಬೇಡಿ, ಇದು ಜನಹಿತಕ್ಕಾಗಿ ಜಾರಿ' ಈ ಜಾಹೀರಾತನ್ನು ನೀವು ಎಲ್ಲಿಯಾದರೂ ಕೇಳಿಯೇ ಇರುತ್ತೀರಿ.

ಆದ್ರೆ ಇಲ್ಲೊಬ್ಬ ಮಹಾಶಯ ತನ್ನ ಪ್ರೇಯಸಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋದ ಬಗೆ ಎಂಥ ಬಾಲಿವುಡ್ ಸಿನಿಮಾವನ್ನು ನಾಚಿಸುತ್ತದೆ. ಗೋವಾದದಲ್ಲಿ ಇಂಥದ್ದೊಂದು 'ಅಶ್ಲೀಲ ಚಾಲನೆ' ಮಾಡಿದ ಜೋಡಿಗೆ ಪೊಲೀಸರು ದಂಡ ಹಾಕಿದ್ದಾರೆ.[ಗೋವಾ ಬೀಚುಗಳಲ್ಲಿ ನೀರಾಟ ನಿಷೇಧ]

bike

ಆತ ಬೈಕ್ ಓಡಿಸಿದ ರೀತಿಯನ್ನು ನೀವು ಚಿತ್ರದಲ್ಲೇ ನೋಡಬೇಕು. ತಲೆಯಲ್ಲಿ ಇಂಥ ಐಡಿಯಾ ಹೇಗೆ ಬಂತೋ ಗೊತ್ತಿಲ್ಲ. ಪಾರ್ಕ್ ನಲ್ಲಿ, ಪಬ್ ನಲ್ಲಿ, ಮತ್ತಿಮ್ಮೆಲ್ಲೋ ರೊಮಾನ್ಸ್ ಮಾಡುತ್ತಿದ್ದವರಿಗೆ(ಮಾಡುತ್ತಿರುವವರಿಗೆ) ಚಾಲನೆಯಲ್ಲಿ ಇರುವ ಬೈಕ್ ಮೇಲೂ 'ಆಟ' ಆಡಬಹುದು ಎಂದು ಸಂಶೋಧನೆ ಮಾಡಿದ ಈತನ ಸಾಹಸ ಮೆಚ್ಚಲೇಬೇಕು ಬಿಡಿ. ಯಾವ ಚಾಲನಾ ಶಾಲೆಯಲ್ಲೂ ಇಂಥ ವಿಧಾನ ಹೇಳಿಕೊಡಲ್ಲ!

ಮಧ್ಯಪ್ರದೇಶ ಮೂಲದ ಜೋಡಿಯೊಂದು ಸಿಕ್ಕಿದ್ದೇ ಅವಕಾಶ ಎಂದು ಅಪಾಯಕಾರಿ ಮತ್ತು ಅಷ್ಟೇ ಅಶ್ಲೀಲಕಾರಿ ರೀತಿಯಲ್ಲಿ ಪಣಜಿಯ ಹೆದ್ದಾರಿಯಲ್ಲಿ ಬೈಕ್ ಏರಿ ಸವಾರಿ ಮಾಡಿದೆ. ಇದನ್ನು ಫೋಟೋ ತೆಗೆದ ಪುಣ್ಯಾತ್ಮನೊಬ್ಬ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ. ಕ್ಷಣಮಾತ್ರದಲ್ಲಿ ಪೋಟೋ ವೈರಲ್ ಆಗಿದೆ.[ಗೋವಾ ಬೀಚಿನಲ್ಲಿ ಈಜಾಟವಾಡಿದರೆ, ಸಾವು ನಿಮಗೆ]

ಪಣಜಿಯ ಮಾಂಡೋವಿ ಸೇತುವೆ ಬಳಿ ಜೋಡಿ ಸಾಗುತ್ತಿದ್ದಾಗ ಫೋಟೋ ತೆಗೆಯಲಾಗಿದೆ. ನಂತರ ವಾಹನ ನಂಬರ್ ಮೂಲಕ ಗೋವಾ ಪೊಲೀಸರು ವಿವರ ಕಲೆ ಹಾಕಿದ್ದಾರೆ. ಸ್ಥಳೀಯರೊಬ್ಬರಿಂದ ಬೈಕ್ ಬಾಡಿಗೆಗೆ ಪಡೆದಿದ್ದ ಜೋಡಿಗೆ ಗೋವಾ ಪೊಲೀಸರು ಸಾವಿರ ರೂ. ದಂಡ ಹಾಕಿದ್ದಾರೆ. ರಜೆ ಕಳೆಯಲು ಗೋವಾಕ್ಕೆ ಬಂದಿದ್ದ ಜೋಡಿ ಸ್ಟಾರ್ ಹೋಟೆಲ್ ವೊಂದರಲ್ಲಿ ತಂಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+