ಅಮಿತ್ ಶಾರ OROPಗೆ ಒಮರ್ ಅಬ್ದುಲ್ಲಾರ ODOMOS ಟಾಂಗ್
ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಅವರಿಗೆ ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಂದರೆ OROP ಅಂದರೆ ಓನ್ಲಿ ರಾಹುಲ್ ಅಂಡ್ ಓನ್ಲಿ ಪ್ರಿಯಾಂಕಾ ಎಂದು ಅಮಿತ್ ಶಾ ಹೀಗಳೆದಿದ್ದರು. ಇದಕ್ಕೆ ತಿರುಗೇಟು ನೀಡುವಂತೆ ದೇಶವು ಈಗ ODOMOSನಿಂದ ಬಳಲುತ್ತಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ODOMOS ಅಂದರೆ ಓವರ್ ಡೋಸ್ ಆಫ್ ಓನ್ಲಿ ಮೋದಿ, ಓನ್ಲಿ ಶಾ ಎಂದು ವಿವರಣೆ ಕೂಡ ನೀಡಿದ್ದಾರೆ. ಅಬ್ದುಲ್ಲಾ ಅವರು ಈ ರೀತಿ ಸೋಮವಾರದಂದು ಟ್ವೀಟ್ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಉನಾದಲ್ಲಿ ಮಾತನಾಡುತ್ತಾ, ಬಿಜೆಪಿ ಅಧಿಕಾರಕ್ಕೆ ಬಂದ ಒಂದೆ ವರ್ಷದಲ್ಲಿ ನೀಡಿದ್ದ ಭರವಸೆಯಂತೆ ಏಕ ಶ್ರೇಣಿ-ಏಕ ಪಿಂಚಣಿ (OROP) ಜಾರಿಗೆ ತಂದಿತು. ಆದರೆ ಕಾಂಗ್ರೆಸ್ ನೀಡಿದ್ದು ರಾಹುಲ್-ಪ್ರಿಯಾಂಕಾರನ್ನು ಮಾತ್ರ ಎಂದಿದ್ದರು.

ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸೋದರಿ ಆಗಬೇಕು. ಈಚೆಗಷ್ಟೇ ಉತ್ತರಪ್ರದೇಶ ಪೂರ್ವ ಭಾಗದ ಪ್ರಧಾನ ಕಾರ್ಯದರ್ಶಿ ಆಗಿ ಕಾಂಗ್ರೆಸ್ ಪಕ್ಷದಿಂದ ನೇಮಿಸಲಾಗಿದೆ. ಸದ್ಯಕ್ಕೆ ಈ ವಿಚಾರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ಅಂದರೆ ಒಮರ್ ಅಬ್ದುಲ್ಲಾ ಅವರ ODOMOS ವ್ಯಂಗ್ಯ.












Click it and Unblock the Notifications