ಕಾರ್ಪೊರೇಟ್ ಉದ್ಯೋಗ vs ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್: ಯಾರ ಜೀವನ ಸುಲಭ? ಯಾರಿಗೆ ಹೆಚ್ಚು ಆದಾಯ?

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಸೊಶಿಯಲ್‌ ಮೀಡಿಯಾದ್ದೇ ಅಬ್ಬರ. ಎಲ್ಲಿ ಏನೇ ಆದರೂ ಸೋಶಿಯಲ್‌ ಮಿಡಿಯಾದಲ್ಲಿ ಇದರ ಬಗ್ಗೆ ಟೀಕೆ ಟಿಪ್ಪಣಿ ಬಂದಾಗುತ್ತದೆ. ಅಥವಾ ಯಾವುದೇ ಹೊಸ ಪ್ರಾಡೆಕ್ಟ್‌ ಮಾರ್ಕೆಟ್‌ಗೆ ಬರಲಿ, ಈ ಸೋಶಿಯಲ್‌ ಮಿಡಿಯಾ ಇನ್ಫ್ಲುಯೆನ್ಸರ್‌ಗಳು ಇದರ ಬಗ್ಗೆ ಉದ್ದುದ್ದ ಭಾಷಣ ಕೊಟ್ಟಾಗತ್ತದೆ. ಕೆಲವೊಮ್ಮೆ ಸರಿ ಯಾವುದು ತಪ್ಪು ಯಾವುದು ಎನ್ನುವುದೋ ಗೊತ್ತಾಗುವುದಿಲ್ಲ. ಇದನ್ನು ಅವರುಗಳು ಸುಮ್ಮನೆ ಮಾಡುವುದಿಲ್ಲ. ತಮ್ಮ ವ್ಯೂವ್ಸ್‌ ಜಾಸ್ತಿಯಾದರೆ, ಹೆಚ್ಚು ಲೈಕ್‌, ಕಾಮೆಂಟ್‌ ಬಂದರೆ ಅವರಿಗೆ ದುಡ್ಡು ಸಿಗುತ್ತದೆ. ಅದೆಷ್ಟೋ ಮಂದಿಗೆ ಇದುವೇ ಖಾಯಂ ಉದ್ಯೋಗ.

ಕೆಲವೊಮ್ಮೆ ಈ ಇನ್ಫ್ಲುಯೆನ್ಸರ್‌ಗಳನ್ನು ನೋಡುವಾಗ ಇವರ ಜೀವನ ಎಷ್ಟು ಚಂದ ಅನ್ನಿಸಿ ಬಿಡುತ್ತದೆ. ಇನ್ನು ಕೆಲವೊಮ್ಮೆ ಇದಕ್ಕಿಂತ ಬೆಳಗ್ಗಿನಿಂದ ಸಂಜೆವರೆಗೆ ಆಫೀಸ್‌ಗೆ ಹೋಗಿ ತಿಂಗಳ ಕೊನೆಗೆ ಸ್ಯಾಲರಿ ತಗೋಳೋದೇ ಒಳ್ಳೇದು ಅನ್ನಿಸುತ್ತದೆ. ಈ ಜೀವನದಲ್ಲಿ ಯಾವುದೂ ಸುಲಭಾನೂ ಅಲ್ಲ, ಕಷ್ಟನೂ ಅಲ್ಲ. ಯಾವುದನ್ನು ನಾವು ಹೇಗೆ ತಗೋತೇವೆ ಅನ್ನೋದರ ಮೇಲೆ ಎಲ್ಲವೂ ನಿರ್ಧರಿತ.

Corporate Job vs Social Media

ಎರಡರಲ್ಲಿ ಯಾವುದು ಬೆಸ್ಟ್‌

ಇದೀಗ ಬೆಂಗಳೂರು ಮೂಲದ ಇಬ್ಬರು ಮಹಿಳೆಯರು ಕೂಡಾ ತಮ್ಮ ಜೀವನವನ್ನು ಹೋಲಿಸಿಕೊಂಡು ನೋಡಿದ್ದಾರೆ. ಇವರಲ್ಲಿ ಒಬ್ಬರು ಕಾರ್ಪೊರೇಟ್ ಉದ್ಯೋಗಿಯಾದರೆ ಮತ್ತೊಬ್ಬರು ಕಟೆಂಟ್‌ ಕ್ರಿಯೇಟರ್‌. ಯಾರ ಜೀವನ ಹೇಗೆ ನಡೆಯುತ್ತದೆ ಎನ್ನುವುದನ್ನು ಪ್ರತಿ ವಿಷಯದಲ್ಲಿಯೂ ಹೋಲಿಸಿ ಮಾತನಾಡಿದ್ದಾರೆ. ಈ ಮೂಲಕ ಇಂಟರ್ನೆಟ್‌ನಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ್ದಾರೆ.

ಆದಾಯದಿಂದ ಲೈಫ್‌ಸ್ಟೈಲ್‌ವರೆಗೆ

ಇವರಿಬ್ಬರೂ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬಿಬಿಎ ಪದವಿ ಪಡೆರುವುದಾಗಿ ಹೇಳಿಕೊಂಡಿದ್ದಾರೆ. @a.nanyaahh._ ಮತ್ತು @monsoon.dey Instagram ಅಕೌಂಟ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಇಲ್ಲಿ ಅನನ್ಯ EY ನಲ್ಲಿ ಅನಾಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮಾನ್ಸೂನ್ ಫುಲ್‌ ಟೈಂ ಕಟೆಂಟ್‌ ಕ್ರಿಯೇಟರ್ ಮತ್ತು ಫ್ರೀಲ್ಯಾನ್ಸರ್ ಆಗಿ ದುಡಿತಾ ಇದ್ದಾರೆ. ಇವರಿಬ್ಬರು ಈ ವಿಡಿಯೋದಲ್ಲಿ ತಮಗೆ ಬರುವ ಆದಾಯದಿಂದ ಹಿಡಿದು ಫುಲ್‌ ಲೈಫ್‌ ಸ್ಟೈಲ್‌ ಬಗ್ಗೆ ಹೋಲಿಸಿಕೊಂಡು ಮಾತನಾಡಿದ್ದಾರೆ.

ವೇತನ ಯಾರಿಗೆ ಜಾಸ್ತಿ

ಆದಾಯದ ಬಗ್ಗೆ ಹೇಳುವುದಾದ್ರೆ ಅನನ್ಯಾ ಪ್ರತಿ ತಿಂಗಳ ಕೊನೆಗೆ ಒಂದು ನಿರ್ದಿಷ್ಟ ದಿನಕ್ಕೆ ನಿಗದಿತ ಸಂಬಳ ಪಡೀತಾರೆ. ಆದರೆ ಮಾನ್ಸೂನ್‌ಗೆ ಇಷ್ಟೇ ಹಣ ಬರುತ್ತದೆ ಎಂದೇನಿಲ್ಲ. ಒಂದು ತಿಂಗಳು ಹೆಚ್ಚು ಬಂದರೆ ಇನ್ನೊಂದು ತಿಂಗಳು ಕಡಿಮೆಯಾಗಬಹುದು. ಅಥವಾ ಹಿಂದಿನ ತಿಂಗಳಿಗಿಂತಲೂ ಜಾಸ್ತಿ ಇರಬಹುದು. ಇನ್ನು ಇವರಿಗೆ ಪೇಮೆಂಟ್‌ ಬರುವ ಮೊದಲು 2-3 ಫಾಲೋ-ಅಪ್‌ಗಳನ್ನು ಮಾಡಬೇಕಾಗುತ್ತದೆ, ಇನ್‌ವಾಯ್ಸ್‌ಗಳ ಅಗತ್ಯವೂ ಇರುತ್ತದೆ.

ಇನ್ನು ಕೆಲಸದ ದಿನಚರಿಗಳ ಬಗ್ಗೆ ಮಾತನಾಡುವಾಗ EY ವಿಶ್ಲೇಷಕಿ ತನ್ನ ದಿನವನ್ನು ರಚನಾತ್ಮಕ, ಯೋಜಿತ ಮತ್ತು ವ್ಯವಸ್ಥಿತ ಎಂದು ಹೇಳಿಕೊಂಡಿದ್ದಾರೆ. ಮಾನ್ಸೂನ್ ಬೆಳಗ್ಗೆ ಎದ್ದ ತಕ್ಷಣ ಆ ದಿನದ ವೈಬ್‌ ಏನು, ಡೆಡ್‌ಲೈನ್‌ ಯಾವುದು ಎನ್ನುವುದನ್ನು ನಿರ್ಧಾರ ಮಾಡಬೇಕಾಗುತ್ತದೆ. ಇನ್ನು ಅನನ್ಯಾ ಆಫೀಸಿಗೆ ಹೋಗಿ ಬರಲು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಒಂದು ಗಂಟೆ ಕಳೆಯಬೇಕಾಗುತ್ತದೆ. ಆದ್ರೆ ಮಾನ್ಸೂನ್ ಹಾಸಿಗೆಯಿಂದ ಮೇಜಿನವರೆಗೆ ಹೋದರೆ ಸಾಕು ಅದೇ ಅವರ ಆಫೀಸ್‌.

ಇಬ್ಬರೂ ರಜೆ ನೀತಿಗಳು ಮತ್ತು ಲಂಚ್‌ ಬ್ರೇಕ್‌ಗಳ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ. ರಜೆ ಬೇಕಿದ್ದರೆ ಅನನ್ಯಾ ಮೊದಲೇ ಅಪ್ಲೈ ಮಾಡಬೇಕು. ಆದರೆ ಮಾನ್ಸೂನ್‌ಗೆ ಯಾರ ಪರಮಿಷನ್‌ ಕೂಡಾ ಬೇಕಿಲ್ಲ. ಅವರಿಗೆ ಅವರೇ ಬಾಸ್.‌ಅನನ್ಯಾಗೆ ಆಫೀಸಿನಲ್ಲಿ ಊಟಕ್ಕೆ ನಿಗದಿತ ಸಮಯ ಅಂತ ಇದೆ. ಆದರೆ ಕಟೆಂಟ್‌ ಕ್ರಿಯೇಟರ್‌ ಆಗಿರುವ ಮಾನ್ಸೂನ್‌ ಹಾಗಲ್ಲ, ತನಗೆ ಯಾವಾಗ ಬೇಕೋ ಆವಾಗ ತಿನ್ನುತ್ತಾರೆ.

ಇನ್ನು ಮೀಟಿಂಗ್‌, ಟಾರ್ಗೆಟ್‌, ಡೆಡ್‌ಲೈನ್‌ನಿಂದಾಗಿ ಕಾರ್ಪೊರೇಟ್ ಜೀವನವು ಒತ್ತಡದಿಂದ ಕೂಡಬಹುದು. ಆದರೆ ಕಟೆಂಟ್‌ ಕ್ರಿಯೇಟರ್‌ಗಳನ್ನು ಕೂಡಾ ಒಂಟಿತನ ಕಾಡಬಹುದು. ಯಾಕೆಂದರೆ ತಮ್ಮ ಕೆಲಸದಲ್ಲಿ ಅವರಿಗೆ ಲ್ಯಾಪ್‌ಟಾಪೇ ಅವರ ಸಂಗಾತಿ.

ಈ ಜೋಡಿ ತಮ್ಮ ವೃತ್ತಿಜೀವನದ ಅತಿದೊಡ್ಡ ಸವಲತ್ತುಗಳ ಬಗ್ಗೆ ಕೂಡಾ ಚರ್ಚೆ ಮಾಡಿದ್ದಾರೆ. ಅನನ್ಯಾ ವೇತನ ಸಹಿತ ರಜೆ, ಉಚಿತ ಜಿಮ್ ಸದಸ್ಯತ್ವ ಮತ್ತು ವಿಮೆಯಂತಹ ಪ್ರಯೋಜನಗಳನ್ನು ಪಡೆಯುತ್ತಾರೆ. ಕಟೆಂಟ್‌ ಕ್ರಿಯೇಟರ್‌ ಆಗಿ ಕೆಲಸ ಮಾಡುವ ದೊಡ್ಡ ಪ್ರಯೋಜನವೆಂದರೆ ಎಲ್ಲಿಂದಲಾದರೂ ಕೆಲಸ ಮಾಡುವ ಸ್ವಾತಂತ್ರ್ಯ ಇರುತ್ತದೆ. ನಮಗೆ ಬೇಕಾದಾಗ ರಜೆ ಹಾಕಿಕೊಳ್ಳಬಹುದು. ಇದಕ್ಕೆ ಯಾರ ಪರ್ಮಿಶನ್‌ನ ಅಗತ್ಯವೂ ಇರುವುದಿಲ್ಲ.

ಆದಾಯದ ಬಗ್ಗೆ ಮಾತನಾಡಿದ ಮಾನ್ಸೂನ್, " ಎಷ್ಟು ಹಣ ಸಿಗುತ್ತದೆ ಎನ್ನುವುದು ಅನಿರೀಕ್ಷಿತ. ಕೆಲವು ತಿಂಗಳುಗಳು ಅದ್ಭುತವಾಗಿರುತ್ತವೆ, ಕೆಲವು ತಿಂಗಳುಗಳು ಮಂದ. ಸ್ಯಾಲರಿ ಅಂತ ಫಿಕ್ಸ್‌ ಇಲ್ಲ. ಆದಾಯಕ್ಕೆ ಮಿತಿಯೂ ಇಲ್ಲ. ನೀವು ಎಷ್ಟು ಗಳಿಸುತ್ತೀರಿ ಎಂಬುದು ನಿಮ್ಮ ಕೌಶಲ್ಯಗಳು, ನಿಮ್ಮ ಕಟೆಂಟ್‌ ಮತ್ತು ನೀವು ಮಾಡುವ ಕೆಲಸ ನಿರ್ದರಿಸುತ್ತದೆ.

ಸಾಮಾಜಿಕ ಮಾಧ್ಯಮ ಹೇಗೆ ಪ್ರತಿಕ್ರಿಯಿಸಿತು?

ಈ ವೀಡಿಯೊ ಹೊರಗೆ ಬಂದಾಗಿನಿಂದ ಅನೇಕ ಜನರು ಇದರ ಬಗ್ಗೆ ತಮ್ಮ ಅಭಿಪ್ರಾಐ ಹೇಳುತ್ತಿದ್ದಾರೆ. ಕೆಲವರಿಗೆ ಕಾರ್ಪೊರೇಟ್ ಉದ್ಯೋಗವೇ ಸರಿ ಎನಿಸಿದರೆ ಇನ್ನು ಕೆಲವರಿಗೆ ಕಟೆಂಟ್‌ ಕ್ರಿಯೇಟರ್‌ ಲೈಫ್‌ ಇಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+