ಭಾರತದಲ್ಲಿ ಕೊರೊನಾವೈರಸ್ ಎಕ್ಸ್ಇ ಹೊಸ ರೂಪಾಂತರಿ ಪತ್ತೆ; ಆದರೂ ಭಯ ಬೇಕಿಲ್ಲ!

ನವದೆಹಲಿ, ಮೇ 3: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ನಡುವೆ ಎಕ್ಸ್ಇ ಹೊಸ ರೂಪಾಂತರಿ ಪತ್ತೆಯಾಗಿದೆ ಎಂದು ಭಾರತೀಯ SARS-CoV2 ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ (INSACOG) ಹೇಳಿದೆ.

ಕಳೆದ ಏಪ್ರಿಲ್ 25ರ ಮಂಗಳವಾರದಂದು ಬಿಡುಗಡೆಯಾದ ಕೊರೊನಾ ವೈರಸ್ ಬುಲೆಟಿನ್‌ನಲ್ಲಿ ಈ ಎಕ್ಸ್ಇ ರೂಪಾಂತರಯು ಯಾವ ಸ್ಥಳದಲ್ಲಿ ಪತ್ತೆಯಾಗಿದೆ ಎಂಬುದನ್ನು ಗುರುತಿಸಲಾಗಿಲ್ಲ.

ಕಳೆದ ವಾರಕ್ಕೆ ಹೋಲಿಸಿದರೆ, 12 ರಾಜ್ಯಗಳು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಆದರೆ 19 ರಾಜ್ಯಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯು ಇಳಿಕೆಯಾಗಿದೆ ಎಂದು INSACOG ಬುಲೆಟಿನ್ ಹೇಳಿದೆ. ಬುಲಿಟಿನ್‌ನಲ್ಲಿನ INSACOG ಶಂಕಿತ ಮರುಸಂಯೋಜಕ ಅನುಕ್ರಮ ಹೆಚ್ಚಿನ ವಿಶ್ಲೇಷಣೆಯಲ್ಲಿವೆ ಎಂದು ಹೇಳಲಾಗಿದೆ.

Coronavirus XE Variant Detected In India; But No Cluster So Far, Says INSACOG

ರೂಪಾಂತರಿಯ ಬಗ್ಗೆ ಆತಂಕಪಡಬೇಕಿಲ್ಲ: "BA.2.10 ಮತ್ತು BA.2.12 ಗಳು BA.2 ಉಪ-ತಳಿಗಳನ್ನು ಪತ್ತೆಹಚ್ಚಲಾಗಿದೆ. ಅನೇಕ ಹಳೆಯ BA.2 ರೂಪಾಂತರಿಗಳನ್ನು ಈ ಹೊಸ ತಳಿಗಳಿಗೆ ಮರು ವರ್ಗೀಕರಿಸಲಾಗಿದೆ. ಇಲ್ಲಿಯವರೆಗೆ ಈ ಉಪ-ತಳಿಗಳು ರೋಗದ ಹೆಚ್ಚಿದ ತೀವ್ರತೆಗೆ ಸಂಬಂಧಿಸಿವೆ ಎಂದು ವರದಿಯಾಗಿಲ್ಲ" ಎಂದು ಬುಲೆಟಿನ್ ಹೇಳಿದೆ. ಭಾರತದಾದ್ಯಂತ XE ರೂಪಾಂತರಿಯ ಯಾವುದೇ ಕ್ಲಸ್ಟರ್‌ಗಳು ವರದಿಗಳಿಲ್ಲ.

ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ: ಕಳೆದ ಏಪ್ರಿಲ್ 18ರ ಬುಲೆಟಿನ್‌ನಲ್ಲಿ ದೇಶದಲ್ಲಿ ಒಂದು XE ರೂಪಾಂತರದ ಪ್ರಕರಣವನ್ನು INSACOG ಉಲ್ಲೇಖಿಸಿತ್ತು. INSACOG ಸೆಂಟಿನೆಲ್ ಸೈಟ್‌ಗಳು ಮತ್ತು ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮಾದರಿಗಳನ್ನು ಸಂಗ್ರಹಿಸಿದ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಆ ಮೂಲಕ ದೇಶಾದ್ಯಂತ SARS-CoV-2 ಜೀನೋಮಿಕ್ ಸೀಕ್ವೆನ್ಸಿಂಗ್ ಮೇಲೆ ಕಣ್ಗಾವಲು ಇರಿಸಲಾಗಿದೆ. ಇತ್ತೀಚಿನ ಬುಲೆಟಿನ್ ಪ್ರಕಾರ, INSACOG ಒಟ್ಟು 2,43,957 ಮಾದರಿಗಳನ್ನು ಪರೀಕ್ಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+