ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಆಕ್ಟೀವ್ ಪ್ರಕರಣಗಳಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು

|
Google Oneindia Kannada News

ನವದೆಹಲಿ, ಜೂನ್ 10: ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ಆಕ್ಟೀವ್ ಪ್ರಕರಗಳಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ 9985 ಹೊಸ ಪ್ರಕರಣಗಳು ಪತ್ತೆಯಾಗಿದೆ. 279 ಮಂದಿ ಸಾವನ್ನಪ್ಪಿದ್ದಾರೆ.ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ 1,33,632 ಆಕ್ಟೀವ್ ಪ್ರಕರಣಗಳಿದ್ದು, 1,35,205 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ.

Recommended Video

Sriramulu taking a break at a small shop video goes viral | Oneindia Kannada

ದೇಶದಲ್ಲಿ 2.7 ಲಕ್ಷ ಮಂದಿ ಕೊರೊನಾ ಸೋಂಕಿತರಿದ್ದಾರೆ, 7,745 ಮಂದಿ ಸಾವನ್ನಪ್ಪಿದ್ದಾರೆ.ಅಮೆರಿಕ, ಬ್ರೆಜಿಲ್, ರಷ್ಯಾ, ಯುಕೆ ಬಳಿಕ, ಭಾರತದಲ್ಲಿ ಸತತ ಎಂಟನೇ ದಿನವೂ ಸೋಂಕಿತರ ಸಂಖ್ಯೆ 9 ಸಾವಿರಕ್ಕೇರಿದೆ.

ಭಾರತದಲ್ಲಿ ಹೊಸದಾಗಿ 9985 ಕೊರೊನಾ ಕೇಸ್ಭಾರತದಲ್ಲಿ ಹೊಸದಾಗಿ 9985 ಕೊರೊನಾ ಕೇಸ್

ಮಹಾರಾಷ್ಟ್ರದಲ್ಲಿ ಸಮುದಾಯ ಸೋಂಕು ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈಗಾಗಲೇ ಸೋಂಕಿತರ ಸಂಖ್ಯೆ 90 ಸಾವಿರ ದಾಟಿದ್ದು, ಮುಂಬೈ ಒಂದರಲ್ಲೇ 51 ಸಾವಿರ ಸೋಂಕಿತರಿದ್ದಾರೆ. ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಪ್ರದೇಶಗಳ ಪೈಕಿ ದೆಹಲಿ ಮೂರನೇ ಸ್ಥಾನದಲ್ಲಿದೆ. ಜುಲೈ ಅಂತ್ಯದಷ್ಟೊತ್ತಿಗೆ ಸೋಂಕಿತರ ಸಂಖ್ಯೆ ಐದು ಲಕ್ಷ ದಾಟಲಿದೆ ಎಂದು ಉಪ ಮುಖ್ಯಮಂತ್ರಿ ಮನಿಶ್ ಸಿಸೊಡಿಯಾ ಹೇಳಿದ್ದರು.

 Coronavirus Recoveries Overtake Active Cases In India For First Time

ಮಹಾರಾಷ್ಟ್ರದಲ್ಲಿ 2259, ರಾಜಸ್ಥಾನದಲ್ಲಿ 369, ಉತ್ತರ ಪ್ರದೇಶದಲ್ಲಿ 389, ಪಶ್ಚಿಮ ಬಂಗಾಳದಲ್ಲಿ 372, ಹರ್ಯಾಣದಲ್ಲಿ 355, ಗುಜರಾತ್‌ನಲ್ಲಿ 470, ಕರ್ನಾಟಕದಲ್ಲಿ 161 ಸೇರಿದಂತೆ ಒಟ್ಟು 9885 ಕೇಸ್ ದಾಖಲಾಗಿದೆ.

English summary
India's coronavirus tally soared to 2,76,583 this morning with 9,985 new patients recorded in the last 24 hours as the number of those who have recovered overtook the active COVID-19 cases in the country for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X