ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳ

|
Google Oneindia Kannada News

ಬೆಂಗಳೂರು, ಮಾರ್ಚ್ 18 : ಕೊರೊನಾ ಹರಡದಂತೆ ತಡೆಯಲು ಭಾರತೀಯ ರೈಲ್ವೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ತಡೆಯಲು ಫ್ಲಾಟ್‌ ಫಾರಂ ಟಿಕೆಟ್ ಬೆಲೆಯನ್ನು ಭಾರೀ ಹೆಚ್ಚಳ ಮಾಡಿದೆ.

ದೇಶದ 250 ರೈಲ್ವೆ ನಿಲ್ದಾಣದಲ್ಲಿ ರೂ. 10 ರೂ. ಇದ್ದ ಫ್ಲಾಟ್‌ ಫಾರಂ ಟಿಕೆಟ್ ದರವನ್ನು 50 ರೂ. ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಹೆಚ್ಚು ಜನರು ರೈಲ್ವೆ ನಿಲ್ದಾಣಕ್ಕೆ ಬರದಂತೆ ತಡೆಯಲು ಮುಂದಾಗಿದೆ. ಇದರಿಂದಾಗಿ ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಲಿದೆ.

ತುಮಕೂರು-ದಾವಣಗೆರೆ ನೇರ ರೈಲು; ಜನರಿಗೆ ಸಿಹಿ ಸುದ್ದಿ ತುಮಕೂರು-ದಾವಣಗೆರೆ ನೇರ ರೈಲು; ಜನರಿಗೆ ಸಿಹಿ ಸುದ್ದಿ

ಪಶ್ಚಿಮ ರೈಲ್ವೆ ವಲಯದ ಮುಂಬೈ, ವಡೋದರ, ಅಹಮದಾಬಾದ್, ರಾಜ್‌ಕೋಟ್ ಸೇರಿದಂತೆ 250 ನಿಲ್ದಾಣದಲ್ಲಿ ಹೊಸ ದರ ಜಾರಿಗೆ ಬಂದಿದೆ. ದಕ್ಷಿಣ ವಲಯದಲ್ಲಿ ಚೆನ್ನೈ ರೈಲು ನಿಲ್ದಾಣದಲ್ಲಿ ಮಾತ್ರ ದರ ಏರಿಕೆಯಾಗಿದೆ.

ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ? ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

Coronavirus Railways Cancels 22 Trains Hikes Platform Ticket Fare

ಮುಂಬೈ, ದೆಹಲಿ, ಸೊಲ್ಹಾಪುರ, ನಾಗ್ಪುರ, ಪುಣೆ ನಿಲ್ದಾಣದಲ್ಲಿಯೂ ಫ್ಲಾಟ್ ಫಾರಂ ಟಿಕೆಟ್ ದರವನ್ನು 50 ರೂ.ಗೆ ಹೆಚ್ಚಿಸಲಾಗಿದೆ. ಈಗಾಗಲೇ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಈಗ ದರ ಹೆಚ್ಚಳದಿಂದ ನಿಲ್ದಾಣದಲ್ಲಿಯೂ ಜನಸಂದಣಿ ಕಡಿಮೆಯಾಗಲಿದೆ.

ಕೊರೊನಾ; ಕರ್ನಾಟಕದಲ್ಲಿನ ಬಂದ್ ಒಂದು ವಾರ ವಿಸ್ತರಣೆ? ಕೊರೊನಾ; ಕರ್ನಾಟಕದಲ್ಲಿನ ಬಂದ್ ಒಂದು ವಾರ ವಿಸ್ತರಣೆ?

ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಸೆಂಟ್ರಲ್ ರೈಲ್ವೆ ದೂರದ ನಗರಗಳಿಗೆ ಸಂಚಾರ ನಡೆಸುವ 22 ರೈಲುಗಳನ್ನು ಮಾರ್ಚ್ 31ರ ತನಕ ಸ್ಥಗಿತಗೊಳಿಸಿದೆ. ಈಗಾಗಲೇ ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳು ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ನಷ್ಟವನ್ನು ಅನುಭವಿಸುತ್ತಿವೆ.

ವಿವಿಧ ರಾಜ್ಯ ಸರ್ಕಾರ ಮತ್ತು ಕೇಂದ್ರ ಆರೋಗ್ಯ ಇಲಾಖೆ ಹೆಚ್ಚು ಜನರು ಒಂದು ಕಡೆ ಸೇರಬೇಡಿ ಎಂದು ಸಲಹೆ ನೀಡಿವೆ. ಭಾರತದಲ್ಲಿ ಇದುವರೆಗೂ ಕೊರೊನಾದಿಂದಾಗಿ ಮೂವರು ಮೃತಪಟ್ಟಿದ್ದಾರೆ. ಮಂಗಳವಾರ ಹೊಸದಾಗಿ 12 ಪ್ರಕರಣಗಳು ಖಚಿತಗೊಂಡಿವೆ.

English summary
To avoid overcrowding Indian railways hiked platform tickets from Rs 10 to Rs 50 at 250 stations in the country. The Central Railways has suspended 22 long-distance trains till March 31. Govt asked people to refrain from gathering in large number at a place to contain the coronavirus spread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X