ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಳಿಗೂ ಕೊರೊನಾ ಕಂಟಕ; ಗ್ಯಾಂಗ್ರಿನ್ ಎಚ್ಚರಿಕೆ ಕೊಟ್ಟ ವೈದ್ಯರು

|
Google Oneindia Kannada News

ನವದೆಹಲಿ, ಜೂನ್ 02: ಕೊರೊನಾ ಸೋಂಕು ಇನ್ನಿತರ ಹಲವು ಆರೋಗ್ಯ ಸಮಸ್ಯೆಗಳಿಗೂ ನೆಪವಾಗುತ್ತಿದೆ. ಕೊರೊನಾ ಸೋಂಕಿನ ನಂತರ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಣಿಸಿಕೊಂಡಿತು. ಆನಂತರ ವೈಟ್ ಫಂಗಸ್, ಯೆಲ್ಲೋ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಶಿಲೀಂಧ್ರ ಸೋಂಕು ಶ್ವಾಸಕೋಶದ ಸಾಮರ್ಥ್ಯವನ್ನೇ ಕುಂಠಿತಗೊಳಿಸುತ್ತದೆ ಎನ್ನಲಾಗಿದೆ.

ಇದಕ್ಕಿಂತ ಹೆಚ್ಚಾಗಿ ಕೈಕಾಲುಗಳು, ಹೃದಯ ಹಾಗೂ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೂ ಕಾರಣವಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಇದೀಗ ಕರುಳಿನಲ್ಲಿಯೂ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಪ್ರಕರಣಗಳು ಒಂದರ ನಂತರ ಒಂದರಂತೆ ದಾಖಲಾಗುತ್ತಿದ್ದು, ಕೊರೊನಾಗೂ ಕರುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೂ ಸಂಬಂಧವಿದೆ ಎನ್ನುತ್ತಿದ್ದಾರೆ ವೈದ್ಯರು. ಈ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಗುರುತಿಸದೇ ಹೋದ ಪಕ್ಷದಲ್ಲಿ ಗ್ಯಾಂಗ್ರಿನ್ ಆಗಿ ಜೀವಕ್ಕೇ ಕಂಟಕವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕರುಳಿಗೆ ಹೇಗೆ ಕೊರೊನಾ ಕಂಟಕವಾಗುತ್ತಿದೆ? ಮುಂದೆ ಓದಿ...

 ಕರುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ

ಕರುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ

ಮುಂಬೈ ನಗರದ ಹಲವು ಆಸ್ಪತ್ರೆಗಳಲ್ಲಿ ಕರುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ಕಂಡುಬರುತ್ತಿವೆ. ತೀವ್ರ ಹೊಟ್ಟೆ ನೋವು ಎಂದು ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ಅವರ ಕರುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಮುಂಬೈನಲ್ಲಿ ಇಂಥ ಸುಮಾರು ಹನ್ನೆರಡು ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಇಸ್ರೇಲ್‌: ಫೈಜರ್ ಲಸಿಕೆ ಪಡೆದ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ ಮಯೋಕಾರ್ಡಿಟಿಸ್ಇಸ್ರೇಲ್‌: ಫೈಜರ್ ಲಸಿಕೆ ಪಡೆದ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ ಮಯೋಕಾರ್ಡಿಟಿಸ್

 ಕೊರೊನಾ ರೋಗಿಗಳಲ್ಲಿ ಗ್ಯಾಸ್ಟ್ರೊಇಂಟೆಸ್ಟಿನಲ್ ಸಮಸ್ಯೆ

ಕೊರೊನಾ ರೋಗಿಗಳಲ್ಲಿ ಗ್ಯಾಸ್ಟ್ರೊಇಂಟೆಸ್ಟಿನಲ್ ಸಮಸ್ಯೆ

ಕೊರೊನಾ ರೋಗಿಗಳಲ್ಲಿ ಗ್ಯಾಸ್ಟ್ರೊಇಂಟೆಸ್ಟಿನಲ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಸುಮಾರು 16-30% ಕೊರೊನಾ ರೋಗಿಗಳಿಗೆ ಕರುಳಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಅಧ್ಯಯನ ತಿಳಿಸಿವೆ. ಯಾವುದೇ ಲಕ್ಷಣಗಳನ್ನು ನೀಡದೇ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಿಬ್ಬೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳುವ ಅಪರೂಪದ ಸಮಸ್ಯೆ (ಮೆಸೆಂಟೆರಿಕ್ ಇಷೆಮಿಯಾ) ಇದಾಗಿದೆ. ನಿರ್ಲಕ್ಷ್ಯ ಮಾಡಿದರೆ ಮರಣಕ್ಕೂ ತುತ್ತಾಗಬಹುದು ಎಂದು ಹೇಳಿದ್ದಾರೆ.

 ಕೆಲ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅವಶ್ಯಕ

ಕೆಲ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅವಶ್ಯಕ

ಕೊರೊನಾ ಕಾರಣವಾಗಿ ಸಣ್ಣ ಕರುಳಿಗೆ ರಕ್ತ ಸಂಚಲನೆಗೆ ಅಡ್ಡಿಯಾಗುತ್ತದೆ. ಹೀಗಾಗಿ ರಕ್ತ ಹೆಪ್ಪುಗಟ್ಟುವಿಕೆಯಾಗುತ್ತದೆ. ಇದನ್ನು ಚಿಕಿತ್ಸೆ ಮಾಡದೇ ಬಿಟ್ಟರೆ ಗ್ಯಾಂಗ್ರಿನ್‌ಗೆ ಎಡೆಮಾಡಿಕೊಡಬಹುದು. ತಕ್ಷಣ ಸೂಕ್ತ ಚಿಕಿತ್ಸೆ ನಡೆಸಬೇಕಾಗುತ್ತದೆ. ಹೊಟ್ಟೆ ನೋವು ಎಂದು ಬಂದ ರೋಗಿಗಳಿಗೆ ಸಿಟಿ ಸ್ಕ್ಯಾನ್‌ ನಡೆಸಿದಾಗ ಕರುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದೆ. ಆದರೆ ಭಯ ಪಡುವಂತಿಲ್ಲ. ಇದಕ್ಕೆ ಸೂಕ್ತ ಔಷಧಿ ನೀಡಬೇಕು ಕೆಲವು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ.

ಮಕ್ಕಳಿಗೆ ಕೊರೊನಾ ಸೋಂಕು; ಕೇಂದ್ರದಿಂದ ಸಮಗ್ರ ಸಿದ್ಧತೆ ಭರವಸೆಮಕ್ಕಳಿಗೆ ಕೊರೊನಾ ಸೋಂಕು; ಕೇಂದ್ರದಿಂದ ಸಮಗ್ರ ಸಿದ್ಧತೆ ಭರವಸೆ

 ತೀವ್ರ ಹೊಟ್ಟೆ ನೋವು ಇದರ ಲಕ್ಷಣ

ತೀವ್ರ ಹೊಟ್ಟೆ ನೋವು ಇದರ ಲಕ್ಷಣ

ಕೊರೊನಾ ರೋಗಿಗಳಲ್ಲಿ ಅಥವಾ ಕೊರೊನಾದಿಂದ ಗುಣಮುಖರಾದವರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ತೀವ್ರ ಹೊಟ್ಟೆ ನೋವು ಇದರ ಪ್ರಮುಖ ಲಕ್ಷಣವಾಗಿರುತ್ತದೆ. ತಕ್ಷಣವೇ ಸೂಕ್ತ ಚಿಕಿತ್ಸೆ ನೀಡದಿದ್ದರೆ ಇದು ಅಪಾಯಕಾರಿಯಾಗಬಹುದು. ಜೊತೆಗೆ ಇದರೆಡೆಗೆ ವೈದ್ಯಕೀಯ ಕ್ಷೇತ್ರ ತುರ್ತು ನಿಗಾ ವಹಿಸಬೇಕಿದೆ. ಗುಜರಾತ್‌ನಲ್ಲಿ ಇಂಥ ನೂರು ಪ್ರಕರಣಗಳು ಕಂಡುಬಂದಿದ್ದು, ಗಮನ ನೀಡುವುದು ಅವಶ್ಯಕ ಎನ್ನಲಾಗಿದೆ.

English summary
Coronavirus patients are now having intestinal clots and gangrene
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X