ಲಾಕ್ ಡೌನ್ ರಿಲೀಫ್: ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್.?
ನವದೆಹಲಿ, ಏಪ್ರಿಲ್ 25: ಭಾರತದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಿದ್ದರೂ, ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
Recommended Video
ಮಧ್ಯರಾತ್ರಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದ ಅನ್ವಯ, ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಬಹುದಾಗಿದೆ. ಮುನಿಸಿಪಾಲ್ ಕಾರ್ಪೊರೇಷನ್ ಮತ್ತು ಮುನಿಸಿಪಾಲಿಟಿ ಲಿಮಿಟ್ ಒಳಗೆ ಬರುವ ಮತ್ತು ಆಯಾ ರಾಜ್ಯಗಳ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆ ಅಡಿ ಪರವಾನಗಿ ಪಡೆದಿರುವ ಎಲ್ಲಾ ಅಂಗಡಿಗಳನ್ನು ಓಪನ್ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಹಾಗಾದ್ರೆ, ಯಾವೆಲ್ಲ ಅಂಗಡಿಗಳು ಇಂದಿನಿಂದ ಓಪನ್ ಇರುತ್ತವೆ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಕೊರೆಯುತ್ತಿದ್ದರೆ, ಉತ್ತರ ಇಲ್ಲಿದೆ.. ಓದಿರಿ...

ಯಾವೆಲ್ಲ ಅಂಗಡಿಗಳು ಓಪನ್.?
* ನಗರ ಸಭೆ ಮತ್ತು ಪುರಸಭೆ ವ್ಯಾಪ್ತಿಗಳ ವಸತಿ ಪ್ರದೇಶಗಳಲ್ಲಿರುವ ನೆರೆ ಹೊರೆಯ ಅಂಗಡಿಗಳನ್ನು ತೆರೆಯಬಹುದು.
* ಸಲೂನ್, ಬ್ಯೂಟಿ ಪಾರ್ಲರ್ ಓಪನ್ ಮಾಡಬಹುದು.
* ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
*ಈ-ಕಾಮರ್ಸ್ ಮೂಲಕ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಮಾತ್ರ ಅವಕಾಶಕೊಡಲಾಗಿದೆ.

ಯಾವೆಲ್ಲ ಅಂಗಡಿಗಳು ಬಂದ್.?
* ಮಲ್ಟಿ ಬ್ರ್ಯಾಂಡ್ ಮತ್ತು ಸಿಂಗಲ್ ಬ್ರ್ಯಾಂಡ್ ಮಾಲ್ ಗಳು ಬಂದ್.
* ಮಾರ್ಕೆಟ್ ಕಾಂಪ್ಲೆಕ್ಸ್ ತೆರೆಯುವಂತಿಲ್ಲ.
* ಸಿನಿಮಾ ಹಾಲ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್, ಬಾರ್ ತೆಗೆಯುವ ಹಾಗಿಲ್ಲ.
* ದೊಡ್ಡ ದೊಡ್ಡ ಅಂಗಡಿಗಳು, ಮಾರುಕಟ್ಟೆ ಪ್ರದೇಶಗಳು ಓಪನ್ ಮಾಡುವ ಹಾಗಿಲ್ಲ.

ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು.?
* ಅಂಗಡಿಗಳು 50% ಕೆಲಸಗಾರರೊಂದಿಗೆ ಮಾತ್ರ ಕಾರ್ಯ ನಿರ್ವಹಿಸಬೇಕು.
* ಎಲ್ಲಾ ಕೆಲಸಗಾರರು ಮಾಸ್ಕ್ ಧರಿಸಬೇಕು.
* ಕಡ್ಡಾಯವಾಗಿ ಎಲ್ಲರೂ ಸಾಮಾಜಿಕ ಅಂತರ ಪಾಲಿಸಬೇಕು.

ಯಾವುದಕ್ಕೆ ವಿನಾಯಿತಿ ಇಲ್ಲ.?
* ಹಾಟ್ ಸ್ಪಾಟ್ ಮತ್ತು ಕಂಟೇನ್ಮೆಂಟ್ ಝೋನ್ ಗಳಲ್ಲಿ ಯಾವುದೇ ವಿನಾಯಿತಿ ಇಲ್ಲ.
* ಮದ್ಯದ ಅಂಗಡಿಗಳು ತೆರೆಯುವುದಿಲ್ಲ.












Click it and Unblock the Notifications