Get Updates
Get notified of breaking news, exclusive insights, and must-see stories!

ಜನತಾ ಕರ್ಫ್ಯೂಗೂ ಮುನ್ನ ಜನತೆಗೆ ಶುಭ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ನವದೆಹಲಿ, ಮಾರ್ಚ್ 21: ಕೊರೊನಾವೈರಸ್ ಸೋಂಕು ಹರಡುವ ಭೀತಿ ಎಲ್ಲೆಡೆ ಹೆಚ್ಚಾಗುತ್ತಿದ್ದಂತೆ ಮಾಸ್ಕ್, ಸ್ಯಾನಿಟೈಸರ್ ಮಾರಾಟವೂ ಹೆಚ್ಚಾಗಿದೆ. ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವರು ಹೇಳಿದರೂ, ಹ್ಯಾಂಡ್ ಸ್ಯಾನಿಟೈಸರ್ ಬಳಕೆಯಂತೂ ಅಗತ್ಯವಾಗಿದೆ. ಅನೇಕ ಕಡೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ದುಪ್ಪಟ್ಟು ಬೆಲೆಗೆ ಮಾರುವುದು ಕಂಡು ಬಂದಿದ್ದರಿಂದ ಸರ್ಕಾರ ಇದಕ್ಕೆಲ್ಲ ಕಡಿವಾಣ ಹಾಕಲು ಮಾರ್ಗೋಪಾಯ ಕಂಡುಕೊಂಡಿದೆ.

ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿರುವ ಸರ್ಕಾರ, ದರವನ್ನು ನಿಗದಿ ಮಾಡಿದೆ. ಸರ್ಜಿಕಲ್ ಮಾಸ್ಕ್ ಒಂದಕ್ಕೆ ರೂ.10, 200 ಎಂಎಲ್ ಸ್ಯಾನಿಟೈಸರ್ ಗೆ ರೂ.100 ದರವನ್ನು ನಿಗದಿ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.

Coronavirus: Government ficed price of face masks and Hand sanitisers

ಕೇಂದ್ರ ಸರ್ಕಾರ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ನಂತೆ, 2 ಪ್ಲೇ ಮಾಸ್ಕ್ 8 ರೂ, 3 ಪ್ಲೇ ಸರ್ಜಿಕಲ್ ಮಾಸ್ಕ್ 10ರೂ ಗಿಂತಲೂ ಹೆಚ್ಚು ದರದಲ್ಲಿ ಮಾರುವಂತಿಲ್ಲ. 200 ಎಂಎಲ್ ಸ್ಯಾನಿಟೈಸರ್ 100 ರು ದರದಲ್ಲೇ ಮಾರಾಟ ಮಾಡಬೇಕು ಎಂದು ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ದುಪ್ಪಟ್ಟು ದರದಲ್ಲಿ ಮಾಸ್ಕ್, ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ ಅನೇಕ ಮೆಡಿಕಲ್ ಶಾಪ್, ಮಳಿಗೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ರಮ ದಾಸ್ತಾನು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. ಒಂದು ವೇಳೆ ಈ ನಿಯಮ ಮೀರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡರೆ ಅಂಗಡಿಯ ಲೈಸೆನ್ಸ್ ರದ್ದುಗೊಳಿಸಿ, ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಈ ಆದೇಶ ಜೂನ್ 30, 2020ರ ವರೆಗೆ ಜಾರಿಯಲ್ಲಿರುತ್ತದೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+