• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಒಂದೇ ದಿನ 11 ಸಾವಿರ ಕೊರೊನಾ ಸೋಂಕಿತರು ಪತ್ತೆ

|

ನವದೆಹಲಿ, ಜೂನ್ 13: ಭಾರತದಲ್ಲಿ ಒಂದೇ ದಿನದಲ್ಲಿ 11 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

   6 members of a single family from Bengaluru tested corona positive | Oneindia Kannada

   ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು 3 ಲಕ್ಷದ 8 ಸಾವಿರದ 993ಕ್ಕೇರಿದ್ದು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಎಂದು ಕೊರೋನಾ ವೈರಸ್ ಅಂಕಿಅಂಶ ವೆಬ್ ಸೈಟ್ ವರ್ಲ್ಡೊಮೀಟರ್ ತಿಳಿಸಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 1 ಲಕ್ಷದ 45 ಸಾವಿರದ 779, ಇದುವರೆಗೆ 1 ಲಕ್ಷದ 54 ಸಾವಿರದ 329 ಮಂದಿ ಗುಣಮುಖರಾಗಿದ್ದರೆ ಒಬ್ಬ ರೋಗಿ ವಲಸೆ ಹೋಗಿದ್ದಾರೆ.

   ಬೆಂಗಳೂರಲ್ಲಿ ಒಂದೇ ಕುಟುಂಬದ 6 ಮಂದಿಗೆ ಕೊರೊನಾ ಸೋಂಕು

   ಇಲ್ಲಿಯವರೆಗೆ ಶೇಕಡಾ 49.9ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ. ಒಟ್ಟು ಕೇಸುಗಳಲ್ಲಿ ವಿದೇಶಿಗರು ಸೇರಿದ್ದಾರೆ. ಇಂದು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಹೊಸ 386 ಸಾವು ಪ್ರಕರಣಗಳಲ್ಲಿ, 129 ದೆಹಲಿಯಲ್ಲಿ, 127 ಮಹಾರಾಷ್ಟ್ರದಲ್ಲಿ, 30 ಗುಜರಾತ್‌ನಲ್ಲಿ, ಉತ್ತರಪ್ರದೇಶದಲ್ಲಿ 20, ತಮಿಳುನಾಡಿನಲ್ಲಿ 18, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ತಲಾ 9 ಸಾವುಗಳು ಸಂಭವಿಸಿವೆ.

   ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ 7, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ತಲಾ 6, ಪಂಜಾಬ್‌ನಲ್ಲಿ 4, ಅಸ್ಸಾಂನಲ್ಲಿ 2, ಕೇರಳ, ಜಮ್ಮು ಮತ್ತು ಕಾಶ್ಮೀರ ಮತ್ತು ಒಡಿಶಾದಲ್ಲಿ ತಲಾ 1 ಸಾವು ಸಂಭವಿಸಿದೆ.

   ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶನಿವಾರ 3 ಲಕ್ಷ ಗಡಿ ದಾಟಿದ್ದು ಇಂದು ಒಂದೇ ದಿನ 11 ಸಾವಿರದ 458 ಮಂದಿ ಸೋಂಕಿತರ ಪತ್ತೆಯಾಗಿದೆ. ಸಾವಿನ ಸಂಖ್ಯೆ 8 ಸಾವಿರದ 884ಕ್ಕೇರಿದ್ದು 386 ಮಂದಿ ಹೊಸ ಸೋಂಕಿತರ ಮೃತವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.

   English summary
   India has recorded the highest single-day jump so far of 11,458 fresh cases, pushing the total number of cases to 3,08,993, the latest data from the Union Health Ministry shows.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X