ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಅಟಲ್ ಬಿಹಾರಿ ವಾಜಪೇಯಿ ಸೋದರ ಸೊಸೆ ನಿಧನ

|
Google Oneindia Kannada News

ನವದೆಹಲಿ, ಏಪ್ರಿಲ್ 27: ಕಾಂಗ್ರೆಸ್ ಹಿರಿಯ ಮುಖಂಡೆ ಹಾಗೂ ಮಾಜಿ ಸಂಸದೆ ಕರುಣಾ ಶುಕ್ಲಾ ಅವರು ಕೊರೊನಾ ಸೋಂಕಿನಿಂದ ಮಂಗಳವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 70 ವರ್ಷವಾಗಿತ್ತು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆಯೂ ಆಗಿದ್ದ ಅವರು ಛತ್ತೀಸ್‌ಗಡದಲ್ಲಿನ ರಾಯ್ಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ದೆಹಲಿ: ಕೊರೊನಾ ಸೋಂಕಿನಿಂದ ಮಾಜಿ ಸಚಿವ ಡಾ ಎ ಕೆ ವಾಲಿಯಾ ವಿಧಿವಶ ದೆಹಲಿ: ಕೊರೊನಾ ಸೋಂಕಿನಿಂದ ಮಾಜಿ ಸಚಿವ ಡಾ ಎ ಕೆ ವಾಲಿಯಾ ವಿಧಿವಶ

ಶುಕ್ಲಾ ಅವರು ಬಿಜೆಪಿಯಿಂದ 1993ರಲ್ಲಿ ಮೊದಲ ಬಾರಿ ಶಾಸಕರಾಗಿದ್ದು, ಛತ್ತೀಸ್‌ಗಡದಲ್ಲಿ ಪಕ್ಷದ ಹಿರಿಯ ಮುಖಂಡೆ ಎನಿಸಿಕೊಂಡಿದ್ದರು. ಈ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆಯೂ ಆಗಿದ್ದರು.

Coronavirus Atal Bihari Vajpayee Niece Karuna Shukla Passed Away

32 ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿ 2013ರಂದು ಬಿಜೆಪಿ ತೊರೆದು ಫೆಬ್ರವರಿ 2014ರಲ್ಲಿ ಕಾಂಗ್ರೆಸ್ ಸೇರಿದ್ದರು. 2018ರ ಛತ್ತೀಸ್‌ಗಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಿಎಂ ರಮಣ ಸಿಂಗ್ ವಿರುದ್ಧ ಕಣಕ್ಕಿಳಿದು ಸೋಲು ಕಂಡಿದ್ದರು.

English summary
Former PM Atal Behari Vajpayee's niece and and Congress leader, Karuna Shukla, died of COVID-19 in Raipur on Tuesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X