18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಬೇಕಿದ್ದಲ್ಲಿ CoWin ನೋಂದಣಿ ಕಡ್ಡಾಯ
ನವದೆಹಲಿ, ಏಪ್ರಿಲ್ 25: ಭಾರತದಲ್ಲಿ 18 ವರ್ಷದಿಂದ 45 ವರ್ಷದ ಜನರು ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಕಡ್ಡಾಯವಾಗಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ಥಳದಲ್ಲೇ ಲಸಿಕೆ ಪಡೆಯಲು ಹೆಸರು ನೋಂದಣಿ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಈ ನಿಮಯ ಮೊದಲಿನಂತೆಯೇ ಮುಂದುವರಿಯಲಿದ್ದು, 18 ವರ್ಷ ಮೇಲ್ಪಟ್ಟವರು ಮಾತ್ರ ಪೂರ್ವ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆಗೆ ಹೆಸರು ನೋಂದಣಿ ಮಾಡುವುದು ಹೇಗೆ?
ಕಳೆದ ಜನವರಿ 16ರಂದು ಮೊದಲ ಬಾರಿಗೆ ಕೊರೊನಾವೈರಸ್ ಲಸಿಕೆ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ದೇಶದಲ್ಲಿ ಈವರೆಗೂ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್-19 ಲಸಿಕೆ ಅಭಿಯಾನ ಆರಂಭವಾಗಲಿದೆ.

ಹೆಸರು ನೋಂದಣಿ ಪ್ರಕ್ರಿಯೆ ಆರಂಭ:
ಕೊವಿಡ್-19 ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಕ್ಕೆ ಮೂರು ದಿನ ಮೊದಲೇ ಲಸಿಕೆಗೆ ಹೆಸರು ನೋಂದಣಿ ಕಾರ್ಯ ಆರಂಭವಾಗುತ್ತದೆ. ಏಪ್ರಿಲ್ 28ರಂದು CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.
ದೇಶದಲ್ಲಿ ಒಂದು ಬಾರಿ ಎಲ್ಲ ವಯಸ್ಕರಿಗೆ ಕೊರೊನಾವೈರಸ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾದರೆ ಅತಿಹೆಚ್ಚು ಬೇಡಿಕೆ ಸೃಷ್ಟಿಯಾಗಲಿದೆ. ಜನದಟ್ಟಣೆ ಹಾಗೂ ಬೇಡಿಕೆ ನಿಯಂತ್ರಿಸುವ ಉದ್ದೇಶದಿಂದ CoWin ಅಪ್ಲಿಕೇಷನ್ ಮೂಲಕ ಹೆಸರು ನೋಂದಾಯಿಸುವುದಕ್ಕೆ ಕಡ್ಡಾಯಗೊಳಿಸಲಾಗಿದೆ.
ಕೊರೊನಾ ಲಸಿಕೆ ನೋಂದಣಿ ಪ್ರಕ್ರಿಯೆ
ಕೊರೊನಾ ಲಸಿಕೆಗಾಗಿ ನಿಮ್ಮ ಹೆಸರು ನೋಂದಾಯಿಸಲು ನಿಮಗೆ ಪ್ಯಾನ್ ಕಾರ್ಡ್, ಪಿಂಚಣಿ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್ ಅಥವಾ ಚಾಲನಾ ಪರವಾನಗಿಯಂತಹ ಗುರುತಿನ ಚೀಟಿಯ ಅಗತ್ಯವಿದೆ. ಈ ಪುರಾವೆಗಳು ಮಾತ್ರ ಅದಕ್ಕೆ ಮಾನ್ಯತೆ ಹೊಂದಿರುತ್ತವೆ. ಆನ್‌ಲೈನ್ ನೋಂದಣಿಯನ್ನು ಪೋಸ್ಟ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು SMS ಬರುತ್ತದೆ. ಅದರಲ್ಲಿ ಲಸಿಕೆ ನೀಡುವ ದಿನಾಂಕ, ಸ್ಥಳ ಮತ್ತು ಸಮಯವನ್ನು ತಿಳಿಸಲಾಗಿರುತ್ತದೆ.
ಕೊವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್ ವರ್ಕ್ (Co-WIN) ವ್ಯವಸ್ಥೆ"- ಈ ಡಿಜಿಟಲೈಸ್ಡ್ ಪ್ಲಾಟ್ ಫಾರ್ಮ್ ನ್ನು ನೈಜ-ಸಮಯದ ಆಧಾರದ ಮೇಲೆ ಕೊರೊನಾವೈರಸ್ ಲಸಿಕೆಗಾಗಿ ಸೇರ್ಪಡೆಗೊಂಡ ಫಲಾನುಭವಿಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.












Click it and Unblock the Notifications