ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ತೀರಾ ಕಡಿಮೆ

|
Google Oneindia Kannada News

ನವದೆಹಲಿ, ಜೂನ್ 19: ಕೋವಿಡ್ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೊನಾ ಲಸಿಕೆ ಪಡೆದ ಬಳಿಕ ಒಂದೊಮ್ಮೆ ಸೋಂಕು ತಗುಲಿದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಶೇ. 75-80ರಷ್ಟು ಕಡಿಮೆಯಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ ಎಂದು ಕೇಂದ್ರ ತಿಳಿಸಿದೆ.

ಸಾಪ್ತಾಹಿಕ ಪ್ರಕರಣದ ಪಾಸಿಟಿವಿಟಿ ದರದಲ್ಲಿ ಶೇಕಡಾ 81 ರಷ್ಟು ತೀವ್ರ ಕುಸಿತ ಕಂಡುಬಂದಿದೆ.ಇದು ಏಪ್ರಿಲ್ 30- ಮೇ 6 ನಡುವೆ ಶೇ. 21.6 ರಷ್ಟಿತ್ತು ಎಂದು ಸರ್ಕಾರ ತಿಳಿಸಿದೆ. 513 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಕಡಿಮೆಯಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Corona Vaccine

ಕೋವಿಡ್ ಲಸಿಕೆ ಪಡೆಯದವರಿಗೆ ಹೋಲಿಸಿದರೆ, ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಶೇ.75-80 ರಷ್ಟು ಕಡಿಮೆಯಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಭಾರತದಲ್ಲಿ 5 ತಿಂಗಳಿನಲ್ಲಿ ಶೇ.5ರಷ್ಟು ಪ್ರಜೆಗಳಿಗಷ್ಟೇ ಕೊರೊನಾವೈರಸ್ ಲಸಿಕೆ!ಭಾರತದಲ್ಲಿ 5 ತಿಂಗಳಿನಲ್ಲಿ ಶೇ.5ರಷ್ಟು ಪ್ರಜೆಗಳಿಗಷ್ಟೇ ಕೊರೊನಾವೈರಸ್ ಲಸಿಕೆ!

ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಶೇ. 8 ರಷ್ಟು ಆಮ್ಲಜನಕ ಬೆಂಬಲದ ಅಗತ್ಯತೆ ಬರಬಹುದು ಮತ್ತು ಐಸಿಯುಗೆ ದಾಖಲಾಗುವ ಅಪಾಯ ಕೇವಲ ಶೇ. 6 ರಷ್ಟಿದೆ ಎಂದು ನೀತಿ ಆಯೋಗದ ಸದಸ್ಯ(ಆರೋಗ್ಯ) ಡಾ. ವಿ. ಕೆ.ಪೌಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಮೇ 7 ರಂದು ಗರಿಷ್ಠ ಪ್ರಕರಣಗಳು ವರದಿಯಾದಾಗಿನಿಂದ ದೈನಂದಿನ ಹೊಸ ಪ್ರಕರಣಗಳಲ್ಲಿ ಬಹುತೇಕ ಶೇ. 85 ರಷ್ಟು ಕುಸಿತ ಕಂಡುಬಂದಿದೆ. ಮೇ 10 ರಂದು ಗರಿಷ್ಠ ವರದಿ ನಂತರ ಒಟ್ಟು ಸಕ್ರಿಯ ಕೋವಿಡ್-19 ಪ್ರಕರಣಗಳಲ್ಲಿ ಶೇ. 78.6 ರಷ್ಟು ಕುಸಿತ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 5 ತಿಂಗಳೇ ಕಳೆದು ಹೋಗಿದೆ. ಇಷ್ಟು ಅವಧಿಯಲ್ಲಿ ದೇಶದ ವಯಸ್ಕರ ಜನಸಂಖ್ಯೆಯ ಶೇ.5ರಷ್ಟು ಫಲಾನುಭವಿಗಳಿಗೆ ಮಾತ್ರ ಸಂಪೂರ್ಣವಾಗಿ ಕೊವಿಡ್-19 ಲಸಿಕೆ ನೀಡಲಾಗಿದೆ.

ಶುಕ್ರವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾವೈರಸ್ ಲಸಿಕೆ ವಿತರಣೆ ಬಗ್ಗೆ ಮಾಹಿತಿ ನೀಡಿತು. ದೇಶದಲ್ಲಿನ 94 ಕೋಟಿ ವಯಸ್ಕರ ಪೈಕಿ 5.04 ಕೋಟಿ ಜನರಿಗೆ ಮಾತ್ರ ಎರಡೂ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.

ದೇಶದಲ್ಲಿ ಈವರೆಗೂ 27,20,72,645 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಒಟ್ಟು ಜನಸಂಖ್ಯೆಯ ನಾಲ್ಕನೇ ಒಂದು ಭಾಗದ ಜನರು ಕನಿಷ್ಠ ಒಂದು ಡೋಸ್ ಕೊವಿಡ್-19 ಲಸಿಕೆಯನ್ನು ಪಡೆದುಕೊಂಡಿದೆ.

ಜಗತ್ತಿನಲ್ಲಿ ಎರಡೂ ಡೋಸ್ ಲಸಿಕೆ ವಿತರಿಸಿದ ಜನಸಂಖ್ಯೆಯನ್ನು ಗಮನಿಸಿದಾಗ ಭಾರತ 81ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಜಗತ್ತಿನ 80 ದೇಶಗಳು ಭಾರತಕ್ಕಿಂತ ಮುಂದಿವೆ.

English summary
Citing first studies from India from healthcare workers, top officials on Friday underlined that Covid vaccines offer substantial risk reduction against hospitalisation, ICU care, and the need for oxygen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X